ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಇದೇ ತಿಂಗಳು ಡಿಸೆಂಬರ್ 05 ರಂದು ತೆರೆಗೆ ಬಂದಿದೆ. ಸಿನಿಮಾ ಬಿಡುಗಡೆ ಆಗಿ 15 ದಿನಗಳಿಗೂ ಹೆಚ್ಚು ಸಮಯವಾಗಿದ್ದರೂ ಸಹ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಸಹ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಈ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಸಿನಿಮಾ ಸಂಕ್ರಾಂತಿ ಹಬ್ಬದ ವೇಳೆಗೆ ನೆಟ್ಫ್ಲಿಕ್ಸ್ ಹಾಗೂ ಅಮೆಜಾನ್ ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ವತಃ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಮೈತ್ರಿ ಮೂವಿ ಮೇಕರ್ಸ್ ಸ್ಪಷ್ಟನೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ಮೈತ್ರಿ ಮೂವಿ ಮೇಕರ್ಸ್, ‘ಪುಷ್ಪ 2’ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ನಮ್ಮ ಸಿನಿಮಾ ಕನಿಷ್ಟ 56 ದಿನಗಳ ವರೆಗೆ ಯಾವುದೇ ಒಟಿಟಿಗೆ ಬಿಡುಗಡೆ ಆಗುವುದಿಲ್ಲ. ಈ ವರ್ಷ ಹಬ್ಬದ ಸೀಸನ್ಗೆ ಚಿತ್ರಮಂದಿರದಲ್ಲಿರುವ ದೊಡ್ಡ ಸಿನಿಮಾ ‘ಪುಷ್ಪ 2’ ಆಗಿದ್ದು, ಎಲ್ಲರೂ ಚಿತ್ರಮಂದಿಗಳಿಗೆ ಹೋಗಿ ಸಿನಿಮಾ ವೀಕ್ಷಿಸಿ’ ಎಂದು ನಿರ್ಮಾಪಕರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:‘ಪುಷ್ಪ 2’ ಎಫೆಕ್ಟ್, ರಾಮ್ ಚರಣ್ ಸಿನಿಮಾಕ್ಕೆ ಇಲ್ಲ ವಿಶೇಷ ಶೋ, ಭಾರಿ ನಷ್ಟ
‘ಪುಷ್ಪ 2’ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಒಟಿಟಿಗೆ ಬರಲಿದೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಹಲವು ಮಂದಿ ಸಿನಿಮಾ ಒಟಿಟಿಗೆ ಬರಲೆಂದು ಕಾಯುತ್ತಿದ್ದರು. ಆದರೆ ಇದೀಗ ಸ್ವತಃ ಸಿನಿಮಾದ ನಿರ್ಮಾಪಕರು ‘ಪುಷ್ಪ 2’ ಒಟಿಟಿ ಬಿಡುಗಡೆ ಬಗ್ಗೆ ಖಾತ್ರಿಪಡಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ಹೇಳಿರುವಂತೆ ‘ಪುಷ್ಪ 2’ ಸಿನಿಮಾ ಫೆಬ್ರವರಿ ಮೊದಲ ವಾರದ ವರೆಗೆ ಒಟಿಟಿಯಲ್ಲಿ ಬಿಡುಗಡೆ ಆಗುವುದಿಲ್ಲ ಎಂಬುದು ಖಾತ್ರಿ ಆಗಿದೆ.
ತೆಲುಗು ಸಿನಿಮಾಗಳು ಬಿಡುಗಡೆ ಆದ ಒಂದು ತಿಂಗಳು ಒಟಿಟಿಗೆ ಬರುವಂತಿಲ್ಲ ಎಂಬ ನಿಯಮವಿದೆ. ಆದರೆ ‘ಪುಷ್ಪ 2’ ಸಿನಿಮಾ ಎರಡು ತಿಂಗಳಾದ ಬಳಿಕ ಒಟಿಟಿಗೆ ಬರಲಿದೆ. ಆ ಮೂಲಕ ಚಿತ್ರಮಂದಿರದಲ್ಲಿಯೇ ಹೆಚ್ಚು ಗಳಿಕೆ ಮಾಡುವ ಫೋಕಸ್ ಅನ್ನು ನಿರ್ಮಾಪಕರು ಇರಿಸಿಕೊಂಡಿದ್ದಾರೆ. ಸಿನಿಮಾದ ಒಟಿಟಿ ಹಕ್ಕು ಈಗಾಗಲೇ ಭಾರಿ ಮೊತ್ತಕ್ಕೆ ಒಟಿಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ನೆಟ್ಫ್ಲಿಕ್ಸ್ ಹಾಗೂ ಜೀ 5ಗೆ ಸಿನಿಮಾದ ಒಟಿಟಿ ಹಕ್ಕು ಮಾರಾಟಗೊಂಡಿದ್ದು ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