Pentagon Movie: ಸಿನಿಮಾ ಒಂದು, ಫ್ಲೇವರ್ ಐದು; ‘ಪೆಂಟಗನ್​’ ಚಿತ್ರದಲ್ಲಿ ಮಸೇಜ್​ ಮತ್ತು ಮನರಂಜನೆಯ ಪ್ಯಾಕೇಜ್​

Pentagon Kannada Movie Review: ಮಾಮೂಲಿ ಸಿನಿಮಾಗಳ ರೀತಿಯಲ್ಲಿ ‘ಪೆಂಟಗನ್​’ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಇದು ಕಥೆಗಳ ಗುಚ್ಛ ಆದ್ದರಿಂದ ಬೇರೆಯದೇ ಮನಸ್ಥಿತಿಯಲ್ಲಿ ಸಿನಿಮಾ ನೋಡಬೇಕು.

Pentagon Movie: ಸಿನಿಮಾ ಒಂದು, ಫ್ಲೇವರ್ ಐದು; ‘ಪೆಂಟಗನ್​’ ಚಿತ್ರದಲ್ಲಿ ಮಸೇಜ್​ ಮತ್ತು ಮನರಂಜನೆಯ ಪ್ಯಾಕೇಜ್​
ಪೆಂಟಗನ್ ಸಿನಿಮಾ ಪೋಸ್ಟರ್
Follow us
ಮದನ್​ ಕುಮಾರ್​
|

Updated on: Apr 06, 2023 | 3:27 PM

ಚಿತ್ರ: ಪೆಂಟಗನ್​

ನಿರ್ಮಾಣ: ಜಿ ಸಿನಿಮಾಸ್​

ನಿರ್ದೇಶನ: ಗುರು ದೇಶಪಾಂಡೆ, ರಾಘು ಶಿವಮೊಗ್ಗ, ಆಕಾಶ್​ ಶ್ರೀವತ್ಸ, ಚಂದ್ರಮೋಹನ್​, ಕಿರಣ್​ ಕುಮಾರ್​

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಕಿಶೋರ್​, ಪಿ. ರವಿಶಂಕರ್​, ಪ್ರಕಾಶ್​ ಬೆಳವಾಡಿ, ಪೃಥ್ವಿ ಅಂಬಾರ್​, ತನಿಷಾ ಕುಪ್ಪಂಡ, ಅನುಷಾ ರೈ, ಅಪೂರ್ವಾ ಮುಂತಾದವರು.

ಸ್ಟಾರ್​: 3/5

ಕಥಾಸಂಕಲನದ ರೀತಿಯಲ್ಲಿ ಮೂಡಿಬಂದ ಸಿನಿಮಾಗಳ ಸಂಖ್ಯೆ ವಿರಳ. ಅಂಥ ಅಪರೂಪದ ಪ್ರಯತ್ನಗಳ ಪಟ್ಟಿಗೆ ‘ಪೆಂಟಗನ್​’ ಚಿತ್ರ ಕೂಡ ಸೇರ್ಪಡೆ ಆಗಿದೆ. ಈ ಸಿನಿಮಾದಲ್ಲಿ 5 ಪ್ರತ್ಯೇಕ ಕಥೆಗಳಿವೆ. ಐವರು ನಿರ್ದೇಶಕರು ಈ ಕಥೆಗಳಿಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಪ್ರೇಕ್ಷಕರು ಹಲವು ಅಂಶಗಳನ್ನು ಬಯಸುತ್ತಾರೆ. ಒಂದೇ ಸಿನಿಮಾದಲ್ಲಿ ಕಾಮಿಡಿ, ಎಮೋಷನ್​, ಸಸ್ಪೆನ್ಸ್​, ಥ್ರಿಲ್ಲರ್​ ಮುಂತಾದ ಅಂಶಗಳು ಇರುತ್ತವೆ. ಅದೇ ರೀತಿ ‘ಪೆಂಗಟನ್​’ ಚಿತ್ರದ 5 ಬೇರೆ ಬೇರೆ ಕಥೆಗಳಲ್ಲಿ ಈ ಎಲ್ಲ ಅಂಶಗಳು ಬೆಸೆದುಕೊಂಡಿವೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

