Tatsama Tadbhava Review: ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’

ಪತ್ತೆದಾರಿ ಮಾದರಿಯ ಸಿನಿಮಾ ಬಯಸುವವರಿಗೆ ‘ತತ್ಸಮ ತದ್ಭವ’ ಇಷ್ಟವಾಗುತ್ತದೆ. ಈ ಸಿನಿಮಾ ನೋಡುವಾಗ ಪ್ರೇಕ್ಷಕರು ಸಂಪೂರ್ಣ ಗಮನ ನೀಡಬೇಕು. ಮೇಘನಾ ರಾಜ್​ ಅವರು ಒಂದು ಸವಾಲಿನ ಪಾತ್ರವನ್ನು ನಿಭಾಯಿಸಿದ್ದಾರೆ. ಪೊಲೀಸ್​ ಪಾತ್ರದಲ್ಲಿ ಪ್ರಜ್ವಲ್​ ದೇವರಾಜ್​ ಕಾಣಿಸಿಕೊಂಡಿದ್ದಾರೆ. ‘ತತ್ಸಮ ತದ್ಭವ’ ಚಿತ್ರದ ವಿಮರ್ಶೆ ಇಲ್ಲಿದೆ..

Tatsama Tadbhava Review: ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’
ಪ್ರಜ್ವಲ್​ ದೇವರಾಜ್​, ಮೇಘನಾ ರಾಜ್​
Follow us
ಮದನ್​ ಕುಮಾರ್​
|

Updated on: Sep 15, 2023 | 3:07 PM

ಚಿತ್ರ: ತತ್ಸಮ ತದ್ಭವ. ನಿರ್ಮಾಣ: ಪಿ.ಬಿ. ಸ್ಡುಡಿಯೋಸ್​, ಅನ್ವಿತ್​ ಸಿನಿಮಾಸ್​. ನಿರ್ದೇಶನ: ವಿಶಾಲ್​ ಆತ್ರೇಯ. ಪಾತ್ರವರ್ಗ: ಮೇಘನಾ ರಾಜ್​, ಪ್ರಜ್ವಲ್​ ದೇವರಾಜ್​, ಅರವಿಂದ್​​ ಅಯ್ಯರ್​, ಮಹತಿ ವೈಷ್ಣವಿ ಭಟ್​, ಶ್ರುತಿ, ಟಿಎಸ್​ ನಾಗಾಭರಣ, ಗಿರಿಜಾ ಲೋಕೇಶ್​, ರಾಜಶ್ರೀ ಪೊನ್ನಪ್ಪ ಮುಂತಾದವರು. ಸ್ಟಾರ್​: 3/5

ನಟಿ ಮೇಘನಾ ರಾಜ್​ (Meghana Raj) ಅವರು ಒಂದಷ್ಟು ವರ್ಷಗಳ ಹಿಂದೆ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದರು. ಆದರೆ ಚಿರಂಜೀವಿ ಸರ್ಜಾ ನಿಧನದ ಬಳಿಕ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಎಲ್ಲ ನೋವನ್ನು ಪಕ್ಕಕ್ಕೆ ಇಟ್ಟು ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಮೇಘನಾ ರಾಜ್​ ಅವರು ‘ತತ್ಸಮ ತದ್ಭವ’ (Tatsama Tadbhava) ಸಿನಿಮಾದ ಮೂಲಕ ಕಮ್​ಬ್ಯಾಕ್​ ಮಾಡಿದ್ದಾರೆ. ಸೈಕಲಾಜಿಕಲ್​ ಥ್ರಿಲ್ಲರ್​ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಹೊಸ ನಿರ್ದೇಶಕ ವಿಶಾಲ್​ ಆತ್ರೇಯಾ ಅವರು ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಂತಹ ಪ್ರಯತ್ನ ಮಾಡಿದ್ದಾರೆ. ಮೇಘನಾ ರಾಜ್​ ಅವರ ಜೊತೆ ಪ್ರಜ್ವಲ್​ ದೇವರಾಜ್​ (Prajwal Devaraj) ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮೇಘನಾ ರಾಜ್ ಅವರಿಗೆ ಒಂದು ರೀತಿಯಲ್ಲಿ ಈ ಸಿನಿಮಾ ಚಾಲೆಂಜಿಂಗ್​ ಆಗಿದೆ. ಪೂರ್ತಿ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ.

