
‘ಕಿಲಾಡಿ ಕಿಟ್ಟು’ ಚಿತ್ರದ ಸಂಗೀತ ನಿರ್ದೇಶಕ, ಆರ್ಕೆಸ್ಟ್ರಾಗಳ ಮೂಲಕ ಮನೆ ಮಾತಾದ ಮೈಸೂರು ಮೋಹನ್ (Mysore Mohan) ಅವರು ಈಗ ಹೊಸ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೊಸ ಸಿಂಗರ್ ಹಿಮಾ ಎಂ. (Hima M) ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಇದು ಹೊಸ ವರ್ಷಕ್ಕೆ (New Year 2026) ಸಂಬಂಧಿಸಿದ ಗೀತೆ. ನ್ಯೂ ಇಯರ್ ಸೆಲೆಬ್ರೇಷನ್ ಸಮಯದಲ್ಲೇ ಈ ಗೀತೆಯನ್ನು ರಿಲೀಸ್ ಮಾಡಲಾಗಿದೆ. ಇಂಗ್ಲಿಷ್ ಸಾಹಿತ್ಯ ಇರುವ ಈ ಹಾಡು ಸುಮಧುರವಾಗಿದೆ. ಹೊಸ ಗಾಯಕಿಗೆ ಕೇಳುಗರ ಪ್ರೋತ್ಸಾಹ ಸಿಗುತ್ತಿದೆ.
‘ಮೈಸೂರು ಮೋಹನ್ ಆರ್ಕೆಸ್ಟ್ರಾ’ ಮೂಲಕ ಮೋಹನ್ ಅವರು ಕಳೆದ 60 ವರ್ಷಗಳಿಂದಲೂ ಮನರಂಜನೆ ನೀಡುತ್ತಾ ಬಂದಿದ್ದಾರೆ. ಈಗ ಅವರು ಹೊಸ ಹಾಡಿಗೆ ಸಂಗೀತ ನೀಡಿದ್ದಾರೆ. ಲಾಯರ್ ಆಗಿರುವ ಅವರು ಹಿಮಾ ಅವರು ಸಂಗೀತದಲ್ಲೂ ಆಸಕ್ತಿ ಹೊಂದಿದ್ದಾರೆ. ಅವರ ಸಂಗೀತ ಪಯಣಕ್ಕೆ ತಾಯಿ ಡಾ. ಎ.ಎನ್. ಪದ್ಮಾ ಅವರು ಬೆಂಬಲವಾಗಿ ನಿಂತಿದ್ದಾರೆ.
ಹಿಮಾ ಅವರ ಸಂಗೀತ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಅವರ ತಾಯಿ ಪದ್ಮಾ. ಸ್ವತಃ ಉತ್ತಮ ಗಾಯಕಿ ಆಗಿರುವ ಡಾ. ಪದ್ಮಾ ಅವರು ಈಗ ಮಗಳಿಗಾಗಿ ಈ ಹಾಡನ್ನು ನಿರ್ಮಿಸಿದ್ದಾರೆ. ಹಿಮಾ ಎಂ. ಅವರ ತಂದೆ ಡಾ. ಮಂಜುನಾಥ ಕೆ. ಕೂಡ ಸಂಗೀತದ ಆಸಕ್ತಿಯುಳ್ಳವರು. ಪ್ರೀ ಆ್ಯಂಡ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ‘ಶ್ರೀವಾರಿ ಮ್ಯೂಸಿಕ್ ಕಂಪನಿ’ ಮಾಡಿದೆ.
ಇದನ್ನೂ ಓದಿ: New Year 2026: ಹೊಸ ವರ್ಷ 2026: ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಏನೆಲ್ಲ ಬಂದ್, ಯಾವುದೆಲ್ಲ ಓಪನ್? ಇಲ್ಲಿದೆ ಮಾಹಿತಿ
ಈ ಹಾಡಿನ ಇಂಗ್ಲಿಷ್ ಸಾಹಿತ್ಯವನ್ನು ಗೌತಮ್ ಶ್ರೀವತ್ಸಾ ಹಾಗೂ ಗೌರವ್ ಅವರು ಬರೆದಿದ್ದಾರೆ. ಕೇಳುಗರಿಗೆ ಸ್ಫೂರ್ತಿ ತುಂಬುವಂತಹ ಸಾಹಿತ್ಯ ಈ ಹಾಡಿನಲ್ಲಿ ಇದೆ. ಈ ಹಾಡಿನಲ್ಲಿ ಸ್ವತಃ ಹಿಮಾ ಎಂ. ಮತ್ತು ಮೈಸೂರು ಮೋಹನ್ ಅವರು ಕಾಣಿಸಿಕೊಂಡಿದ್ದಾರೆ. ಸಂಗೀತ ಪ್ರಿಯರಿಗೆ ಹಾಡು ಇಷ್ಟ ಆಗುತ್ತದೆ ಎಂಬ ನಂಬಿಕೆಯಲ್ಲಿ ನ್ಯೂ ಇಯರ್ ಪ್ರಯುಕ್ತ ‘ಶ್ರೀವಾರಿ ಮ್ಯೂಸಿಕ್’ ಮೂಲಕ ರಿಲೀಸ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.