ಸಿನಿಮಾ ವಿಮರ್ಶೆ: ಒಳಿತು-ಕೆಡುಕು ನಡುವಿನ ಸಂಘರ್ಷ ನಿರ್ಧರಿಸುವ ‘ಟಾಸ್’

ಸಿನಿಮಾ ವಿಮರ್ಶೆ: ಒಳಿತು-ಕೆಡುಕು ನಡುವಿನ ಸಂಘರ್ಷ ನಿರ್ಧರಿಸುವ ‘ಟಾಸ್’
Toss Review
Image Credit source: Tv9 Kannada

ಟಾಸ್

UA
  • Time - 142 Minutes
  • Released - September 18, 2026
  • Language - Kannada
  • Genre - Action, Drama
Cast - ಅರ್ಜುನ್ ಕಾಪಿಕಾಡ್, ಸುತೇಜ್ ಶೆಟ್ಟಿ, ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಗರುಡಾ ರಾಮ್, ಬಾಲಾಜಿ ಮನೋಹರ್ ಮುಂತಾದವರು.
Director - ಅರ್ಜುನ್ ಕಾಪಿಕಾಡ್,
3
Critic's Rating

Updated on: Sep 20, 2026 | 1:02 PM

ಕರಾವಳಿ ಭಾಗದ ಕಥೆಗಳನ್ನು ಇಷ್ಟಪಡುವ ಒಂದು ಪ್ರೇಕ್ಷಕ ವರ್ಗವಿದೆ. ಆ ಭಾಗದ ಫಿಲ್ಮ್ ಮೇಕರ್​ಗಳ ಬಗ್ಗೆ ಸಿನಿಪ್ರಿಯರಿಗೆ ಭರವಸೆ ಕೂಡ ಇದೆ. ಅಲ್ಲಿನ ಜನಪ್ರಿಯ ಕಲಾವಿದರೇ ಪಾತ್ರವರ್ಗದಲ್ಲಿ ಹೆಚ್ಚು ತುಂಬಿಕೊಂಡಿರುವ ‘ಟಾಸ್’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾ ಕನ್ನಡ ಮತ್ತು ತುಳು ಭಾಷೆಯಲ್ಲಿ ತೆರೆಕಂಡಿದೆ. ಅರ್ಜುನ್ ಕಾಪಿಕಾಡ್ ಅವರು ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿ ಕೂಡ ನಟಿಸಿದ್ದಾರೆ. ದೇವದಾಸ್ ಕಾಪಿಕಾಡ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ಒಂದು ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಟಾಸ್ ಸಿನಿಮಾ ವಿಮರ್ಶೆ ಇಲ್ಲಿದೆ..

‘ಟಾಸ್’ ಸಿನಿಮಾವನ್ನು ಪಕ್ಕಾ ಕಮರ್ಷಿಯಲ್ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ. ಒಬ್ಬ ಹೀರೋ, ಖಡಕ್ ವಿಲನ್, ಭರ್ಜರಿ ಫೈಟ್ಸ್, ಕಲರ್​ಫುಲ್ ಸಾಂಗ್ಸ್, ಕಾಮಿಡಿ ದೃಶ್ಯಗಳು, ಫ್ಯಾಮಿಲಿ ಸೆಂಟಿಮೆಂಟ್… ಹೀಗೆ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಇರುವ ಎಲ್ಲ ಅಂಶಗಳು ‘ಟಾಸ್’ ಚಿತ್ರದಲ್ಲಿವೆ. ಇಂಥ ಮಾದರಿಯ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಖುಷಿ ಕೊಡುತ್ತದೆ.

ಈ ಚಿತ್ರದ ಹೈಲೈಟ್ ಏನೆಂದರೆ ತುಳುನಾಡಿನ ಪಾತ್ರವರ್ಗ. ಅರ್ಜುನ್ ಕಾಪಿಕಾಡ್, ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ದೇವದಾಸ್ ಕಾಪಿಕಾಡ್, ಪುಷ್ಪರಾಜ್ ಬೊಳ್ಳಾರ್ ಮುಂತಾದವರು ಒಟ್ಟಿಗೆ ಅಭಿನಯಿಸಿದ್ದಾರೆ. ಹಾಸ್ಯ ದೃಶ್ಯಗಳಲ್ಲಿ ಈ ಕಲಾವಿದರ ಸಂಗಮ ಆಗಿರುವುದರಿಂದ ‘ಟಾಸ್’ ಚಿತ್ರದ ಮೇಲೆ ನಿರೀಕ್ಷೆ ಮೂಡುವುದು ಸಹಜ ಆಗಿದೆ. ಅದಕ್ಕಾಗಿ ಹಲವು ದೃಶ್ಯಗಳು ಮೀಸಲಾಗಿವೆ.

ದೇವದಾಸ್ ಕಾಪಿಕಾಡ್ ಅವರು ಬರೆದ ಕಥೆ ಸರಳವಾಗಿದೆ. ರಂಗಭೂಮಿ ನಂಬಿ ಬದುಕುವ ಕಲಾವಿದನ ಜೀವನದ ಬಗ್ಗೆ ಈ ಕಥೆ ಇದೆ. ಬಣ್ಣ ಹಚ್ಚಿ ನಾಟಕ ಮಾಡುವ ಕಲಾವಿದನನ್ನು ಕೆಲವರು ಕೀಳಾಗಿ ಕಾಣುತ್ತಾರೆ. ಆ ನೋವಿನಲ್ಲೇ ಆತನ ಹೆಂಡತಿ ಸಾಯುತ್ತಾಳೆ. ಆತನ ಮಗ ದೊಡ್ಡವನಾಗಿ ತಂದೆಯ ಬೆನ್ನಿಗೆ ನಿಲ್ಲುತ್ತಾನೆ. ಅವಮಾನ ಮಾಡುವವರಿಗೆ ತಕ್ಕ ಪಾಠ ಕಲಿಸುತ್ತಾನೆ. ಜೊತೆಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಕೂಡ ಹೋರಾಡುತ್ತಾನೆ. ಈ ಸರಳವಾದ ಕಥೆಯನ್ನು ಸಾಧ್ಯವಾದಷ್ಟು ಲವಲವಿಕೆಯಿಂದ ತೆರೆಗೆ ತರಲು ಅರ್ಜುನ್ ಕಾಪಿಕಾಡ್ ಅವರು ಪ್ರಯತ್ನಿಸಿದ್ದಾರೆ.

