AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sidlingu 2 Review: ‘ಸಿದ್ಲಿಂಗು 2’ ಚಿತ್ರದಲ್ಲೂ ಮುಂದುವರಿದ ಯೋಗಿ-ವಿಜಯ್ ಪ್ರಸಾದ್ ‘ಕಾರು’ಬಾರು

ನಟ ಲೂಸ್ ಮಾದ ಯೋಗಿ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಅವರ ಕಾಂಬಿನೇಷನ್​ನಲ್ಲಿ ಕಾರಿನ ಕಥೆ ಮುಂದುವರಿದಿದೆ. ಹಳೆಯ ಮತ್ತು ಹೊಸ ಪಾತ್ರಗಳ ಸಂಗಮದಿಂದ ‘ಸಿದ್ಲಿಂಗು 2’ ಚಿತ್ರಕ್ಕೆ ಬೇರೆ ಮೆರಗು ಬಂದಿದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದು ತಿಳಿಯಲು ಈ ವಿಮರ್ಶೆ ಓದಿ..

Sidlingu 2 Review: ‘ಸಿದ್ಲಿಂಗು 2’ ಚಿತ್ರದಲ್ಲೂ ಮುಂದುವರಿದ ಯೋಗಿ-ವಿಜಯ್ ಪ್ರಸಾದ್ ‘ಕಾರು’ಬಾರು
Loose Mada Yogi, Sonu Gowda
ಮದನ್​ ಕುಮಾರ್​
|

Updated on: Feb 16, 2025 | 3:05 PM

Share

ಸಿನಿಮಾ: ಸಿದ್ಲಿಂಗು 2. ನಿರ್ಮಾಣ: ಶ್ರೀಹರಿ, ರಾಜು ಶೇರೇಗಾರ್. ನಿರ್ದೇಶನ: ವಿಜಯ್ ಪ್ರಸಾದ್. ಪಾತ್ರವರ್ಗ: ಲೂಸ್ ಮಾದ ಯೋಗಿ, ಸೋನು ಗೌಡ, ಸುಮನ್ ರಂಗನಾಥ್, ಪದ್ಮಜಾ ರಾವ್, ಬಿ. ಸುರೇಶ ಮುಂತಾದವರು. ಸ್ಟಾರ್​: 3/5

ನಿರ್ದೇಶಕ ವಿಜಯ್ ಪ್ರಸಾದ್ ಅವರು ಸಿನಿಮಾ ಮಾಡುವ ಶೈಲಿಯೇ ಭಿನ್ನ. ಜನರ ನಡುವಿನ ಸಂಬಂಧಗಳ ಎಳೆಯನ್ನೇ ಇಟ್ಟುಕೊಂಡು ಅವರು ನವಿರಾದ ಕಥೆ ಹೇಳುತ್ತಾರೆ. ಆದರೆ ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ಕೊಂಚ ಹದ ತಪ್ಪಿತ್ತು. ಡಬಲ್ ಮೀನಿಂಗ್ ಸಂಭಾಷಣೆಗಳ ಬಳಕೆಯಿಂದ ನಿಜವಾದ ಫ್ಲೇವರ್ ಕಾಣೆ ಆಗಿತ್ತು. ಆದರೆ ಈಗ ವಿಜಯ್ ಪ್ರಸಾದ್ ಅವರು ಮತ್ತೆ ಸರಿಯಾದ ಹಳಿಗೆ ಮರಳಿದ್ದಾರೆ. ಅದು ‘ಸಿದ್ಲಿಂಗು 2’ ಸಿನಿಮಾ ಮೂಲಕ. ಈ ಸಿನಿಮಾದ ವಿಮರ್ಶೆ ಇಲ್ಲಿದೆ..

