ಬಾಗಲಕೋಟೆಯಲ್ಲಿ ಅಪ್ಪು ಅಭಿಮಾನಿ ಬಳಗದಿಂದ ನೇತ್ರದಾನ ಅಭಿಯಾನ; ಒಂದೇ ದಿನ ನೂರಕ್ಕೂ ಹೆಚ್ಚು ಜನರಿಂದ ಸಹಿ

| Updated By: sandhya thejappa

Updated on: Jun 21, 2022 | 9:30 AM

ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಈಗಲೂ ಹಳ್ಳಿ ನಗರ-ಪಟ್ಟಣಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಬಾಗಲಕೋಟೆ ಜಿಲ್ಲೆಯ ಅಮೀನಗಢ ಪಟ್ಟಣ.

ಬಾಗಲಕೋಟೆಯಲ್ಲಿ ಅಪ್ಪು ಅಭಿಮಾನಿ ಬಳಗದಿಂದ ನೇತ್ರದಾನ ಅಭಿಯಾನ; ಒಂದೇ ದಿನ ನೂರಕ್ಕೂ ಹೆಚ್ಚು ಜನರಿಂದ ಸಹಿ
ಪುನೀತ್ ರಾಜ್​ಕುಮಾರ್
Follow us on

ಬಾಗಲಕೋಟೆ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ನಿಧನರಾಗಿ ಬರೋಬ್ಬರಿ ಎಂಟು ತಿಂಗಳಾಯಿತು. ಆದರೂ ಅಪ್ಪು ಮೇಲಿನ ಅಭಿಮಾನ ಸ್ಮರಣೆ, ಗೌರವ ಶ್ರದ್ಧಾಂಜಲಿ ಕಾರ್ಯ, ಅವರ ಹೆಸರಲ್ಲಿ ಸಾಮಾಜಿಕ ಕಾರ್ಯಗಳು ಮಾತ್ರ ಕಡಿಮೆಯಾಗಿಲ್ಲ. ಅಪ್ಪು ಹೆಸರಿನಲ್ಲಿ ಅಭಿಮಾನಿಗಳು (Fans) ಈಗಲೂ ಹಳ್ಳಿ ನಗರ-ಪಟ್ಟಣಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಬಾಗಲಕೋಟೆ ಜಿಲ್ಲೆಯ ಅಮೀನಗಢ ಪಟ್ಟಣ. ಜಿಲ್ಲೆಯಲ್ಲಿ ಪುನೀತ್ ಅಭಿಮಾನಿಗಳ ಸಂಖ್ಯೆ ತುಂಬಾನೇ ಹೆಚ್ಚಾಗಿದೆ. ಅಪ್ಪು ಇಲ್ಲ ಅಂದಾಗ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಬಾದಾಮಿ ತಾಲೂಕಿನ ಹೊಸೂರಿನಲ್ಲಿ ನೆಚ್ಚಿನ ನಟನ ನೆನಪಿಗಾಗಿ ಅಭಿಮಾನಿಗಳು ಅಪ್ಪು ಸಮಾಧಿಯನ್ನು ಕಟ್ಟಿಸಿದ್ದಾರೆ. ಹೊಸೂರು ಗ್ರಾಮದ ಶ್ರೀಧರ್ ಎಂಬ ಯುವಕ ತನ್ನ ಮದುವೆಯಲ್ಲಿ ಪುನೀತ್ ಭಾವಚಿತ್ರವನ್ನು ಇಟ್ಟುಕೊಂಡು ಅವರ ಆಶೀರ್ವಾದದೊಂದಿಗೆ ಮದುವೆಯಾಗಿದ್ದರು. ಇದೀಗ ಅಮೀನಗಡ ಪಟ್ಟಣದಲ್ಲಿ ದಾಖಲೆಯ ಪ್ರಮಾಣದ ನೇತ್ರದಾನ ಮಾಡಿ ಅಪ್ಪು ಮೇಲಿನ ಅಭಿಮಾನ ಮೆರೆಯಲಾಗಿದೆ.

