AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ದೇವರಕೊಂಡ-ಮೃಣಾಲ್ ಠಾಕೂರ್ ಜೋಡಿಯ ಹೊಸ ಚಿತ್ರಕ್ಕೆ ‘ಗೀತ ಗೋವಿಂದಂ’ ನಿರ್ದೇಶಕನ ಸಾರಥ್ಯ

Mrunal Thakur New Movie: ಮೃಣಾಲ್ ಠಾಕೂರ್ ಅವರು ವಿಜಯ್ ದೇವರಕೊಂಡಗೆ ನಾಯಕಿಯಾಗಿ ನಟಿಸುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಹೈದರಾಬಾದ್​​ನಲ್ಲಿ ಈ ಚಿತ್ರದ ಮುಹೂರ್ತ ನಡೆದಿದೆ.

ವಿಜಯ್ ದೇವರಕೊಂಡ-ಮೃಣಾಲ್ ಠಾಕೂರ್ ಜೋಡಿಯ ಹೊಸ ಚಿತ್ರಕ್ಕೆ ‘ಗೀತ ಗೋವಿಂದಂ’ ನಿರ್ದೇಶಕನ ಸಾರಥ್ಯ
ವಿಜಯ್ ದೇವರಕೊಂಡ-ಮೃಣಾಲ್ ಠಾಕೂರ್ ಹೊಸ ಚಿತ್ರಕ್ಕೆ ಮುಹೂರ್ತ
ಮದನ್​ ಕುಮಾರ್​
|

Updated on: Jun 14, 2023 | 7:06 PM

Share

ನಟಿ ಮೃಣಾಲ್​ ಠಾಕೂಲ್ (Mrunal Thakur)​ ಅವರಿಗೆ ‘ಸೀತಾ ರಾಮಂ’ ಸಿನಿಮಾದಿಂದ ಸಿಕ್ಕ ಯಶಸ್ಸು ಬಹಳ ದೊಡ್ಡದು. ದಕ್ಷಿಣ ಭಾರತದಲ್ಲಿ ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಅದು. ತೆಲುಗಿನ ಆ ಚಿತ್ರಕ್ಕೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಸಿಕ್ಕಿತು. ಈಗ ಟಾಲಿವುಡ್​ನಿಂದ ಮೃಣಾಲ್​ ಠಾಕೂರ್​ ಅವರಿಗೆ ಹೊಸ ಆಫರ್​ಗಳು ಬರುತ್ತಿವೆ. ಗುಡ್​ ನ್ಯೂಸ್​ ಏನೆಂದರೆ, ಹೊಸ ಸಿನಿಮಾದಲ್ಲಿ ಅವರು ವಿಜಯ್​ ದೇವರಕೊಂಡ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಲ್ಲಿ ಸಖತ್​ ನಿರೀಕ್ಷೆ ಮೂಡುವಂತಾಗಿದೆ. ವಿಜಯ್​ ದೇವರಕೊಂಡ (Vijay Devarakonda) ಮತ್ತು ಮೃಣಾಲ್​ ಠಾಕೂರ್​ ಅವರು ಜೋಡಿಯಾಗಿ ನಟಿಸಲಿರುವ ಈ ಸಿನಿಮಾ ಈಗ ಸೆಟ್ಟೇರಿದೆ. ಇಂದು (ಜೂನ್​ 14) ಹೈದರಾಬಾದ್​​ನಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ.

ಟಾಲಿವುಡ್​ನ ಸ್ಟಾರ್​ ಹೀರೋ ವಿಜಯ್ ದೇವರಕೊಂಡ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ ಸಿನಿಮಾ ‘ಗೀತ ಗೋವಿಂದಂ’. 2018ರಲ್ಲಿ ಪರಶುರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಆ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸದ್ದು ಮಾಡಿತ್ತು. ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದ ‘ಗೀತ ಗೋವಿಂದಂ’ ಸಿನಿಮಾಗೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದರು. ಆ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅದೇ ಚಿತ್ರತಂಡ ಮಗದೊಮ್ಮೆ ಕೈ ಜೋಡಿಸುತ್ತದೆ ಎಂದು ಸುದ್ದಿ ಹರಡಿತ್ತು. ಆದರೆ ಅದಕ್ಕೆ ಸಮಯವೇ ಕೂಡಿ ಬಂದಿರಲಿಲ್ಲ. ಬರೋಬ್ಬರಿ 6 ವರ್ಷದ ನಂತರ ‘ಗೀತ ಗೋವಿಂದಂ’ ಚಿತ್ರದ ಹೀರೋ ಮತ್ತು ಡೈರೆಕ್ಟರ್​ ಸಂಗಮ ಆಗುತ್ತಿದೆ. ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಅವರ ಕಾಂಬಿನೇಷನ್​ನ ಹೊಸ ಸಿನಿಮಾ ಈಗ ಸೆಟೇರಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಮೃಣಾಲ್​ ಠಾಕೂರ್ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: Mrunal Thakur: ‘ನ್ಯಾಷನಲ್​ ಕ್ರಶ್​’ ಬಿರುದು ಪಡೆದುಕೊಂಡ ಮೃಣಾಲ್​ ಠಾಕೂರ್​; ಈಗ ರಶ್ಮಿಕಾ ಮಂದಣ್ಣ ಪಾಡು ಏನು?