ಕೇವಲ ಶೀರ್ಷಿಕೆ ಬೇಕು ಎಂಬ ಕಾರಣಕ್ಕೆ ವಿಜಯ್ ಪ್ರಸಾದ್ ಅವರು ‘ಸಿದ್ಲಿಂಗು 2’ ಸಿನಿಮಾ ಮಾಡಿಲ್ಲ. ಬದಲಿಗೆ ನಿಜವಾಗಿಯೂ ‘ಸಿದ್ಲಿಂಗು’ ಕಥೆಯನ್ನು 2ನೇ ಪಾರ್ಟ್​ನಲ್ಲಿ ಮುಂದುವರಿಸಿದ್ದಾರೆ. ಕಾರಿಗಾಗಿ ಸಿದ್ಲಿಂಗು ನಡೆಸುವ ಹುಡುಕಾಟ, ಹೋರಾಟ ಈ ಬಾರಿಯೂ ಮುಂದುವರಿದಿದೆ. ಇಲ್ಲಿ ಕಾರು ಒಂದು ನೆಪವಷ್ಟೇ. ಅದನ್ನು ಇಟ್ಟುಕೊಂಡು ಸಂಬಂಧಗಳ ಮೌಲ್ಯವನ್ನು ತಿಳಿಸುವ ಪ್ರಯತ್ನವನ್ನು ಎಲ್ಲ ಪಾತ್ರಗಳ ಮೂಲಕ ಮಾಡಲಾಗಿದೆ.

ಮೊದಲ ಪಾರ್ಟ್​ನಲ್ಲಿ ಮಂಗಳಾ ಟೀಚರ್​ ಪಾತ್ರವನ್ನು ರಮ್ಯಾ ಮಾಡಿದ್ದರು. ಈಗ ‘ಸಿದ್ಲಿಂಗು 2’ ಸಿನಿಮಾದಲ್ಲಿ ಅವರ ಪಾತ್ರ ಫ್ಲ್ಯಾಶ್ ಬ್ಯಾಕ್​ಗೆ ಮಾತ್ರ ಸೀಮಿತವಾಗಿದೆ. ಆದರೆ ಆ ಪಾತ್ರದ ಛಾಯೆ ಕೊನೆವರೆಗೂ ಸಾಗಿ ಬಂದಿದೆ. ನಟಿ ಸೋನು ಗೌಡ ಅವರು ಸೀಕ್ವೆಲ್​ಗೆ ನಾಯಕಿ ಆಗಿದ್ದಾರೆ. ಅವರು ಕೂಡ ಟೀಚರ್​ ಆಗಿಯೇ ನಿವೇದಿತಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮನ್ ರಂಗನಾಥ್ ಕೂಡ ಕೆಲವು ದೃಶ್ಯಗಳಲ್ಲಿ ಬಂದು ಟ್ವಿಸ್ಟ್ ನೀಡುತ್ತಾರೆ.

‘ಸಿದ್ಲಿಂಗು’ ನೋಡಿ ಇಷ್ಟಪಟ್ಟಿದ್ದವರಿಗೆ ‘ಸಿದ್ಲಿಂಗು 2’ ಸಿನಿಮಾ ಸುಲಭವಾಗಿ ಕನೆಕ್ಟ್ ಆಗುತ್ತದೆ. ಈ ಬಾರಿ ಒಂದಷ್ಟು ಹೊಸ ಪಾತ್ರಗಳನ್ನು ಪರಿಚಯಿಸಲಾಗಿದೆ. ಆ ಪಾತ್ರಗಳೇ ಹೆಚ್ಚು ಹೈಲೈಟ್ ಆಗಿವೆ. ಸ್ಮಶಾನದಲ್ಲಿ ಗುಂಡಿ ತೆಗೆಯುವ ಕೆಲಸ ಮಾಡುವ ಮಹಿಳೆಯಾಗಿ ಪದ್ಮಜಾ ರಾವ್ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಮಂಜುನಾಥ್ ಹೆಗಡೆ ನಿಭಾಯಿಸಿರುವ ಪಾತ್ರವೂ ಗಮನ ಸೆಳೆಯುತ್ತದೆ. ಕೋಪಿಷ್ಠ ತಂದೆಯಾಗಿ ಬಿ. ಸುರೇಶ ಅವರು ಸದ್ದು ಮಾಡಿದ್ದಾರೆ. ಸೌಮ್ಯ ಸ್ವಭಾವದ ಹುಡುಗಿಯಾಗಿ ಸೋನು ಗೌಡ ಇಷ್ಟ ಆಗುತ್ತಾರೆ. ನಿರ್ದೇಶಕ ವಿಜಯ್ ಪ್ರಸಾದ್ ಅವರು ದೇವರಾಗಿ ಕಾಣಿಸಿಕೊಂಡಿದ್ದಾರೆ.