ಮರ್ಡರ್​ ಮಿಸ್ಟರಿ:

‘ತತ್ಸಮ ತದ್ಭಮ’ ಸಿನಿಮಾದಲ್ಲಿ ಒಂದು ಮರ್ಡರ್ ಮಿಸ್ಟರಿ ಕಥೆ ಇದೆ. ಗಂಡನನ್ನು ಕಳೆದುಕೊಂಡ ಕಥಾನಾಯಕಿ ಆರಿಕಾ (ಮೇಘನಾ ರಾಜ್​) ಪೊಲೀಸ್​ ಠಾಣೆಗೆ ಬಂದು ದೂರು ನೀಡುತ್ತಾಳೆ. ಅಲ್ಲಿ ಇರುವ ದಕ್ಷ ಪೊಲೀಸ್​ ಅಧಿಕಾರಿ ಅರವಿಂದ್​ಗೆ (ಪ್ರಜ್ವಲ್​) ಈ ಕೇಸ್​ ಬಹಳ ಸವಾಲಾಗಿ ಪರಿಣಮಿಸುತ್ತದೆ. ಪ್ರತಿ ಹಂತದಲ್ಲೂ ಅನುಮಾನ ಹೆಚ್ಚುತ್ತದೆ. ಆದರೆ ಅಪರಾಧಿ ಯಾರು ಎಂಬುದನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಅದರ ನಡುವೆ ಹೊಸ ಪಾತ್ರಗಳು ಕೂಡ ಎಂಟ್ರಿ ಪಡೆದುಕೊಳ್ಳುತ್ತವೆ. ನಂತರ ಬರುವುದು ಅಸಲಿ ಟ್ವಿಸ್ಟ್​. ಹಾಗಾದರೆ ಕೊಲೆ ಮಾಡಿದವರು ಯಾರು? ಆ ಕೊಲೆಯ ಹಿಂದಿನ ಉದ್ದೇಶ ಏನು? ಕಥಾನಾಯಕಿ ಹೇಳಿದ್ದು ನಿಜವೋ ಸುಳ್ಳೋ ಎಂಬುದೆಲ್ಲ ತಿಳಿಯಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.

ಮೇಘನಾ ರಾಜ್​ಗೆ ಸಖತ್ ಇಷ್ಟವಾಯ್ತು ‘ಆಚಾರ್ ಆ್ಯಂಡ್ ಕೋ’ ಸಿನಿಮಾ; ಕಾರಣ ತಿಳಿಸಿದ ನಟಿ

ಮೇಘನಾಗೆ ಮೆಚ್ಚುಗೆ:

ನಟಿ ಮೇಘನಾ ರಾಜ್​ ಅವರಿಗೆ ಈ ಸಿನಿಮಾದಲ್ಲಿ ಸವಾಲಿನ ಪಾತ್ರ ಇದೆ. ಎರಡು ಡಿಫರೆಂಟ್​ ಶೇಡ್​ ಇರುವ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಕಥೆ ಅವರ ಸುತ್ತವೇ ಸುತ್ತುತ್ತದೆ. ಇದೊಂದು ನಾಯಕಿ ಪ್ರಧಾನ ಸಿನಿಮಾ ಆದ್ದರಿಂದ ಮೇಘನಾ ರಾಜ್​ ಅವರು ಹೆಚ್ಚು ಸ್ಕ್ರೀನ್​ ಸ್ಪೇಸ್​ ಪಡೆದುಕೊಂಡಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ‘ತತ್ಸಮ ತದ್ಭವ’ ಸಿನಿಮಾ ಇಷ್ಟ ಆಗಲಿದೆ. ಮೇಘನಾ ರಾಜ್​ ಅವರ ಕಮ್​ಬ್ಯಾಕ್​ಗೆ ಸೂಕ್ತವಾದಂತಹ ಕಥೆ ಈ ಸಿನಿಮಾದಲ್ಲಿದೆ.

