ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಟ್ವಿಸ್ಟ್ ಬೆರೆತ ‘ಹಿರಣ್ಯ’: ಮಾಸ್ ಮನರಂಜನೆ ನೀಡುವ ರಾಜವರ್ಧನ್

‘ಹಿರಣ್ಯ’ ಚಿತ್ರದಲ್ಲಿ ನಟ ರಾಜವರ್ಧನ್​ ಅವರು ನೆಗೆಟಿವ್​ ಶೇಡ್​ ಹೊಂದಿರುವ ಹೀರೋ ಪಾತ್ರ ಮಾಡಿದ್ದಾರೆ. ಅವರ ಜೊತೆ ದಿವ್ಯಾ ಸುರೇಶ್​, ದಿಲೀಪ್​ ಆರ್​. ಶೆಟ್ಟಿ, ರಿಹಾನಾ ಅವರ ಪಾತ್ರಗಳು ಸಹ ಹೈಲೈಟ್​ ಆಗಿವೆ. ಮಾಸ್​ ಆ್ಯಕ್ಷನ್​ ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ. ಆರಂಭದಿಂದ ಕೊನೆವರೆಗೆ ಸಸ್ಪೆನ್ಸ್​ ಉಳಿಸಿಕೊಂಡು, ಅಲ್ಲಲ್ಲಿ ಟ್ವಿಸ್ಟ್ ನೀಡುವ ‘ಹಿರಣ್ಯ’ ಚಿತ್ರದ ವಿಮರ್ಶೆ ಇಲ್ಲಿದೆ..

ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಟ್ವಿಸ್ಟ್ ಬೆರೆತ ‘ಹಿರಣ್ಯ’: ಮಾಸ್ ಮನರಂಜನೆ ನೀಡುವ ರಾಜವರ್ಧನ್
‘ಹಿರಣ್ಯ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 20, 2024 | 2:27 PM

ಸಿನಿಮಾ: ಹಿರಣ್ಯ. ನಿರ್ಮಾಣ: ವಿಘ್ನೇಶ್ವರ ಗೌಡ, ವಿಜಯ್ ಗೌಡ ಬಿದರಹಳ್ಳಿ. ನಿರ್ದೇಶನ: ಪ್ರವೀಣ್​ ಅವ್ಯುಕ್ತ್. ಪಾತ್ರವರ್ಗ: ರಾಜವರ್ಧನ್​, ದಿವ್ಯಾ ಸುರೇಶ್​, ದಿಲೀಪ್​ ಆರ್​. ಶೆಟ್ಟಿ, ಅರವಿಂದ್​ ರಾವ್, ರಿಹಾನಾ ಮುಂತಾದವರು. ಸ್ಟಾರ್​ 3/5

ನಟ ರಾಜವರ್ಧನ್​ ಅವರು ಸಂಪೂರ್ಣ ಮಾಸ್​ ಅವತಾರದಲ್ಲಿ ಕಾಣಿಸಿಕೊಂಡಿರುವ ‘ಹಿರಣ್ಯ’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಪ್ರವೀಣ್​ ಅವ್ಯುಕ್ತ್ ಅವರು ನಿರ್ದೇಶನ ಮಾಡಿದ್ದಾರೆ. ಒಂದು ಸಸ್ಪೆನ್ಸ್​-ಥ್ರಿಲ್ಲರ್​ ಕಹಾನಿಯನ್ನು ಅವರು ಈ ಸಿನಿಮಾದಲ್ಲಿ ಹೇಳಿದ್ದಾರೆ. ಮಾಸ್​ ಪ್ರೇಕ್ಷಕರ ಜೊತೆಗೆ ಫ್ಯಾಮಿಲಿ ಮಂದಿಗೂ ಇಷ್ಟವಾಗಬಹುದಾಗ ಕಹಾನಿ ಈ ಸಿನಿಮಾದಲ್ಲಿದೆ. ಸಿನಿಮಾ ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ.