ಹಾಸ್ಯ ಮತ್ತು ಭಾವುಕತೆಯನ್ನು ಪ್ರಧಾನವಾಗಿ ಇಟ್ಟುಕೊಂಡು ನಿರ್ದೇಶಕ ವಿಜಯ್ ಪ್ರಸಾದ್ ಅವರು ಈ ಸಿನಿಮಾದ ಕಥೆಯನ್ನು ನಿರೂಪಿಸಿದ್ದಾರೆ. ಅದಕ್ಕೆ ಯೋಗಿ ಚೆನ್ನಾಗಿ ಸಾಥ್ ನೀಡಿದ್ದಾರೆ. ನಗಿಸುತ್ತಾ, ಎಮೋಷನಲ್ ಆಗಿಸುತ್ತ ಅವರು ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಯಾವುದೇ ಅತಿರೇಕ ಎನಿಸದ ಹಾಗೆ ಅವರು ನೋಡಿಕೊಂಡಿದ್ದಾರೆ. ಬದುಕಿನಲ್ಲಿ ಎದುರಾಗುವ ಒಳ್ಳೆಯ ಮನಸ್ಸುಗಳಿಗೆ ಗೌರವ ನೀಡುವ ವ್ಯಕ್ತಿಯಾಗಿ ಅವರ ಪಾತ್ರ ಮೂಡಿಬಂದಿದೆ. ಸಾಮಾನ್ಯ ಜನರ ನಡುವೆ ಇರುವ ಹೀರೋ ರೀತಿ ಸಿದ್ಲಿಂಗು ಪಾತ್ರ ಕಾಣಿಸುತ್ತದೆ.

ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ‘ಭುವನಂ ಗಗನಂ’ ಸಿನಿಮಾ ಮೂಲಕ ಪ್ರೀತಿ ಪಾಠ

ಇನ್ನು, ‘ಸಿದ್ಲಿಂಗು 2’ ಸಿನಿಮಾದಲ್ಲಿ ಕೆಲವು ಲೋಪಗಳೂ ಕಾಣಿಸುತ್ತವೆ. ಕಥೆಗೆ ಸಂಬಂಧವೇ ಇಲ್ಲದೇ ಡೈಲಾಗ್​ಗಳ ನಡುವೆ ನುಸುಳಿ ಬರುವ ಡಾಲಿ ಧನಂಜಯ, ವಾಸುಕಿ ವೈಭವ್ ಮುಂತಾದವರ ಹೆಸರುಗಳು ಅನಗತ್ಯ ಎನಿಸುತ್ತವೆ. ಕಥೆಯಲ್ಲಿ ಒಮ್ಮೊಮ್ಮೆ ಲಾಜಿಕ್​ಗಳ ಕಡೆಗೆ ನಿರ್ದೇಶಕರು ಗಮನ ನೀಡಿದಂತಿಲ್ಲ. ಹಾಡುಗಳು ತಕ್ಷಣಕ್ಕೆ ಸೆಳೆಯುವುದಿಲ್ಲ. ಇಂಥ ಕೆಲವು ಮೈನಸ್ ಅಂಶಗಳನ್ನು ಬದಿಗಿಟ್ಟರೆ ‘ಸಿದ್ಲಿಂಗು 2’ ಸಿನಿಮಾ ನೋಡಿಸಿಕೊಂಡು ಸಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