ಅನಾಯಾಸವಾಗಿ ಭಾರತದಲ್ಲೇ 800 ಕೋಟಿ ರೂಪಾಯಿ ಗಳಿಸಲಿದೆ ‘ಧುರಂಧರ್’
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾಗೆ ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಸಿನಿಮಾ ರಿಲೀಸ್ ಆಗಿ 27 ದಿನಗಳು ಆಗಿದ್ದರೂ ಕೂಡ ಇಂದಿಗೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಎಷ್ಟೋ ಹೊಸ ಸಿನಿಮಾಗಳು ತೆರೆಕಂಡರೂ ಕೂಡ ‘ಧುರಂದರ್’ ಸಿನಿಮಾ ಜನರನ್ನು ಸೆಳೆದುಕೊಳ್ಳುತ್ತಲೇ ಇದೆ.

ಹೆಚ್ಚೇನೂ ಹೈಪ್ ಇಲ್ಲದೇ ಬಿಡುಗಡೆ ಆದ ‘ಧುರಂಧರ್’ (Dhurandhar) ಸಿನಿಮಾ ಈ ಪರಿ ಕಲೆಕ್ಷನ್ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ನೋಡನೋಡುತ್ತಿದ್ದಂತೆಯೇ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 2025ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಅಲ್ಲದೇ, ಈ ಮೊದಲಿನ ಅನೇಕ ದಾಖಲೆಗಳನ್ನು ‘ಧುರಂಧರ್’ ಸಿನಿಮಾ ಅಳಿಸಿ ಹಾಕಿದೆ. ರಣವೀರ್ ಸಿಂಗ್ (Ranveer Singh) ಅವರು ಈ ಸಿನಿಮಾದಿಂದ ಬಹುದೊಡ್ಡ ಗೆಲುವು ಪಡೆದಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರ ಬೇಡಿಕೆ ಹೆಚ್ಚಾಗಿದೆ. ಬಿಡುಗಡೆಯಾಗಿ 27 ದಿನಗಳು ಕಳೆದಿದ್ದರೂ ಸಹ ‘ಧುರಂಧರ್’ ಸಿನಿಮಾದ ಕಲೆಕ್ಷನ್ (Dhurandhar Box Office Collection) ನಿಂತಿಲ್ಲ.
ದೇಶಭಕ್ತಿ ಕಥಾಹಂದರ ‘ಧುರಂಧರ್’ ಸಿನಿಮಾದಲ್ಲಿ ಇದೆ. ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದಕ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಜನರು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ರಜೆ ದಿನ, ವಾರಾಂತ್ಯ ಮಾತ್ರವಲ್ಲದೇ ವಾರದ ದಿನಗಳಲ್ಲಿ ಕೂಡ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿ ಸಿನಿಮಾದ ಕಲೆಕ್ಷನ್ ಏರುತ್ತಲೇ ಇದೆ.
ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ‘ಧುರಂಧರ್’ ಸಿನಿಮಾ 712 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಲೇ ಇದೆ. ಇದೇ ವೇಗದಲ್ಲಿ ಮುಂದುವರಿದರೆ ಅನಾಯಾಸವಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 800 ಕೋಟಿ ರೂಪಾಯಿ ಮೀರಲಿದೆ. ವಿದೇಶದ ಕಲೆಕ್ಷನ್ ಕೂಡ ಸೇರಿಸಿದರೆ ಈಗಾಗಲೇ 1000 ಕೋಟಿ ರೂಪಾಯಿ ಮೀರಿದೆ.
‘ಧುರಂಧರ್’ ಸಿನಿಮಾ ಬಿಡುಗಡೆ ಆದ ಬಳಿಕ ‘ದಿ ಡೆವಿಲ್’, ‘ಅಖಂಡ 2’, ‘ಮಾರ್ಕ್’, ‘45’, ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’, ‘ಅವತಾರ್ 3’, ‘ಅನಾಕೊಂಡ’ ಮುಂತಾದ ಸಿನಿಮಾಗಳು ಬಿಡುಗಡೆ ಆದವು. ಆದರೆ ಈ ಯಾವ ಸಿನಿಮಾಗಳಿಂದಲೂ ‘ಧುರಂಧರ್’ ಹವಾ ಕಡಿಮೆ ಮಾಡಲು ಸಾಧ್ಯವಾಗಲೇ ಇಲ್ಲ. ಎಲ್ಲ ರಾಜ್ಯಗಳಲ್ಲೂ ಈ ಸಿನಿಮಾ ಸೂಪರ್ ಸಕ್ಸಸ್ ಆಗಿದೆ.
ಇದನ್ನೂ ಓದಿ: ‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರಿಗೂ ಭಾರಿ ಜನಪ್ರಿಯತೆ ಸಿಕ್ಕಿದೆ. ವಿಶೇಷವಾಗಿ ನಟ ಅಕ್ಷಯ್ ಖನ್ನಾ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ರೆಹಮಾನ್ ಡಕಾಯಿತ್ ಎಂಬ ವಿಲನ್ ಪಾತ್ರವನ್ನು ಅವರು ಮಾಡಿದ್ದಾರೆ. ಅರ್ಜುನ್ ರಾಮ್ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಅವರ ನಟನೆಗೂ ಮೆಚ್ಚುಗೆ ಸಿಗುತ್ತಿದೆ. ರಣವೀರ್ ಸಿಂಗ್ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