‘ಹಿರಣ್ಯ’ ಸಿನಿಮಾದಲ್ಲಿ ಒಂದು ಸಸ್ಪೆನ್ಸ್​ ಕಥೆ ಇದೆ. ಸುಪಾರಿ ಕಿಲ್ಲರ್​ ಆಗಿರುವ ವ್ಯಕ್ತಿಯೇ ಈ ಸಿನಿಮಾದ ಹೀರೋ! ಆ ಪಾತ್ರಕ್ಕೆ ರಾಜವರ್ಧನ್​ ಅವರು ಬಣ್ಣ ಹಚ್ಚಿದ್ದಾರೆ. ಡೀಲ್​ ಕೊಟ್ಟರೆ ಸಾಕು, ಮುಲಾಜಿಲ್ಲದೇ ಕೊಲೆ ಮಾಡುವುದು ಈತನ ಕಸುಬು. ಮಕ್ಕಳು, ಮಹಿಳೆಯರು ಎಂಬ ವ್ಯತ್ಯಾಸ ಇಲ್ಲದೇ ಹತ್ಯೆ ಮಾಡುತ್ತಿದ್ದ ಇಂಥ ವ್ಯಕ್ತಿಯ ಬದುಕಿನಲ್ಲಿ ಒಂದು ಮಗು ಪ್ರವೇಶ ಆಗುತ್ತದೆ. ಅದು ಆತನೇ ಕಿಡ್ಯಾಪ್​ ಮಾಡಿರುವ ಮಗು. ಆ ಮಗುವಿನ ಕಾರಣದಿಂದ ಆತನ ಜೀವನ ನಿಧಾನವಾಗಿ ಬದಲಾಗುತ್ತಾ ಸಾಗುತ್ತವೆ. ಏನೂ ಅರಿಯದ ಪುಟ್ಟ ಮಗುವನ್ನು ಕಿಡ್ಯಾಪ್​ ಮಾಡಿ ಸಾಯಿಸಲು ಸುಪಾರಿ ಕೊಟ್ಟಿದ್ದು ಯಾರು? ಮಗುವನ್ನು ಉಳಿಸಿಕೊಳ್ಳಲು ಹೀರೋ ಮಾಡುವ ಕಸರತ್ತುಗಳೇನು? ರಕ್ಷಕರ ರೂಪದಲ್ಲಿ ಇರುವ ರಾಕ್ಷಸರು ಯಾರು? ಅಂತಿಮವಾಗಿ ಮಗು ಉಳಿಯುತ್ತೋ ಇಲ್ಲವೋ ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ನಟ ರಾಜವರ್ಧನ್​ ಅವರಿಗೆ ಈ ಸಿನಿಮಾ ಹೇಳಿ ಮಾಡಿಸಿದಂತಿದೆ. ಹೊಡೆಬಡಿ ದೃಶ್ಯಗಳಲ್ಲಿ ಅವರು ಮಿಂಚಿದ್ದಾರೆ. ಅಗತ್ಯಕ್ಕೆ ತಕ್ಕಷ್ಟು ಮಾಸ್​ ಡೈಲಾಗ್​ಗಳನ್ನು ಹೊಡೆಯುತ್ತಾ, ಇನ್ನುಳಿದ ದೃಶ್ಯಗಳಲ್ಲಿ ಮೌನವಾಗಿಯೇ ನಟಿಸುತ್ತಾ ಅವರು ಇಡೀ ಸಿನಿಮಾದಲ್ಲಿ ಹೆಚ್ಚಿನ ಸ್ಕ್ರೀನ್​ ಸ್ಪೇಸ್​ ಪಡೆದುಕೊಂಡಿದ್ದಾರೆ. ನೆಗೆಟಿವ್​ ಶೇಡ್​ ಇರುವ ಹೀರೋ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ.

