ದಂಪತಿ ನಾಗ ಚೈತನ್ಯ, ಶೋಭಿತಾ ಮಾತು ಬಿಡಲು ಸಾಯಿ ಪಲ್ಲವಿ ಕಾರಣ
Naga Chaitanya-Shobhita Dhulipala: ತೆಲುಗು ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲ ಅವರುಗಳು 2024 ರಲ್ಲಿ ಮದುವೆಯಾದರು. ನಾಗ ಚೈತನ್ಯಗೆ ಇದು ಎರಡನೇ ಮದುವೆ. ಅಂದಹಾಗೆ ಶೋಭಿತಾ, ನಾಗ ಚೈತನ್ಯ ಜೊತೆ ಮಾತು ಬಿಟ್ಟಿದ್ದರಂತೆ. ಅದಕ್ಕೆ ಕಾರಣವಾಗಿದ್ದು ನಟಿ ಸಾಯಿ ಪಲ್ಲವಿ. ಅದು ಹೇಗೆಂದು ಸ್ವತಃ ನಾಗ ಚೈತನ್ಯ ವಿವರಿಸಿದ್ದಾರೆ.

ನಾಗ ಚೈತನ್ಯ (Naga Chaitanya) ಟಾಲಿವುಡ್ನ ಸ್ಟಾರ್ ಹೀರೋ, ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ದೊಡ್ಡ ಮಾಸ್ ಹೀರೋ ಎನಿಸಿಕೊಂಡಿಲ್ಲವಾದರೂ ಅವರ ಸಿನಿಮಾಗಳು ಪ್ರೇಕ್ಷಕರಿಗೆ ನಿರಾಸೆಯನ್ನಂತೂ ಮಾಡುವುದಿಲ್ಲ. ನಾಗ ಚೈತನ್ಯ ಅವರ ಕೊನೆಯ ಸಿನಿಮಾ ‘ತಂಡೇಲ್’ ದೊಡ್ಡ ಹಿಟ್ ಆಯ್ತು. ಅಂದಹಾಗೆ ಸಮಂತಾ ಜೊತೆಗೆ ವಿಚ್ಛೇದನದ ಬಳಿಕ ಕಳೆದ ವರ್ಷವಷ್ಟೆ ನಟಿ ಶೋಭಿತಾ ಅವರನ್ನು ನಾಗ ಚೈತನ್ಯ ವಿವಾಹವಾಗಿದ್ದಾರೆ. ನಾಚಿಕೆ ಸ್ವಭಾವದ ವ್ಯಕ್ತಿಯಾಗಿರುವ ನಾಗ ಚೈತನ್ಯ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಹಾಗೂ ಶೋಭಿತಾ ಅವರ ಪ್ರೀತಿ, ದಾಂಪತ್ಯದ ಕುರಿತಾಗಿ ಮಾತನಾಡಿದ್ದಾರೆ.
ಖ್ಯಾತ ತೆಲುಗು ನಟ ಜಗಪತಿ ಬಾಬು ನಡೆಸಿಕೊಡುತ್ತಿರುವ ಟಾಕ್ ಶೋನಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ನಾಗ ಚೈತನ್ಯ, ತಮ್ಮ ಹಾಗೂ ಶೋಭಿತಾರ ಲವ್ ಸ್ಟೋರಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರು ಮಾತು ಬಿಡಲು ನಟಿ ಸಾಯಿ ಪಲ್ಲವಿ ಕಾರಣ ಆಗಿದ್ದು ಹೇಗೆಂದು ಸಹ ನಾಗ ಚೈತನ್ಯ ವಿವರಿಸಿದ್ದಾರೆ.
2021ರಲ್ಲಿ ತಾವು ಬೇರಾಗುತ್ತಿರುವ ಬಗ್ಗೆ ನಾಗ ಚೈತನ್ಯ ಮತ್ತು ಸಮಂತಾ ಘೋಷಿಸಿದರು. ಅದಾದ ಮರು ವರ್ಷ 2022 ರಲ್ಲಿ ನಾಗ ಚೈತನ್ಯ ‘ಶೋಯು’ ಹೆಸರಿನ ಕ್ಲೌಡ್ ಕಿಚನ್ ಪ್ರಾರಂಭ ಮಾಡಿದರು. ಶೋಯು ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ಗಳನ್ನು ಆಗಾಗ್ಗೆ ನಾಗ ಚೈತನ್ಯ ಹಂಚಿಕೊಳ್ಳುತ್ತಿದ್ದರು. ಅವರ ಪೋಸ್ಟ್ ಒಂದಕ್ಕೆ ಶೋಭಿತಾ ಪ್ರತಿಕ್ರಿಯೆ ನೀಡಿದ್ದರಂತೆ. ಅಲ್ಲಿಂದ ಇಬ್ಬರ ನಡುವೆ ಪರಿಚಯ ಪ್ರಾರಂಭವಾಗಿ ಅದು ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಗೆ ತಿರುಗಿ ಕಳೆದ ವರ್ಷ ಈ ಜೋಡಿ ಮದುವೆ ಆದರು.
