‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಅವರು ಮಾಡಿದ ಪಾತ್ರವನ್ನು ಬಾಲಿವುಡ್ ನಟ ಅರ್ಷದ್ ವಾರ್ಸಿ ಅವರು ಜೋಕರ್ ಎಂದು ಕರೆದಿದ್ದರು. ಈ ಪಾತ್ರ ಸಾಕಷ್ಟು ಗಮನ ಸೆಳೆದ ಹೊರತಾಗಿಯೂ ಅವರು ಈ ರೀತಿ ಹೇಳಿದ್ದು ಅನೇಕರಿಗೆ ಇಷ್ಟ ಆಗಲೇ ಇಲ್ಲ. ಅಮಿತಾಭ್ ಬಚ್ಚನ್ ಅವರನ್ನು ಹೊಗಳಿ, ಪ್ರಭಾಸ್ ಅವರನ್ನು ತೆಗಳಿದ್ದು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಈ ವಿಚಾರಕ್ಕೆ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಮಾತನಾಡಿದ್ದಾರೆ.
‘ನಾವು ಹಿಂದೆ ಹೋಗೋದು ಬೇಡ. ಉತ್ತರ ಭಾರತ-ದಕ್ಷಿಣ ಭಾರತ ಅನ್ನೋದು ಬೇಡ ಅಥವಾ ಬಾಲಿವುಡ್ vs ಟಾಲಿವುಡ್ ಅನ್ನೋದು ಬೇಡ. ದೊಡ್ಡ ಸಿನಿಮಾಗಳ ಮೇಲೆ ಕಣ್ಣಿಡೋಣ. ಭಾರತ ಚಿತ್ರರಂಗವನ್ನು ಒಂದು ಮಾಡೋಣ. ಅರ್ಷದ್ ಅವರು ಮಾತುಗಳನ್ನು ಯೋಚಿಸಿ ಆಡಬೇಕಿತ್ತು. ಇರಲಿ ಬಿಡಿ, ಅವರ ಮಕ್ಕಳಿಗೆ ಬುಜಿ ಆಟಿಕೆ ಕಳುಹಿಸುತ್ತೇನೆ. ಕಲ್ಕಿ 2 ಚಿತ್ರದಲ್ಲಿ ಪ್ರಭಾಸ್ ಅವರ ನಟನೆ ಅದ್ಭುತ ಎಂದು ಎಲ್ಲರೂ ಮೊದಲ ಶೋ ನೋಡಿದವರು ಟ್ವೀಟ್ ಮಾಡಬೇಕು. ಆ ರೀತಿಯಲ್ಲಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಅವರು.
ನಾಗ್ ಅಶ್ವಿನ್ ಅವರ ಟ್ವೀಟ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಬಂದಿದೆ. ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಬಗ್ಗೆ ಯಾರಾದರೂ ನೆಗೆಟಿವ್ ಟಾಕ್ ಹೇಳಿದರೆ ಸಿಟ್ಟು ಮಾಡಿಕೊಳ್ಳುತ್ತಾರೆ. ಹೇಳಿಕೆ ನೀಡಿದವರ ವಿರುದ್ಧ ತಿರುಗಿ ಬೀಳುತ್ತಾರೆ. ಆದರೆ, ನಾಗ್ ಅಶ್ವಿನ್ ಅವರು ಆ ರೀತಿ ಮಾಡಿಲ್ಲ ಅನ್ನೋದು ವಿಶೇಷ.
ಇದನ್ನೂ ಓದಿ: ‘ಕಲ್ಕಿ ಚಿತ್ರದಲ್ಲಿ ಪ್ರಭಾಸ್ನ ಜೋಕರ್ ರೀತಿ ತೋರಿಸಲಾಗಿದೆ’; ಬಾಲಿವುಡ್ ನಟನ ಬೇಸರ
ನಾಗ್ ಅಶ್ವಿನ್ ಅವರು ವಿವಾದಗಳಿಂದ ದೂರ ಇರಲು ಬಯಸುತ್ತಾರೆ. ಅವರು ಅರ್ಷದ್ ವಾರ್ಸಿಗೆ ಬೈದು ಟ್ವೀಟ್ ಮಾಡಬಹುದಿತ್ತು. ಆದರೆ, ಆ ರೀತಿ ಮಾಡದೇ ಅವರು ಈ ಕಾಮೆಂಟ್ನ ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಸದ್ಯ ಅವರು ‘ಕಲ್ಕಿ 2898 ಎಡಿ’ ಸೀಕ್ವೆಲ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮೊದಲ ಭಾಗ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
‘ಪ್ರಭಾಸ್ ಅವರ ಪಾತ್ರದ ಬಗ್ಗೆ ಬೇಸರ ಇದೆ. ಅವರನ್ನು ಜೋಕರ್ ರೀತಿ ತೋರಿಸಲಾಗಿದೆ. ಯಾಕೆ? ಅವರನ್ನು ಅದ್ಭುತವಾಗಿ ತೋರಿಸಬಹುದಿತ್ತು. ಆದರೆ ನೀವು ಮಾಡಿದ್ದು ಏನು? ಈ ರೀತಿಯ ಸಿನಿಮಾಗಳನ್ನು ಏಕೆ ಮಾಡುತ್ತಾರೋ ಗೊತ್ತಿಲ್ಲ’ ಎಂದು ಅರ್ಷದ್ ಬೇಸರ ಹೊರಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.