‘ಬಿಗ್​ ಬಾಸ್​’ ಖ್ಯಾತಿಯ ನಟಿ ದಿವ್ಯಾ ಸುರೇಶ್ ಅವರು ‘ಹಿರಣ್ಯ’ ಸಿನಿಮಾದಲ್ಲಿ ರಾಜವರ್ಧನ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಐಟಂ ಡ್ಯಾನ್ಸ್​ ಮೂಲಕ ಅವರ ಎಂಟ್ರಿ ಆಗುತ್ತದೆ. ಒಂದು ಬೋಲ್ಡ್​ ಪಾತ್ರವನ್ನೇ ಅವರು ನಿಭಾಯಿಸಿದ್ದಾರೆ. ಕೆಲವೇ ಹೊತ್ತುಗಳ ಕಾಲ ಅವರು ತೆರೆ ಮೇಲೆ ಕಾಣಿಸಿಕೊಂಡರೂ ಕೂಡ ಕಥೆಗೆ ಒಂದು ಟ್ವಿಸ್ಟ್​ ನೀಡುವಂತಹ ಪಾತ್ರವೇ ಅವರಿಗೆ ಸಿಕ್ಕಿದೆ. ನಟಿ ರಿಹಾನಾ ಕೂಡ ಗಮನಾರ್ಹವಾಗಿ ನಟಿಸಿದ್ದಾರೆ. ಕಾಲೇಜು ಹುಡುಗಿಯ ಪಾತ್ರದಲ್ಲಿ ಲವಲವಿಕೆಯಿಂದ ಕಾಣಿಸಿಕೊಂಡ ರಿಹಾನಾ ಅವರು ನಂತರ, ಮಗುವನ್ನು ಕಳೆದುಕೊಂಡ ತಾಯಿಯಾಗಿ ಗಮನ ಸೆಳೆಯುತ್ತಾರೆ.

‘ಹಿರಣ್ಯ’ ಚಿತ್ರದಲ್ಲಿ ರಾಜವರ್ಧನ್, ರಿಹಾನಾ, ದಿವ್ಯಾ ಸುರೇಶ್ ಜೊತೆ ದಿಲೀಪ್​ ಆರ್​. ಶೆಟ್ಟಿ ಅವರು ಕೂಡ ಹೈಲೈಟ್​ ಆಗಿದ್ದಾರೆ. ಅವರ ನಟನೆಗೆ ಈ ಸಿನಿಮಾದಲ್ಲಿ ಸಾಕಷ್ಟು ಸ್ಕೋಪ್​ ಸಿಕ್ಕಿದೆ. ಮೂರು ಶೇಡ್​ ಇರುವ ಪಾತ್ರವನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಆರಂಭದಲ್ಲಿ ಎಲೆಮರೆಯ ಕಾಯಿಯಂತೆ ಇರುವ ಅವರ ಪಾತ್ರಕ್ಕೆ ದ್ವಿತೀಯಾರ್ಥದಲ್ಲಿ ಪ್ರಾಮುಖ್ಯತೆ ದೊರಕಿದೆ.

ಇದನ್ನೂ ಓದಿ: ಶ್ರೀಮಂತರ ಮಕ್ಕಳ ಕಾಟ, ಚಂದನ್​ ಶೆಟ್ಟಿ ಪಾಠ: ಇದು ಟಾಸ್ಕ್​ಗಳ ಸುಳಿಗೆ ಸಿಕ್ಕ ಸಿನಿಮಾ

ಅಪಹರಣಕ್ಕೆ ಒಳಗಾದ ಮಗು ಕೂಡ ಇಡೀ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದ ರೀತಿ ಸಾಗುತ್ತದೆ. ಆ ಸೆಂಟಿಮೆಂಟ್​ನ ಕಾರಣಕ್ಕೆ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾ ಹಿಡಿಸುತ್ತದೆ. ಆ್ಯಕ್ಷನ್​ ಬಯಸುವ ಮಾಸ್​ ಪ್ರೇಕ್ಷಕರನ್ನು ಕೂಡ ‘ಹಿರಣ್ಯ’ ಚಿತ್ರ ರಂಜಿಸುತ್ತದೆ. ಆದರೆ ಸಿನಿಮಾದಲ್ಲಿನ ಕೆಲವು ಸನ್ನಿವೇಶಗಳಲ್ಲಿ ಲಾಜಿಕ್​ ಮಾಯವಾಗಿದೆ. ಒಟ್ಟಾರೆ ಕಥೆ ಅಷ್ಟೇನೂ ಹೊಸದಾಗಿಲ್ಲ. ಇಂಥ ಕೆಲವು ಮೈನಸ್​ ಅಂಶಗಳ ನಡುವೆಯೂ ನೋಡಿಸಿಕೊಂಡು ಹೋಗುವ ಗುಣ ಈ ಚಿತ್ರಕ್ಕಿದೆ. ಕಾಮಿಡಿ ದೃಶ್ಯಗಳಿಂದ ಈ ಸಿನಿಮಾಗೆ ಹೆಚ್ಚೇನೂ ಉಪಯೋಗ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್