ಮೆರುಗು ತಂದ ಪ್ರಜ್ವಲ್​ ದೇವರಾಜ್​:

ನಟ ಪ್ರಜ್ವಲ್​ ದೇವರಾಜ್​ ಅವರದ್ದು ‘ತತ್ಸಮ ತದ್ಭವ’ ಸಿನಿಮಾದಲ್ಲಿ ಹೀರೋ ಪಾತ್ರ ಅಲ್ಲ. ಆದರೂ ಕೂಡ ಅವರು ಹೀರೋ ರೀತಿಯಲ್ಲೇ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಕಥೆಗೆ ಪ್ರಮುಖ ತಿರುವುಗಳನ್ನು ನೀಡುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಂದಾಗಿ ಈ ಚಿತ್ರದ ಮೆರುಗು ಹೆಚ್ಚಿದೆ. ಇನ್ನುಳಿದಂತೆ ಬಾಲಾಜಿ ಮನೋಹರ್​, ಅರವಿಂದ್​ ಅಯ್ಯರ್​, ಗಿರಿಜಾ ಲೋಕೇಶ್​, ಶ್ರುತಿ, ಟಿ.ಎಸ್​. ನಾಗಾಭರಣ, ರಾಜಶ್ರೀ ಪೊನ್ನಪ್ಪ ಅವರ ಪಾತ್ರಗಳು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪರಿಣಾಮಕಾರಿ ಆಗಿವೆ.

ಇದನ್ನೂ ಓದಿ: Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ

ಪ್ರೇಕ್ಷಕರ ತಲೆಗೆ ಕೆಲಸ:

ಬೇರೆ ಸಿನಿಮಾಗಳಂತೆ ಗಮನ ಎತ್ತಲೋ ಇಟ್ಟುಕೊಂಡು ‘ತತ್ಸಮ ತದ್ಭವ’ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ, ಈ ಸಿನಿಮಾದ ಕಥೆಯು ಪ್ರೇಕ್ಷಕರ ತಲೆಗೆ ಕೆಲಸ ಕೊಡುತ್ತದೆ. ಎಲ್ಲ ದೃಶ್ಯಗಳನ್ನು ಬಹಳ ಗಮನವಹಿಸಿ ನೋಡಿದರೆ ಮಾತ್ರ ಅಸಲಿ ಕಹಾನಿ ಏನು ಎಂಬುದು ಅರ್ಥವಾಗುತ್ತದೆ. ಅತ್ತಿತ್ತ ನೋಡಿದರೆ ಲಿಂಕ್​ ಮಿಸ್​ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಪ್ರಕಾರದ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರಿಗೆ ‘ತತ್ಸಮ ತದ್ಭವ’ ಹಿಡಿಸುತ್ತದೆ. ಗಮನ ಬೇರೆಡೆಗೆ ಇಟ್ಟುಕೊಂಡು ಅರೆಬರೆ ಸಿನಿಮಾ ನೋಡಿದರೆ ರುಚಿಸದೇ ಇರಬಹುದು. ಬೇರೆ ಬೇರೆ ಕಾಲಘಟ್ಟದಲ್ಲಿ ಕಥೆಯನ್ನು ಹೇಳುವ ಕೆಲವು ದೃಶ್ಯಗಳಲ್ಲಿ ಈ ಸಿನಿಮಾ ಗೊಂದಲ ಮೂಡಿಸುತ್ತದೆ. ಎರಡನೇ ಬಾರಿ ನೋಡಿದರೆ ಮಾತ್ರ ಗ್ರಹಿಕೆಗೆ ಸಿಗುವಂತಹ ನಿರೂಪಣೆ ಈ ಚಿತ್ರದಲ್ಲಿದೆ.

ಚುರುಕಾಗಿ, ಚುಟುಕಾಗಿ

‘ತತ್ಸಮ ತದ್ಭವ’ ಸಿನಿಮಾದ ಅವಧಿ ಕೇವಲ 2 ಗಂಟೆ 2 ನಿಮಿಷ ಮಾತ್ರ ಇದೆ. ಅಷ್ಟರೊಳಗೆ ಹೇಳಬೇಕಾದ ಕಥೆಯನ್ನು ಬಹಳ ಚುರುಕಾಗಿ, ಚುಟುಕಾಗಿ ಹೇಳಿ ಮುಗಿಸಲಾಗಿದೆ. ಹಾಗಾಗಿ ಈ ಸಿನಿಮಾ ಎಲ್ಲಿಯೂ ಬೋರು ಹೊಡೆಯುವುದಿಲ್ಲ. ಆರಂಭದಲ್ಲಿ ಕಥೆ ತೆರೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಇಂಟರ್​ವಲ್​ ಬಳಿಕ ಚಿತ್ರದ ವೇಗ ಹೆಚ್ಚುತ್ತದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್​ ಅವರು ಹಿನ್ನೆಲೆ ಸಂಗೀತದಲ್ಲಿ ಹಾಗೂ ‘ದೂರಿ ಲಾಲಿ..’ ಹಾಡಿನಲ್ಲಿ ಇಷ್ಟವಾಗುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು