Sign In

By signing in or creating an account, you agree with Associated Broadcasting Company's Terms & Conditions and Privacy Policy.

Narayana Narayana Review: ನಿಧಿ ಹುಡುಕುವವರಿಗೆ ಹಾಸ್ಯದ ಜೊತೆ ಶ್ರೀಕೃಷ್ಣನ ನೀತಿ ಪಾಠ

‘ನಾರಾಯಣ ನಾರಾಯಣ’ ಇದು ಹೊಸಬರ ಸಿನಿಮಾ. ಇದರಲ್ಲಿ ಕಾಮಿಡಿ ಕಥೆ ಇದೆ. ಜೊತೆಗೆ ಅಗತ್ಯವಾದ ಒಂದು ನೀತಿ ಪಾಠವೂ ಇದೆ. ಹಳ್ಳಿ ಕಹಾನಿಯನ್ನು ಹಾಸ್ಯದ ಮೂಲಕ ಹೇಳಲಾಗಿದೆ. ಶ್ರೀಕಾಂತ್ ಕೆಂಚಪ್ಪ ಅವರು ನಿರ್ದೇಶನ ಮಾಡಿದ್ದಾರೆ. ಬಹುತೇಕ ಹೊಸ ಕಲಾವಿದರು ಬಣ್ಣ ಹಚ್ಚಿದ್ದಾರೆ. ‘ನಾರಾಯಣ ನಾರಾಯಣ’ ಸಿನಿಮಾ ವಿಮರ್ಶೆ ಇಲ್ಲಿದೆ..

Narayana Narayana Review: ನಿಧಿ ಹುಡುಕುವವರಿಗೆ ಹಾಸ್ಯದ ಜೊತೆ ಶ್ರೀಕೃಷ್ಣನ ನೀತಿ ಪಾಠ
Narayana Narayana Movie Poster
Follow us
ಮದನ್​ ಕುಮಾರ್​
|

Updated on: Mar 21, 2025 | 6:12 PM

ಸಿನಿಮಾ: ನಾರಾಯಣ ನಾರಾಯಣ. ನಿರ್ಮಾಣ: ಕೃಷ್ಣಪ್ಪ ಪಿ, ಮಂಜುನಾಥ್ ಕೆ. ನಿರ್ದೇಶನ: ಶ್ರೀಕಾಂತ್ ಕೆಂಚಪ್ಪ, ಪಾತ್ರವರ್ಗ: ಕೀರ್ತಿ ಕೃಷ್ಣ, ದರ್ಶನ್, ಬಿಂಬಿಕಾ, ಪವನ್ ಕುಮಾರ್, ಪುನಿತ್ ಬಿಎ, ರಘು ಭಟ್, ಗುರುಕಿರಣ್, ಹಂಪ, ಶಶಿಕಾಂತ್ ಗಟ್ಟಿ, ಗುರುರಾಜ್, ನಿಧಿ ದೀಕ್ಷಿತ್, ಮಧುಕರ್, ಅರುಣ್ ಕುಮಾರ್ ಕನಕಪುರ, ಪ್ರಸಾದ್ ಭಟ್, ವಿನಯ್ ಪವಾರ್ ಮುಂತಾದವರು.

ಪ್ರತಿ ವಾರ ಹೊಸಬರ ಸಿನಿಮಾಗಳು ಬಿಡುಗಡೆ ಆಗುತ್ತವೆ. ಹೊಸ ತಂಡಗಳು ಹೊಸ ಹೊಸ ಕಥೆಗಳನ್ನು ಪ್ರೇಕ್ಷಕರ ಮುಂದಿಡುತ್ತವೆ. ‘ನಾರಾಯಣ ನಾರಾಯಣ’ ಸಿನಿಮಾದಲ್ಲಿ ಕೂಡ ಬಹುತೇಕ ಹೊಸಬರು ನಟಿಸಿದ್ದಾರೆ. ಈ ಸಿನಿಮಾದಲ್ಲಿನ ಕಥೆ ಸಂಪೂರ್ಣ ಹೊಸದೇನೂ ಅಲ್ಲದಿದ್ದರೂ ಎಲ್ಲ ಕಾಲಕ್ಕೂ ಅನ್ವಯ ಆಗುವಂತಿದೆ. ಹೇಳಬೇಕಾದ ಒಂದು ಗಂಭೀರವಾದ ವಿಚಾರವನ್ನು ಕಾಮಿಡಿ ಮೂಲಕ ಹೇಳಲು ಈ ಹೊಸಬರ ತಂಡ ಪ್ರಯತ್ನಿಸಿದೆ. ಶ್ರೀಕೃಷ್ಣ ಪರಮಾತ್ಮನ ಪಾತ್ರವನ್ನು ಬಳಸಿಕೊಂಡು ಪ್ರೇಕ್ಷಕರಿಗೆ ಮುಖ್ಯವಾದ ಸಂದೇಶ ನೀಡಲಾಗಿದೆ.

