ಸಮಂತಾ (Samantha) ಅವರು ಯಶೋದ (Yashoda Movie) ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಈ ಚಿತ್ರದಲ್ಲಿ ಅವರು ಬಾಡಿಗೆ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇಂದು (ನವೆಂಬರ್ 11) ರಿಲೀಸ್ ಆಗಿದೆ. ಈ ಚಿತ್ರ ನೋಡಿದ ಎಲ್ಲರೂ ಮೆಚ್ಚುಗೆಯ ಮಾತನ್ನು ಆಡುತ್ತಿದ್ದಾರೆ. ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದೆ ಎಂದು ಕೆಲವರು ಹೇಳಿದ್ದಾರೆ. ಕೆಲವರು ಇದೊಂದು ಉತ್ತಮ ಚಿತ್ರ ಎಂದು ತೀರ್ಪು ನೀಡಿದ್ದಾರೆ.
ಸಮಂತಾ ಅವರು ಸದ್ಯ ಅನಾರೋಗ್ಯದಿಂದ ಬಳುತ್ತಿದ್ದಾರೆ. ವಿಚಿತ್ರ ಕಾಯಿಲೆ ಅವರಿಗೆ ಅಂಟಿದ್ದು, ಇದರಿಂದ ಅವರಿಗೆ ಸ್ನಾಯುಗಳಲ್ಲಿ ನೋವು ಶುರುವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಆದರೆ, ಇದಕ್ಕೆ ಚಿಕಿತ್ಸೆ ಸಿಗದೆ ಇದ್ದರೆ ತೊಂದರೆ ಆಗೋದು ಖಚಿತ ಎಂದು ವೈದ್ಯರು ಹೇಳಿದ್ದರು. ಇದರ ಮಧ್ಯೆಯೇ ಸಮಂತಾ ಅವರು ‘ಯಶೋದಾ’ ಡಬ್ಬಿಂಗ್ ಮಾಡಿದ್ದರು. ಕೈಗೆ ಡ್ರಿಪ್ ಹಾಕಿಕೊಂಡು ಅವರು ಡಬ್ಬಿಂಗ್ ಕೆಲಸ ಪೂರ್ಣಗೊಳಿಸಿದ ಫೋಟೋ ವೈರಲ್ ಆಗಿತ್ತು. ಅವರು ಈ ಪರಿ ಶ್ರಮ ಹಾಕಿರುವುದು ಫಲ ನೀಡಿದೆ.
‘ಯಶೋದಾ’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘ಮೊದಲಾರ್ಧ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧ ಭಾವನಾತ್ಮಕವಾಗಿದೆ. ಒಂದು ಉತ್ತಮ ಸಿನಿಮಾ. ಬಿಜಿಎಂ ಉತ್ತಮವಾಗಿದೆ’ ಎಂದು ಸಮಂತಾ ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ‘ಒಂದು ಒಳ್ಳೆಯ ಸಿನಿಮಾ. ಇದು ಒಟಿಟಿ ಸಿನಿಮಾ ಅಲ್ಲ. ಚಿತ್ರಮಂದಿರದಲ್ಲೂ ಈ ಸಿನಿಮಾನ ಕಣ್ತುಂಬಿಕೊಳ್ಳಬಹುದು’ ಎಂದು ಕೆಲವರು ಬರೆದುಕೊಂಡಿದ್ದಾರೆ.
#Yashoda Engaging first half. Emotional second half. Overall all decent movie ?. Manisharma bgm ?. #SamanthaRuthPrabhu is good.#YashodaTheMovie pic.twitter.com/PUb6qW6eDh
— hari (@harinad98) November 11, 2022
ಕೆಲವರಿಗೆ ಈ ಚಿತ್ರ ತುಂಬಾನೇ ಇಷ್ಟವಾಗಿದೆ. ‘ಬಹಳ ಸಮಯದ ನಂತರ ಒಂದೊಳ್ಳೆಯ ಚಿತ್ರ ನೋಡಿದೆ. ಆನಂದ ಭಾಷ್ಪ ಬರುತ್ತಿದೆ. ಸಮಂತಾ ನಿಮ್ಮ ಪರ್ಫಾರ್ಮೆನ್ಸ್ ಅದ್ಭುತವಾಗಿದೆ. ನಾನು ನಿಮ್ಮ ಜತೆ ಇದ್ದೇವೆ. ಒಂದು ಬ್ಲಾಕ್ಬಸ್ಟರ್ ಸಿನಿಮಾ ನೀಡಿದ ನಿಮಗೆ ಧನ್ಯವಾದ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.
After long time I have seen a great Movie Happy Tears ?? @Samanthaprabhu2♥‿♥Your Performance is on Top of Top
We are there For You
Now you are there For Us
Thanks A lot For Giving This Blockbuster #Yashoda pic.twitter.com/qwuc3ZksLM— Naveen Tony (@NaveenNTRFanA1) November 11, 2022
ಇದನ್ನೂ ಓದಿ: Samantha: ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ ಮೊದಲ ಬಾರಿ ಮುಖ ತೋರಿಸಿದ ನಟಿ ಸಮಂತಾ
ಸಮಂತಾ ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಮರೆದಿದ್ದಾರೆ. ಇದು ಅನೇಕರಿಗೆ ಇಷ್ಟವಾಗಿದೆ. ಕೆಲವರು ಚಿತ್ರದ ಕಥೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಾರೆ ಸಮಂತಾ ಈ ಚಿತ್ರದ ಮೂಲಕ ಒಂದು ದೊಡ್ಡ ಗೆಲುವು ಕಾಣುವ ಸೂಚನೆ ಸಿಕ್ಕಿದೆ. ಇತ್ತೀಚೆಗೆ ಸಂದರ್ಶನ ನೀಡುತ್ತಾ ಸಮಂತಾ ಕಣ್ಣೀರು ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.