ಟ್ಯೂಷನ್ ಟೀಚರ್ ಮುಟ್ಟಬಾರದ ಜಾಗದಲ್ಲೆಲ್ಲ ಕೈ ಹಾಕಿದ್ದ; ಲೈಂಗಿಕ ದೌರ್ಜನ್ಯ ನೆನೆದಿದ್ದ ಬಾಲಿವುಡ್​ ನಟಿ

| Updated By: Digi Tech Desk

Updated on: Jun 09, 2021 | 3:21 PM

Munmun Dutta Video: 2017ರಲ್ಲಿ ಮೀಟೂ ಆಂದೋಲನ ಆರಂಭವಾದ ನಂತರದಲ್ಲಿ ಸಾಕಷ್ಟು ನಟಿಯರು ತಮ್ಮ ಒಡಲಲ್ಲಿ ಇಟ್ಟುಕೊಂಡಿದ್ದ ಕಹಿ ಘಟನೆಯ ಮೂಟೆಯನ್ನು ಹೊರ ಹಾಕಿದ್ದರು. ಶಿಕ್ಷಣ ಪಡೆಯುವ ಸಂದರ್ಭದಲ್ಲಿ, ವೃತ್ತಿ ಜೀವನದಲ್ಲಿ ಏನೆಲ್ಲ ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದರು

ಟ್ಯೂಷನ್ ಟೀಚರ್ ಮುಟ್ಟಬಾರದ ಜಾಗದಲ್ಲೆಲ್ಲ ಕೈ ಹಾಕಿದ್ದ; ಲೈಂಗಿಕ ದೌರ್ಜನ್ಯ ನೆನೆದಿದ್ದ ಬಾಲಿವುಡ್​ ನಟಿ
ಮುನ್​ಮುನ್​ ದತ್ತ
Follow us on

ಸ್ಯಾಂಡಲ್​​ವುಡ್​, ಬಾಲಿವುಡ್​ ಸೇರಿ ಎಲ್ಲಾ ಚಿತ್ರರಂಗದಲ್ಲಿ ಮೀಟೂ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅನೇಕರು ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದರು. ಬಾಲಿವುಡ್​ ನಟಿ ಮುನ್​ಮುನ್​ ದತ್ತ​ ಕೂಡ ಚಿಕ್ಕ ವಯಸ್ಸಿನಲ್ಲಾದ ಲೈಂಗಿಕ ದೌರ್ಜನ್ಯದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಾದ ಈ ಘಟನೆ ಬಗ್ಗೆ ಅವರು ಸವಿಸ್ತಾರವಾಗಿ ಬರೆದುಕೊಂಡಿದ್ದರು.

2017ರಲ್ಲಿ ಮೀಟೂ ಆಂದೋಲನ ಆರಂಭವಾದ ನಂತರದಲ್ಲಿ ಸಾಕಷ್ಟು ನಟಿಯರು ತಮ್ಮ ಒಡಲಲ್ಲಿ ಇಟ್ಟುಕೊಂಡಿದ್ದ ಕಹಿ ಘಟನೆಯ ಮೂಟೆಯನ್ನು ಹೊರ ಹಾಕಿದ್ದರು. ಶಿಕ್ಷಣ ಪಡೆಯುವ ಸಂದರ್ಭದಲ್ಲಿ, ವೃತ್ತಿ ಜೀವನದಲ್ಲಿ ಏನೆಲ್ಲ ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆ ಬಗ್ಗೆ ಮುನ್​ಮುನ್​ ದತ್​ ಉದ್ದನೆಯ ಪತ್ರ ಬರೆದಿದ್ದರು. ಪಕ್ಕದ ಮನೆಯ ಅಂಕಲ್​, ಸೋದರ ಸಂಬಂಧಿ ಹಾಗೂ ಶಿಕ್ಷಕರಿಂದ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತಂತೆ.

‘ಈ ನೆನಪನ್ನು ನೆನೆಯುವಾಗ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ನನ್ನ ಪಕ್ಕದ ಮನೆಯ ಅಂಕಲ್​ ಬಗ್ಗೆ ನನಗೆ ಭಯವಿತ್ತು. ಆತ ಅವಕಾಶ ಸಿಕ್ಕಾಗೆಲ್ಲ ನನ್ನನ್ನು ಹಿಡಿದುಕೊಳ್ಳುತ್ತಿದ್ದ ಮತ್ತು ಆ ಬಗ್ಗೆ ಯಾರೊಂದಿಗೂ ಮಾತನಾಡದಂತೆ ಬೆದರಿಕೆ ಹಾಕುತ್ತಿದ್ದ. ನನ್ನ ಸೋದರ ಸಂಬಂಧಿ ನನ್ನನ್ನು ನೋಡುವ ದೃಷ್ಟಿ ಸರಿಯಾಗಿ ಇರಲಿಲ್ಲ. ನಾನು ಆಸ್ಪತ್ರೆಯಲ್ಲಿ ಜನಿಸಿದಾಗ ನನ್ನನ್ನು ನೋಡಿದ ಆ ವ್ಯಕ್ತಿ, 13 ವರ್ಷಗಳ ನಂತರ ಬದಲಾಗಿದ್ದ. ಅವನು ನನ್ನ ದೇಹವನ್ನು ಸ್ಪರ್ಶಿಸುವ ರೀತಿ ಸರಿಯಾಗಿರಲಿಲ್ಲ’ ಎಂದು ಅವರು ಸೋದರ ಸಂಬಂಧಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

‘ಟ್ಯೂಷನ್​ ನೀಡುವ ಶಿಕ್ಷಕ ನನ್ನ ಕೆಳ ಭಾಗದ ಒಳ ಉಡುಪುಗಳಲ್ಲಿ ಕೈ ಹಾಕುತ್ತಿದ್ದ. ನಾನು ರಾಖಿ ಕಟ್ಟಿದ ಶಿಕ್ಷಕನೋರ್ವ ಹುಡುಗಿಯರ ಬ್ರಾ ಹೊರಗೆಳೆದು ಸ್ತನದ ಮೇಲೆ ಹೊಡೆಯುತ್ತಿದ್ದ. ಇದಕ್ಕೆಲ್ಲ ನಾವು ಈ ಬಗ್ಗೆ ಹೊರಗೆ ಮಾತನಾಡಲು ಭಯ ಪಡುತ್ತೇವೆ ಎನ್ನುವುದೇ ಕಾರಣ ಎಂದು ಹೇಳುವ ಮೂಲಕ ಅವರು ಎಲ್ಲರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

ಇದನ್ನೂ ಓದಿ: ಜಾತಿ ನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ ಮುನ್​ಮುನ್​ ದತ್ತ ವಿರುದ್ಧ ಎಫ್​ಐಆರ್​ ದಾಖಲು

Published On - 1:35 pm, Wed, 9 June 21