ನಭಾ ನಟೇಶ್ ಕಂಬ್ಯಾಕ್ ಆಸೆಗೆ ತೀವ್ರ ಹಿನ್ನಡೆ; ಸೋತು ಸುಣ್ಣವಾದ ಸಿನಿಮಾ
ಜುಲೈ 19ರಂದು ನಭಾ ನಾಯಕಿ ಆಗಿ ನಟಿಸಿದ ‘ಡಾರ್ಲಿಂಗ್’ ಸಿನಿಮಾ ರಿಲೀಸ್ ಆಗಿದೆ. ಪ್ರಿಯದರ್ಶಿ ಅವರು ಈ ಚಿತ್ರದಲ್ಲಿ ಹೀರೋ. ಸಿನಿಮಾ ರಿಲೀಸ್ ಆಗಿ ಕೆಲವು ದಿನ ಕಳೆದರೂ ಚಿತ್ರಕ್ಕೆ ಯಾವುದೇ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಸಿನಿಮಾದಲ್ಲಿ ನಭಾ ಪಾತ್ರಕ್ಕೂ ಹೆಚ್ಚಿನ ಸ್ಕೋಪ್ ಸಿಕ್ಕಿಲ್ಲ. ಈ ಎಲ್ಲಾ ಕಾರಣದಿಂದ ಸಿನಿಮಾ ಫ್ಲಾಪ್ ಎನಿಸಿಕೊಂಡಿದೆ.
ಕನ್ನಡದಲ್ಲಿ ನಟಿಸಿ ಫೇಮಸ್ ಆದ ನಭಾ ನಟೇಶ್ ಅವರು ಕೆಲ ವರ್ಷ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಈಗ ‘ಡಾರ್ಲಿಂಗ್ಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಆದರೆ, ಈ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಬೇಕು ಎಂದುಕೊಂಡಿದ್ದ ಅವರ ಕನಸು ಈಡೇರಿಲ್ಲ. ಮುಂದಿನ ದಿನಗಳಲ್ಲಿ ಯಾವುದಾದರೂ ಸಿನಿಮಾಗಳು ಕೈ ಹಿಡಿಯುತ್ತವೇ ಎಂಬುದನ್ನು ಕಾದು ನೋಡಬೇಕಿದೆ.
ನಭಾ ನಟೇಶ್ ಅವರು ಕನ್ನಡದ ‘ವಜ್ರಕಾಯ’ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಶಿವರಾಜ್ಕುಮಾರ್ ನಟನೆಯ ಈ ಸಿನಿಮಾ ಮೆಚ್ಚುಗೆ ಪಡೆಯಿತು. ಆ ಬಳಿಕ ಅವರ ಬದುಕು ಬದಲಾಯಿತು. ಈ ಸಿನಿಮಾ ಗೆಲುವಿನ ಬಳಿಕ ಕೆಲವು ಕನ್ನಡ ಸಿನಿಮಾಗಳಲ್ಲಿ ನಭಾ ನಟಿಸಿದರು. 2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಅವರ ಬದುಕನ್ನು ಬದಲಿಸಿತು. ಈ ಸಿನಿಮಾ ಭರ್ಜರಿ ಗೆಲುವು ಕಂಡಿತು. ಆದರೆ ಅದೇ ಕೊನೆ, ನಂತರ ರಿಲೀಸ್ ಆದ ನಭಾ ನಟನೆಯ ಯಾವ ಸಿನಿಮಾಗಳೂ ಗೆಲುವು ಕಂಡಿಲ್ಲ. ಈ ಕಾರಣಕ್ಕೆ ನಭಾ ‘ಡಾರ್ಲಿಂಗ್’ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು.
ಜುಲೈ 19ರಂದು ‘ಡಾರ್ಲಿಂಗ್’ ರಿಲೀಸ್ ಆಗಿದೆ. ಪ್ರಿಯದರ್ಶಿ ಅವರು ಈ ಚಿತ್ರದಲ್ಲಿ ಹೀರೋ ಆದರೆ, ನಭಾ ನಾಯಕಿ. ಸಿನಿಮಾ ರಿಲೀಸ್ ಆಗಿ ಕೆಲವು ದಿನ ಕಳೆದರೂ ಚಿತ್ರಕ್ಕೆ ಯಾವುದೇ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಸಿನಿಮಾದಲ್ಲಿ ನಭಾ ಪಾತ್ರಕ್ಕೂ ಹೆಚ್ಚಿನ ಸ್ಕೋಪ್ ಸಿಕ್ಕಿಲ್ಲ. ಈ ಎಲ್ಲಾ ಕಾರಣದಿಂದ ಸಿನಿಮಾ ಫ್ಲಾಪ್ ಎನಿಸಿಕೊಂಡಿದೆ.
ಇದನ್ನೂ ಓದಿ: ‘ಸ್ವಯಂಭು’ ಸಿನಿಮಾ ಮೂಲಕ ನಭಾ ನಟೇಶ್ ಕಂಬ್ಯಾಕ್; ಯುವರಾಣಿ ಗೆಟಪ್
ನಭಾ ನಟೇಶ್ ಅವರಿಗೆ ಕೊವಿಡ್ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತ ಆಗಿತ್ತು. ಅದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಹಿಡಿದವು. ಈ ಕಾರಣದಿಂದಲೇ ನಭಾ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಈಗ ಅವರು ಕಂಬ್ಯಾಕ್ ಮಾಡಿದ ಸಿನಿಮಾ ಸೋಲು ಕಂಡಿದೆ. ಸದ್ಯ ಅವರ ಕೈಲ್ಲಿ ಒಂದು ಸಿನಿಮಾ ಇದೆ. ಇದರ ಜೊತೆಗೆ ಕೆಲವು ಗ್ಲಾಮರಸ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.