‘ಪೆಂಟಗನ್​’ ಸಿನಿಮಾವನ್ನು ಕಿರುಚಿತ್ರಗಳ ಗುಚ್ಛ ಎಂದು ಕರೆಯಬಹುದು. 5 ಪ್ರತ್ಯೇಕ ಕಥೆಗಳನ್ನು ಜೋಡಿಸಿ ಈ ಸಿನಿಮಾ ಮಾಡಲಾಗಿದೆ. ಮೊದಲ ಕಥೆಯಲ್ಲಿ ಕಾಮಿಡಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಎರಡನೇ ಕಥೆಯಲ್ಲಿ ಕೌಟುಂಬಿಕ ಮೌಲ್ಯವಿದೆ. ಮೂರನೇ ಕಥೆಯಲ್ಲಿ ಯುವ ಜನತೆಗೆ ಉತ್ತಮವಾದ ಸಂದೇಶ ಇದೆ. ನಾಲ್ಕನೇ ಕಥೆಯಲ್ಲಿ ಜಾತಿ ಸಂಘರ್ಷದ ವಿಷಯ ಹೈಲೈಟ್​ ಆಗಿದೆ. 5ನೇ ಕಥೆಯಲ್ಲಿ ಕನ್ನಡ ಪರ ಹೋರಾಟಗಾರರ ಬಗ್ಗೆ ತೋರಿಸಲಾಗಿದೆ.

ಈ ಐದು ಕಥೆಗಳು ಬೇರೆ ಬೇರೆ ಎನಿಸಿದರೂ ಕೂಡ ಒಂದು ಕಾಮನ್​ ಆದಂತಹ ಅಂಶ ಇವುಗಳಲ್ಲಿ ಇದೆ. ಅದೇನೆಂದರೆ ಸಾವು. ಪ್ರತಿ ಕಥೆಯು ಸಾವಿನೊಂದಿಗೆ ಅಂತ್ಯವಾಗುತ್ತದೆ. ಆ ಸಾವುಗಳಿಗೆ ಕಾರಣ ಏನು ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ಪ್ರತಿ ಸಾವಿನ ಹಿಂದಿರುವ ಸಂದರ್ಭಗಳು ಬೇರೆ ಬೇರೆ.

ಇದನ್ನೂ ಓದಿ: Tanisha: ಮಧ್ಯರಾತ್ರಿ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕ ಹಾಕಿದ: ತನಿಷಾ ಕುಪ್ಪಂಡ

‘ಪೆಂಟಗನ್​’ ಸಿನಿಮಾದಲ್ಲಿನ 5 ಪ್ರತ್ಯೇಕ ಕಥೆಗಳನ್ನು ಒಂದು ಹದದಲ್ಲಿ ಜೋಡಿಸಲಾಗಿದೆ. ಆರಂಭದಲ್ಲಿ ಸರಳ ಎನಿಸುವಂತಹ ಕಥೆಯೊಂದಿಗೆ ಸಿನಿಮಾ ಶುರುವಾಗುತ್ತದೆ. ನಂತರದ ಕಥೆಯಲ್ಲಿ ತೀವ್ರತೆ ಹೆಚ್ಚುತ್ತದೆ. ಮೂರನೇ ಕಥೆ ಬರುವವೇಳೆಗೆ ಪ್ರೇಕ್ಷಕರು ಇನ್ನಷ್ಟು ಗಂಭೀರವಾಗಿ ಸಿನಿಮಾ ನೋಡುವಂತಹ ವಾತಾವರಣ ನಿರ್ಮಾಣ ಆಗುತ್ತದೆ. ಮಧ್ಯಂತರದ ನಂತರ ಬರುವ ಕಥೆಯಲ್ಲಿ ಕಾಮಿಡಿಗೆ ಅವಕಾಶ ಇಲ್ಲದೇ ನೇರವಾಗಿ ವಿಷಯ ತೆರೆದುಕೊಳ್ಳುತ್ತದೆ. ಈ ರೀತಿಯ ಲಯದಲ್ಲಿ ಎಲ್ಲ ಕಥೆಗಳನ್ನು ಒಂದರಪಕ್ಕ ಒಂದರಂತೆ ಜೋಡಿಸಲಾಗಿದೆ.