ಸಂಪೂರ್ಣ ಕಾಮಿಡಿ ಶೈಲಿಯಲ್ಲಿ ‘ನಾರಾಯಣ ನಾರಾಯಣ’ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳು, ಘಟನೆಗಳು ಫನ್ನಿ ಆಗಿವೆ. ಹಾಗಾಗಿ ಲಾಜಿಕ್ ಹುಡುಕುವಂತಿಲ್ಲ. ನಾರಾಯಣಪುರ ಎಂಬ ಊರಿನಲ್ಲಿ ನಿಧಿ ಇದೆ ಎಂಬ ಸುದ್ದಿ ಹರಿದಾಡುತ್ತಾ ಇರುತ್ತದೆ. ಆ ನಿಧಿ ಪಡೆಯಲು ಇಡೀ ಊರಿನವರು ಪ್ರಯತ್ನಿಸುತ್ತಾರೆ. ನಿಧಿ ಸಲುವಾಗಿ ಘರ್ಷಣೆಗಳು ನಡೆಯುತ್ತವೆ. ನಿಜಕ್ಕೂ ಅಲ್ಲಿ ನಿಧಿ ಇದೆಯಾ? ನಿಧಿಗಾಗಿ ನಡೆಯುವ ಪ್ರಯತ್ನಗಳಿಂದ ಕಷ್ಟ ಯಾರಿಗೆ, ನಷ್ಟ ಯಾರಿಗೆ? ಅಂತಿಮವಾಗಿ ಆ ನಿಧಿಗೆ ಯಾರಿಗೆ ಸೇರುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ನಾರಾಯಣ ನಾರಾಯಣ’ ಸಿನಿಮಾದ ಕಥಾವಸ್ತು ಗಂಭೀರವಾಗಿದೆ. ಅದನ್ನು ಹಾಗೆಯೇ ಹೇಳಿದರೆ ಪ್ರೇಕ್ಷಕರನ್ನು ಕ್ಲಾಸ್ ರೂಮ್​ನಲ್ಲಿ ಕೂರಿಸಿ ಪಾಠ ಹೇಳಿದಂತೆ ಆಗಬಹುದು. ಹಾಗಾಗಿ ಒಂದು ಹಾಸ್ಯಭರಿತ ಕಥೆಯ ಮೂಲಕ ಕಥೆಯನ್ನು ವಿವರಿಸಲಾಗಿದೆ. ಅಲ್ಲದೇ, ಕೃಷ್ಣನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಳ್ಳಲಾಗಿದೆ. ಕೃಷ್ಣ ಪರಮಾತ್ಮನ ಮೂಲಕ ಸರಿ-ತಪ್ಪುಗಳನ್ನು ತಿಳಿಸಿಕೊಡುವ ರೀತಿಯಲ್ಲಿ ದೃಶ್ಯಗಳನ್ನು ಹೆಣೆಯಲಾಗಿದೆ. ಕೃಷ್ಣನ ಪಾತ್ರದಲ್ಲಿ ಪವನ್ ನಟಿಸಿದ್ದಾರೆ.

ಇಂದಿಗೂ ಎಷ್ಟೋ ಗ್ರಾಮಗಳಲ್ಲಿ ಮೂಢನಂಬಿಕೆ ಬಲವಾಗಿದೆ. ನಿಧಿ ಆಸೆಗೆ ಸಾಕಷ್ಟು ಅನಾಚಾರಗಳು ನಡೆಯುತ್ತವೆ. ಅವುಗಳ ವಿರುದ್ಧ ಜನರಿಗೆ ಎಚ್ಚರಿಕೆ ಸಂದೇಶ ನೀಡಲು ‘ನಾರಾಯಣ ನಾರಾಯಣ’ ಸಿನಿಮಾ ಪ್ರಯತ್ನಿಸಿದೆ. ಪೂರ್ತಿ ಸಿನಿಮಾ ಕಾಮಿಡಿಯನ್ನೇ ಅವಲಂಬಿಸಿರುವುದರಿಂದ ಹಾಸ್​ಯ ದೃಶ್ಯಗಳನ್ನು ಇನ್ನಷ್ಟು ಉತ್ತಮವಾಗಿಸುವ ಕಡಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಕೇವಲ ಡೈಲಾಗ್​ಗಳ ಬಲದಿಂದಲೇ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಲಾಗಿದೆ. ಇದು ಕೆಲವು ದೃಶ್ಯಗಳಲ್ಲಿ ಫಲ ನೀಡಿಲ್ಲ.

ಇದನ್ನೂ ಓದಿ: ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ; ‘ಕಂಗ್ರಾಜುಲೇಷನ್ಸ್ ಬ್ರದರ್’

ಚಿತ್ರದ ಅವಧಿ ಕೇವಲ 2 ಗಂಟೆ 3 ನಿಮಿಷ ಇದೆ. ಇದು ಸಿನಿಮಾಗೆ ಪ್ಲಸ್ ಆಗಿದೆ. ಕಥೆಯಲ್ಲಿ ಹಾಸ್ಯ ಮಾತ್ರವಲ್ಲದೇ ಸಸ್ಪೆನ್ಸ್ ಕೂಡ ಇರುವುದರಿಂದ ಕೊನೆವರೆಗೂ ನೋಡಿಸಿಕೊಂಡು ಸಾಗುವ ಗುಣ ಈ ಚಿತ್ರಕ್ಕಿದೆ. ಕ್ಲೈಮ್ಯಾಕ್ಸ್ ಕೊಂಚ ಎಮೋಷನಲ್ ಕೂಡ ಆಗಿದೆ. ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೇ ‘ನಾರಾಯಣ ನಾರಾಯಣ’ ಸಿನಿಮಾ ನೋಡಿದರೆ ಒಂದು ಸರಳ ಮತ್ತು ಅಚ್ಚುಕಟ್ಟಾದ ಪ್ರಯತ್ನವಾಗಿ ಪ್ರೇಕ್ಷಕರಿಗೆ ಹಿಡಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.