ಕೆಲವೇ ದಿನಗಳ ಹಿಂದೆ ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಹಾಗೂ ಶಿರೀಶ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದು, ವಾಸು ವರ್ಮಾ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಅವರು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಗೋವರ್ಧನ್ ರಾವ್ ದೇವರಕೊಂಡ ಮೊದಲ ಶಾಟ್ ನಿರ್ದೇಶಿಸಿದರು. ಸತ್ತಿ ರಂಗಯ್ಯ ಅವರು ಕ್ಯಾಮೆರಾಗೆ ಚಾಲನೆ ನೀಡಿದರು.

ಇದನ್ನೂ ಓದಿ: Mrunal Thakur: ನಟಿ ಮೃಣಾಲ್​ ಠಾಕೂರ್ ಸಂಬಳ ಎಷ್ಟು? ‘ಸೀತಾ ರಾಮಂ’ ಸೂಪರ್​ ಹಿಟ್​ ಆದ್ಮೇಲೆ ಹೆಚ್ಚಿದೆ ಡಿಮ್ಯಾಂಡ್​​

ಈಗ ಈ ಸಿನಿಮಾದ ಕೆಲಸಗಳು ಪ್ರೀ-ಪ್ರೊಡಕ್ಷನ್ ಹಂತದಲ್ಲಿವೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭ ಆಗಲಿದೆ. ‘ಸೀತಾ ರಾಮಂ’ ಸಿನಿಮಾ ಮೂಲಕ ಸೌತ್ ಸಿನಿಪ್ರಿಯರಿಗೆ ಪರಿಚಿತರಾಗಿರುವ ಮೃಣಾಲ್ ಠಾಕೂರ್ ಅವರು ವಿಜಯ್ ದೇವರಕೊಂಡಗೆ ನಾಯಕಿಯಾಗಿ ನಟಿಸುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಅವರು ದಿಲ್ ರಾಜು ಹಾಗೂ ಶಿರೀಶ್ ಜೊತೆ ಕೈ ಜೋಡಿಸಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್​ನ 54ನೇ ಸಿನಿಮಾ ಇದಾಗಿದೆ. ಅದ್ದೂರಿ ಬಜೆಟ್​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ನಟಿ ಮೃಣಾಲ್ ಠಾಕೂರ್​​ಗೆ ಬಂತು ಮದುವೆ ಪ್ರಪೋಸಲ್​; ಒಂದೇ ಮಾತಲ್ಲಿ ರಿಜೆಕ್ಟ್ ಮಾಡಿದ ನಟಿ

ಇನ್ನುಉಳಿದ ಪಾತ್ರವರ್ಗದ ಬಗ್ಗೆ ಆದಷ್ಟು ಬೇಗ ಚಿತ್ರತಂಡ ಮಾಹಿತಿ ನೀಡಲಿದೆ. ಕೆ.ಯು. ಮೋಹನನ್ ಛಾಯಾಗ್ರಹಣ, ಗೋಪಿಸುಂದರ್ ಸಂಗೀತ ನಿರ್ದೇಶನ, ಎ.ಎಸ್. ಪ್ರಕಾಶ್ ಕಲಾ ನಿರ್ದೇಶನ, ಮಾರ್ತಾಂಡ್ ಕೆ. ವೆಂಕಟೇಶ್ ಅವರ ಸಂಕಲನ ಸಿನಿಮಾಗೆ ಇರಲಿದೆ. ಹೈದರಾಬಾದ್​ನಲ್ಲಿ ಗ್ರ್ಯಾಂಡ್​ ಆಗಿ ನಡೆದ ಮುಹೂರ್ತ ಸಮಾರಂಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಸ್ವತಃ ಮೃಣಾಲ್​ ಠಾಕೂರ್​ ಅವರು ಈ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ವಿಜಯ್​ ದೇವರಕೊಂಡ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್