ಇದನ್ನೂ ಓದಿ:ಶೋಭಿತಾ ಹಾಗೂ ನಾಗ ಚೈತನ್ಯ ಪರಿಚಯ ಆಗಿದ್ದು ಹೇಗೆ?
ಆದರೆ ಮದುವೆಗೆ ಮುಂಚೆ ಶೋಭಿತಾ ಹಾಗೂ ನಾಗ ಚೈತನ್ಯ ನಡುವೆ ಮುನಿಸು ಉಂಟಾಗಿತ್ತಂತೆ. ಶೋಭಿತಾ, ನಾಗ ಚೈತನ್ಯ ಜೊತೆಗೆ ಮಾತನಾಡುವುದನ್ನು ಬಿಟ್ಟಿದ್ದರಂತೆ. ಅದಕ್ಕೆ ಕಾರಣವಾಗಿದ್ದು ನಟಿ ಸಾಯಿ ಪಲ್ಲವಿ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿಯದ್ದು ಸೂಪರ್ ಹಿಟ್ ಜೋಡಿ. ಇವರು ಒಟ್ಟಿಗೆ ನಟಿಸಿರುವ ‘ಲವ್ ಸ್ಟೋರಿ’ ಸೂಪರ್ ಹಿಟ್ ಆಗಿದೆ. ‘ತಂಡೇಲ್’ ಸಹ ಬ್ಲಾಕ್ ಬಸ್ಟರ್. ಆದರೆ ಸಾಯಿ ಪಲ್ಲವಿ ಕಾರಣಕ್ಕೆ ಶೋಭಿತಾ, ನಾಗ ಚೈತನ್ಯ ಜೊತೆ ಮಾತು ಬಿಟ್ಟಿದ್ದರಂತೆ.
ಇದೇ ವರ್ಷ ಫೆಬ್ರವರಿಯಲ್ಲಿ ಬಿಡುಗಡೆ ಆದ ‘ತಂಡೇಲ್’ ಸಿನಿಮಾನಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿಗೆ ‘ಬುಜ್ಜಿ ತಲ್ಲಿ’ ಎಂದು ಮುದ್ದು ಹೆಸರಿನಿಂದ ಕರೆಯುತ್ತಾರೆ. ಅದು ಶೋಭಿತಾಗೆ ಇಷ್ಟವಾಗಲಿಲ್ಲವಂತೆ. ಅದಕ್ಕೆ ಕಾರಣವೆಂದರೆ, ನಾಗ ಚೈತನ್ಯ, ಶೋಭಿತಾರನ್ನು ಮುದ್ದಾಗಿ ಬುಜ್ಜಿ ತಲ್ಲಿ ಎಂದೇ ಕರೆಯುತ್ತಿದ್ದರಂತೆ. ತಮ್ಮನ್ನು ಪ್ರೀತಿಯಿಂದ ಕರೆಯುವ ಹೆಸರನ್ನು ಸಿನಿಮಾ ನಾಯಕಿಗೆ ನಾಗ ಚೈತನ್ಯ ಅವರೇ ಸೂಚಿಸಿದ್ದಾರೆಂದುಕೊಂಡು ಶೋಭಿತಾ ಮಾತು ಬಿಟ್ಟಿದ್ದರಂತೆ. ಆದರೆ ಆ ಹೆಸರನ್ನು ‘ತಂಡೇಲ್’ ಸಿನಿಮಾ ನಾಯಕಿಗೆ ನಾನು ಸೂಚಿಸಿದ್ದಲ್ಲ ಎಂದು ನಾಗ ಚೈತನ್ಯ ಹೇಳಿದ್ದು, ಅದನ್ನು ಶೋಭಿತಾಗೆ ಮನದಟ್ಟು ಮಾಡಿಸಿದ ಬಳಿಕ ಮುನಿಸು ಕರಗಿತು ಎಂದು ನಾಗ ಚೈತನ್ಯ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




