ಸಿನಿಮಾ ಬಗ್ಗೆ ಇದ್ದ ಈ ತಪ್ಪು ಗ್ರಹಿಕೆ ಈ ವರ್ಷ ಮಾಯವಾಯ್ತು
Movie duration: 90ರ ದಶಕದಲ್ಲಿ ಅನೇಕ ಸಿನಿಮಾಗಳು ಮೂರು ಗಂಟೆಗಳು ಇದ್ದ ಉದಾಹರಣೆ ಇದೆ. ಆದರೆ, ಕಳೆದ ಒಂದು ದಶಕದ ಸಿನಿಮಾ ನೋಡಿದರೆ ಬಹುತೇಕ ಚಿತ್ರಗಳ ಸಮಯವು ಎರಡು ಗಂಟೆಯಿಂದ ಎರಡೂವರೆ ಗಂಟೆ ಇದೆ. ಇದು ಸ್ಟ್ಯಾಂಡರ್ಡ್ ಎನಿಸಿಬಿಟ್ಟಿದೆ. ಆದರೆ, ಈ ವರ್ಷವು ಇದನ್ನು ಬದಲಿಸೋ ಸೂಚನೆ ಕೊಟ್ಟಿದೆ. ‘ಡೆವಿಲ್’,‘ಧುರಂಧರ್’ ಸೇರಿದಂತೆ ಹಲವು ಸಿನಿಮಾಗಳು ಈ ನಿಯಮವನ್ನು ಮುರಿದಿವೆ.

90ರ ದಶಕದಲ್ಲಿ ಅನೇಕ ಸಿನಿಮಾಗಳು ಮೂರು ಗಂಟೆಗಳು ಇದ್ದ ಉದಾಹರಣೆ ಇದೆ. ಆದರೆ, ಕಳೆದ ಒಂದು ದಶಕದ ಸಿನಿಮಾ ನೋಡಿದರೆ ಬಹುತೇಕ ಚಿತ್ರಗಳ ಸಮಯವು ಎರಡು ಗಂಟೆಯಿಂದ ಎರಡೂವರೆ ಗಂಟೆ ಇದೆ. ಇದು ಸ್ಟ್ಯಾಂಡರ್ಡ್ ಎನಿಸಿಬಿಟ್ಟಿದೆ. ಆದರೆ, ಈ ವರ್ಷವು ಇದನ್ನು ಬದಲಿಸೋ ಸೂಚನೆ ಕೊಟ್ಟಿದೆ. ‘ಡೆವಿಲ್’, ‘ಧುರಂಧರ್’ ಸೇರಿದಂತೆ ಹಲವು ಸಿನಿಮಾಗಳು ಈ ನಿಯಮವನ್ನು ಮುರಿದಿವೆ.
ಈಗಿನ ಕಾಲದಲ್ಲಿ ಮನರಂಜನೆಗೆ ನಾನಾ ಆಯ್ಕೆಗಳಿವೆ. ಹೀಗಾಗಿ, ಸಿನಿಮಾ ನೋಡಿಯೇ ಮನರಂಜನೆ ಪಡೆಯಬೇಕು ಎಂಬುದು ಯಾರಿಗೂ ಇಲ್ಲ. ಮೊದಲಿನಷ್ಟು ತಾಳ್ಮೆಯೂ ಜನರಿಗೆ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಕಾರಣದಿಂದಲೇ ಸಿನಿಮಾದ ಅವಧಿಯನ್ನು ಎರಡು ಗಂಟೆಯಿಂದ ಎರಡೂವರೆ ಗಂಟೆಗೆ ಸೀಮಿತ ಮಾಡಲಾಗಿತ್ತು. ಆದರೆ, ಕೆಲವು ನಿರ್ದೇಶಕರು ಧೈರ್ಯ ಮಾಡಿ ಈ ನಿಯಮವನ್ನು ಮುರಿಯುವ ಪ್ರಯತ್ನದಲ್ಲಿ ಇದ್ದಾರೆ ಎನ್ನಬಹುದು.
ಕಳೆದ ವರ್ಷಾಂತ್ಯಕ್ಕೆ ಬಂದ ‘ಪುಷ್ಪ 2’ ಸಿನಿಮಾ 3 ಗಂಟೆ 21 ನಿಮಿಷ ಇತ್ತು. ಈ ವರ್ಷ ಬಂದು ಸೂಪರ್ ಹಿಟ್ ಆದ ‘ಧುರಂಧರ್’ ಚಿತ್ರದ ಅವಧಿ 3 ಗಂಟೆ 36 ನಿಮಿಷ. ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ರನ್ ಟೈಮ್ ಮೂರು ಗಂಟೆಗೆ (2 ಗಂಟೆ 49 ನಿಮಿಷ) ಸನಿಹವಾಗಿದೆ.
ಇದನ್ನೂ ಓದಿ:ಬಾಲಿವುಡ್ಗೆ ಎಂಟ್ರಿ ಕೊಡಲಿರುವ ರುಕ್ಮಿಣಿ ವಸಂತ್, ನಟಿ ಹೇಳಿದ್ದೇನು?
‘ಧುರಂಧರ್’ ಸಿನಿಮಾದ ರನ್ ಟೈಮ್ ಚಿತ್ರಕ್ಕೆ ಮುಳುವಾಗಬಹುದು ಎನ್ನಲಾಗಿತ್ತು. ಆದರೆ, ಈ ಸಿನಿಮಾ 400+ ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನ್ಲಿ ಸಾವಿರ ಕೋಟಿ ರೂಪಾಯಿ ಸಮೀಪಿಸುತ್ತಿದೆ. ಹೀಗಾಗಿ, ರನ್ ಟೈಮ್ ಮುಖ್ಯವಾಗೋದಿಲ್ಲ.
‘ರಾಜ ಸಾಬ್’ ಹಾಗೂ ‘ಜನ ನಾಯಗನ್’ ಅವಧಿ ಕೂಡ ಮೂರು ಗಂಟೆ ಮೀರಿಸಿದೆ. ‘ರಾಜಾ ಸಾಬ್ ’ 3 ಗಂಟೆ 10 ನಿಮಿಷ ಹಾಗೂ ಜನ ನಾಯಗನ್ 3 ಗಂಟೆ 5 ನಿಮಿಷ ಇದೆ. ಹೀಗಾಗಿ, ರನ್ ಟೈಮ್ ಮುಖ್ಯವಾಗುವುದಿಲ್ಲ ಎಂಬುದನ್ನು ಜನರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಈ ಬದಲಾವಣೆ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Thu, 18 December 25