ಅಷ್ಟಕ್ಕೂ ‘ಟಾಸ್’ ಎಂಬ ಶೀರ್ಷಿಕೆ ಯಾಕೆ? ಹೀರೋ ಚಿಕ್ಕವನಾಗಿದ್ದಾಗ ಆತನ ತಾಯಿ ಸರಿ-ತಪ್ಪು ನಿರ್ಧರಿಸಲು ಟಾಸ್ ಹಾಕುತ್ತಿರುತ್ತಾಳೆ. ಯಾವುದೇ ಗೊಂದಲ ಇದ್ದಾಗಲೂ ಟಾಸ್ ಹಾಕುವ ಮೂಲಕ ಅದನ್ನು ಪರಿಹರಿಸಿಕೊಳ್ಳುತ್ತಾಳೆ. ಹೆಡ್ ಬಿದ್ದರೆ ಮುನ್ನುಗ್ಗಬೇಕು, ಟೇಲ್ ಬಿದ್ದರೆ ತಾಳ್ಮೆಯಿಂದ ಇರಬೇಕು ಎಂಬುದು ಆಕೆಯ ನಂಬಿಕೆ ಆಗಿರುತ್ತದೆ. ಬಳಿಕ ಹೀರೋ ಕೂಡ ದೊಡ್ಡವನಾದ ಮೇಲೆ ಇದೇ ನಿಯಮ ಅನುಸರಿಸುತ್ತಾನೆ. ಕೆಟ್ಟದ್ದರ ವಿರುದ್ಧ ಸಮರ ಸಾರುವ ಸಮಯ ಬಂದಾಗ ಟಾಸ್ ಹಾಕಿ ಆದ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಹಾಗಾಗಿ ಈ ಚಿತ್ರಕ್ಕೆ ಟಾಸ್ ಎಂದು ಹೆಸರು ಇಡಲಾಗಿದೆ.

ಈ ಚಿತ್ರದಲ್ಲಿ ಗರುಡ ರಾಮ್ ಅವರು ಮುಖ್ಯ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಕಥೆಯಲ್ಲಿ ಅವರ ಎಂಟ್ರಿ ಸ್ವಲ್ಪ ತಡವಾಗಿ ಆಗುತ್ತದೆ. ಆದರೆ ಅವರು ಬಂದ ನಂತರ ಕಥೆಗೆ ಬೇರೆ ತಿರುವು ಸಿಗುತ್ತದೆ. ಅಲ್ಲಿಯ ತನಕ ಕಾಮಿಡಿ ಮತ್ತು ಲವ್ ಟ್ರ್ಯಾಕ್​ನಲ್ಲಿ ಸಾಗುತ್ತಿದ್ದ ಕಥೆಗೆ ಗರುಡ ರಾಮ್ ಅವರು ತಮ್ಮ ಎಂಟ್ರಿಯಿಂದ ಆ್ಯಕ್ಷನ್ ಸ್ಪರ್ಶ ನೀಡುತ್ತಾರೆ. ಅವರ ಖಡಕ್ ಲುಕ್ ಮತ್ತು ನಟನೆಯಿಂದಾಗಿ ಚಿತ್ರದ ತೂಕ ಹೆಚ್ಚಿದೆ.

ಇದನ್ನೂ ಓದಿ: ತುಳು, ಕನ್ನಡ ‘ಟಾಸ್’ ಸಿನಿಮಾಗೆ ಸಾಥ್ ನೀಡಿದ ‘ಗೋಲ್ಡನ್ ಸ್ಟಾರ್’ ಗಣೇಶ್, ಶಿಲ್ಪಾ

ನಟ ಅರ್ಜುನ್ ಕಾಪಿಕಾಡ್ ಮತ್ತು ನಟಿ ಸುತೇಜ್ ಶೆಟ್ಟಿ ಅವರ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ. ಹಾಡುಗಳಲ್ಲಿ ಅವರಿಬ್ಬರ ಕೆಮಿಸ್ಟ್ರಿ ಇನ್ನಷ್ಟು ಆಕರ್ಷಕವಾಗಿ ಕಾಣಿಸಿದೆ. ಆದರೆ ಅವರಿಬ್ಬರ ನಡುವಿನ ಲವ್ ಸ್ಟೋರಿ ಇನ್ನೂ ಚೆನ್ನಾಗಿ ಇರಬೇಕಿತ್ತು ಎನಿಸುತ್ತದೆ. ಆ ಬಗ್ಗೆ ಗಮನ ಹರಿಸುವುದು ಅಗತ್ಯವಿತ್ತು. ಆ್ಯಕ್ಷನ್ ವಿಚಾರದಲ್ಲಿ ಅರ್ಜುನ್ ಅವರು ಹಿಂದೆ ಬಿದ್ದಿಲ್ಲ. ನಟ ಬಾಲಾಜಿ ಮನೋಹರ್ ಅವರು ಒಂದು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us