ಇದೊಂದು ಬಹುತಾರಾಗಣದ ಸಿನಿಮಾ. ವೈಜನಾಥ ಬಿರಾದಾರ್, ಪಿ. ರವಿಶಂಕರ್​, ಕಿಶೋರ್​, ಪೃಥ್ವಿ ಅಂಬಾರ್​, ಪ್ರಕಾಶ್​ ಬೆಳವಾಡಿ ಮುಂತಾದವರಿಂದಾಗಿ ‘ಪೆಂಟಗನ್​’ ಚಿತ್ರದ ಮೆರುಗು ಹೆಚ್ಚಿದೆ. ಖಡಕ್​ ಪೊಲೀಸ್​ ಅಧಿಕಾರಿಯಾಗಿ ಪ್ರಕಾಶ್​ ಬೆಳವಾಡಿ ಇಷ್ಟವಾಗುತ್ತಾರೆ. ಕನ್ನಡಪರ ಹೋರಾಟಗಾರನ ಪಾತ್ರದಲ್ಲಿ ಕಿಶೋರ್​ ಅವರು ಗಾಂಭೀರ್ಯದಿಂದ ನಟಿಸಿದ್ದಾರೆ. ಜಾತಿ ಮತ್ತು ಮಗಳ ಮೇಲೆ ವಿಪರೀತ ವ್ಯಮೋಹ ಇರುವಂತಹ ತಂದೆಯಾಗಿ ಪಿ. ರವಿಶಂಕರ್​ ಅವರ ನಟನೆಗೆ ಪ್ರೇಕ್ಷಕರು ಮನಸೋಲಲೇಬೇಕು. ತನಿಷಾ ಕುಪ್ಪಂಡ ಅವರು ಗ್ಲಾಮರಸ್​ ಆಗಿ ಮಾತ್ರವಲ್ಲದೇ ನಟನೆ ಮೂಲಕವೂ ಮೆಚ್ಚುಗೆ ಗಳಿಸುತ್ತಾರೆ. ಇನ್ನುಳಿದ ಎಲ್ಲ ಕಲಾವಿದರು ಕೂಡ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ: ಅಸಭ್ಯ ಸಂದೇಶ ಕಳಿಸಿದ ರಾಜಾಹುಲಿ ಹರ್ಷ: ನಟಿ ತನಿಷಾ ಆರೋಪ

ಮಾಮೂಲಿ ಸಿನಿಮಾಗಳ ರೀತಿಯಲ್ಲಿ ‘ಪೆಂಟಗನ್​’ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಇದು ಕಥೆಗಳ ಗುಚ್ಛ ಆದ್ದರಿಂದ ಬೇರೆಯದೇ ಮನಸ್ಥಿತಿಯಲ್ಲಿ ಸಿನಿಮಾ ನೋಡಬೇಕು. ಇಲ್ಲಿನ ಪ್ರತಿ ಕಥೆ ಕೂಡ ಬೇರೆ ಬೇರೆ ಫ್ಲೇವರ್​ನಲ್ಲಿವೆ. ಒಂದು ಕಥೆಯನ್ನು ನೋಡಿ ಮುಗಿಸಿದ ಬಳಿಕ ಮತ್ತೊಂದು ಕಥೆಯನ್ನು ನೋಡುವಾಗ ಪ್ರೇಕ್ಷಕರು ಆ ಫ್ಲೇವರ್​ಗೆ ಶಿಫ್ಟ್​ ಆಗಬೇಕು.

ಕಿರುಚಿತ್ರಗಳು ಎಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿ ಆಗಿಲ್ಲ. ಮೊದಲ ಎರಡು ಕಥೆಗಳನ್ನು ಇನ್ನಷ್ಟು ಚೆನ್ನಾಗಿ ತೆರೆಗೆ ತರಬಹುದಿತ್ತೇನೋ ಅನಿಸುತ್ತದೆ. ಕಿರಣ್​ ಹಂಪಾಪುರ, ಗುರುಪ್ರಸಾದ್​​ ಎಂ.ಜಿ ಹಾಗೂ ಅಭಿಲಾಷ್​ ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಮಣಿಕಾಂತ್​ ಕದ್ರಿ ಅವರ ಸಂಗೀತದಿಂದ ದೃಶ್ಯಗಳ ತೀವ್ರತೆ ಹೆಚ್ಚಿದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 54 ನಿಮಿಷ. ಇದರಿಂದ ಪ್ರೇಕ್ಷಕರು ತಾಳ್ಮೆ ವಹಿಸುವುದು ಅಗತ್ಯ. ಕೆಲವು ದೃಶ್ಯಗಳು ಬೋಲ್ಡ್​ ಆಗಿವೆ. ಡೈಲಾಗ್​ಗಳು ಕೂಡ ಕೊಂಚ ಖಾರವಾಗಿವೆ. ಸೆನ್ಸಾರ್​ನಿಂದ ‘ಎ’ ಪ್ರಮಾಣಪತ್ರ ಸಿಕ್ಕಿರುವುದರಿಂದ ಈ ಸಿನಿಮಾ ವಯಸ್ಕರಿಗೆ ಮಾತ್ರ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್