ಅಮೀನಗಢ ಪುನೀತ್ ಅಭಿಮಾನಿ ‌ಬಳಗ ನಡೆಸಿದ ನೇತ್ರದಾನ ಅಭಿಯಾನಕ್ಕೆ ಒಂದೇ ದಿನ ನೂರಕ್ಕೂ ಜನರು ಹೆಸರು ನೊಂದಾಯಿಸಿದ್ದಾರೆ. ಪುನೀತ್ ಅಭಿಮಾನಿಗಳು ಅಮೀನಗಢ ಪಟ್ಟಣದ ಬಿಜಿ ರೋಡ್, ಎಂಜಿ ರೋಡ್ ಸೇರಿದಂತೆ ಮಾರ್ಕೆಟ್ ರೋಡ್ ಇನ್ನಿತರ ಪ್ರದೇಶಗಳಲ್ಲಿ ಸಂಚರಿಸಿದ್ದಾರೆ. ಆಗ ವಯಸ್ಕರು, ಪುರುಷರು, ಮಹಿಳೆಯರು, ಯುವಕರು ಸೇರಿ ಒಂದೇ ದಿನ ನೂರಕ್ಕೂ ಹೆಚ್ಚು ಜನರು ನೇತ್ರದಾನಕ್ಕೆ ಮುಂದಾಗಿದ್ದು, ಸಹಿ ಹಾಕಿದ್ದಾರೆ.

ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಇಬ್ಬರು ಪ್ರಮುಖ ಶೂಟರ್​​ಗಳನ್ನು ಬಂಧಿಸಿದ ದೆಹಲಿ ಪೊಲೀಸ್

ಇದನ್ನೂ ಓದಿ
Rahul Gandhi: ಅನುಮತಿ ಪಡೆಯದೆ ಲಂಡನ್​ಗೆ ಹೋದ ಸಂಸದ ರಾಹುಲ್ ಗಾಂಧಿ; ಪಕ್ಷದ ವತಿಯಿಂದ ಬಂತು ಪ್ರತಿಕ್ರಿಯೆ: ಏನದು? ಮತ್ತದೇ ಯಡವಟ್ಟು!
ರಸ್ತೆ ಬದಿಯ ಹೋಟೆಲ್​ನಲ್ಲಿ ಊಟ ಮಾಡಿದ ಈ ಸ್ಟಾರ್​ ನಟನನ್ನು ಗುರುತಿಸುತ್ತೀರಾ? ಇಲ್ಲಿದೆ ವೈರಲ್ ವಿಡಿಯೋ
ಸ್ಟೇಜ್​ ಮೇಲೆ ಕೆಜಿಎಫ್​2 ಡೈಲಾಗ್ ಹೊಡೆದ ಎಸ್.ಡಿ.ಪಿ.ಐ ಮುಖಂಡ
IPL 2022 Final Tickets: ಐಪಿಎಲ್ ಫೈನಲ್ ಮ್ಯಾಚ್ ಟಿಕೆಟ್ ಖರೀದಿಸುವುದು ಹೇಗೆ?

ಈ ಬಗ್ಗೆ ಮಾತಾಡಿದ ಪುನೀತ್ ಅಭಿಮಾನಿ ಬಳಗದ ಮಲ್ಲಿಕಾರ್ಜುನ ಬಂಡಿ ‘ನಾವು ಪುನೀತ್ ಮೇಲಿನ ಅಭಿಮಾನದಿಂದ ನೇತ್ರದಾನ ಅಭಿಯಾನ ಶುರು ಮಾಡಿದ್ದೇವೆ. ಅಪ್ಪು ತಾವು ಮಾಡಿದ ಯಾವುದೇ ಸಹಾಯ ಯಾರಿಗೂ ತಿಳಿಯದಂತೆ ಪ್ರಚಾರ ಬಯಸದೆ ಮಾಡಿದ ಮಹಾನ್ ವ್ಯಕ್ತಿ. ಅವರು ಕೇವಲ ನಟರಾಗಿ ಅಷ್ಟೇ ಅಲ್ಲ, ಒಬ್ಬ ಮಾನವತಾವಾದಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಅದಕ್ಕಾಗಿ ಅವರ ಆದರ್ಶದ ಪ್ರೇರಣೆ ಮೇರೆಗೆ ನಾವು ಈ ಅಭಿಯಾನ ಶುರು ಮಾಡಿದ್ದೇವೆ ಎಂದರು.

ವರದಿ: ರವಿ ಮೂಕಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