ಮತ್ತೆ ಬರಲಿದೆ ‘ದಿ ಕೇರಳ ಸ್ಟೋರಿ’; ಹೊಸ ವರ್ಷಕ್ಕೆ ಸೀಕ್ವೆಲ್ ರೆಡಿ
'ದಿ ಕೇರಳ ಸ್ಟೋರಿ 2' ಚಿತ್ರೀಕರಣ ಮುಗಿದಿದ್ದು, 2026ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. 'ಲವ್ ಜಿಹಾದ್' ಕುರಿತ ಈ ಮುಂದುವರಿದ ಭಾಗವು ಹೆಚ್ಚು ಗಂಭೀರ ಹಾಗೂ ಕರಾಳ ಕಥೆಯನ್ನು ಹೊಂದಿದೆ. ಚಿತ್ರೀಕರಣದ ವೇಳೆ ಸಂಪೂರ್ಣ ಗುಪ್ತತೆ ಕಾಪಾಡಲಾಗಿತ್ತು. ಸೆಟ್‌ನಿಂದ ಯಾವುದೇ ಮಾಹಿತಿ ಸೋರಿಕೆಯಾಗದಂತೆ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ವಿವಾದ ಸೃಷ್ಟಿಸಿವೆ. ಹಲವು ಸ್ಥಳಗಳಲ್ಲಿ ಸಿನಿಮಾಗಳನ್ನು ನಿಷೇಧಿಸಲಾಗಿದೆ. ಅಂತಹ ಒಂದು ಸಿನಿಮಾ ‘ದಿ ಕೇರಳ ಸ್ಟೋರಿ’. ಈ ಸಿನಿಮಾದಿಂದ ಒಂದು ಭಯಾನಕ ವಾಸ್ತವ ಬೆಳಕಿಗೆ ಬಂದಿತ್ತು. 2023ರಲ್ಲಿ ಬಿಡುಗಡೆಯಾದ ಸಿನಿಮಾ ‘ಲವ್ ಜಿಹಾದ್’ ವಿಷಯವನ್ನು ಆಧರಿಸಿದೆ. ಇದು ಹಲವು ಕಡೆಗಳಲ್ಲಿ ಬ್ಯಾನ್ ಆಯಿತು. ಸಿನಿಮಾ ವಿವಾದದಲ್ಲಿ ಸಿಲುಕಿದ್ದರೂ, ಸಿನಿಮಾ ಸಾಕಷ್ಟು ಹಣ ಗಳಿಸಿತು. ಸುದೀಪ್ತೋ ಸೇನ್ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಸೀಕ್ವೆಲ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಈಗ ಅಭಿಮಾನಿಗಳು ‘ದಿ ಕೇರಳ ಸ್ಟೋರಿ 2’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರ 2026ರಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗವನ್ನು ಈಗಾಗಲೇ ಕೇರಳದಲ್ಲಿ ಚಿತ್ರೀಕರಿಸಲಾಗಿದ್ದು, ವರದಿಗಳ ಪ್ರಕಾರ, ಈ ಭಾಗವು ಹೆಚ್ಚು ಗಂಭೀರ ಮತ್ತು ಕರಾಳ ಕಥೆಯನ್ನು ಒಳಗೊಂಡಿರುತ್ತದೆ. ದಿ ಕೇರಳ ಸ್ಟೋರಿ 2’ ರ ಪಾತ್ರವರ್ಗ ಮತ್ತು ಇತರ ವಿವರಗಳನ್ನು ಗೌಪ್ಯವಾಗಿಡಲಾಗಿದೆ. ‘ದಿ ಕೇರಳ ಸ್ಟೋರಿ 2’ ಚಿತ್ರೀಕರಣವನ್ನು ಈಗಾಗಲೇ ಬಹಳ ಸುರಕ್ಷಿತ ರೀತಿಯಲ್ಲಿ ಮಾಡಲಾಗಿದೆ. ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಚಿತ್ರೀಕರಣದ ಸಮಯದಲ್ಲಿ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಂಡರು.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಇನ್ನಷ್ಟು ರಾಷ್ಟ್ರ ಪ್ರಶಸ್ತಿ ಸಿಗಬೇಕು: ವಿವಾದದ ನಡುವೆ ನಿರ್ದೇಶಕನ ಹೇಳಿಕೆ
ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಇರಿಸಲಾಗಿತ್ತು. ಸೆಟ್ಗೆ ಫೋನ್ ತರುವಂತೆ ಇರಲಿಲ್ಲ. ಚಿತ್ರೀಕರಣದ ಸಮಯದಲ್ಲಿ, ನಟರು ಮತ್ತು ಇತರರಿಗೆ ಫೋನ್‌ನಲ್ಲಿ ಮಾತನಾಡಲು ಸಹ ಅವಕಾಶವಿರಲಿಲ್ಲ. ಸೆಟ್‌ನಿಂದ ಏನೂ ಸೋರಿಕೆಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಈ ಸಿನಿಮಾ ಫೆಬ್ರವರಿ 27ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.
‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಕೇವಲ ಮಹಿಳೆಯರ ಬ್ರೇನ್ವಾಶ್ ಬಗ್ಗೆ ತೋರಿಸಲಾಗಿದೆ. ಆದರೆ ಹುಡುಗರ ಬ್ರೇನ್ವಾಶ್ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಅನೇಕರು ಪ್ರಶ್ನೆ ಎತ್ತಿದ್ದರು. ನಿರ್ದೇಶಕ ಸುದೀಪ್ತೋ ಸೇನ್ ಅವರನ್ನು ಈ ಕುರಿತು ಕೆಲವರು ಪ್ರಶ್ನಿಸಿದ್ದಾರಂತೆ. ಹುಡುಗರನ್ನು ಬ್ರೇನ್ವಾಶ್ ಮಾಡಿದ್ದರ ಕುರಿತು ಸೀಕ್ವೆಲ್ ಮಾಡುವಂತೆ ಅವರಿಗೆ ಆಫರ್ ನೀಡಲಾಗಿದೆ. ಹಾಗಾಗಿ ‘ದಿ ಕೇರಳ ಸ್ಟೋರಿ 2’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:33 am, Thu, 1 January 26



