‘ಸಮಂತಾ ಬಿಟ್ಟು ಹೋದಾಗ ಡಿಪ್ರೆಸ್​ ಆಗಿದ್ದ ಮಗ ಈಗ ಖುಷಿ ಆಗಿದ್ದಾನೆ’: ನಾಗಾರ್ಜುನ

ಸಮಂತಾ ಮತ್ತು ನಾಗ ಚೈತನ್ಯ ಅವರು ಡಿವೋರ್ಸ್ ​ಪಡೆದಾಗ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಕುಟುಂಬದವರಿಗೂ ಅದು ಕಷ್ಟದ ಕಾಲ. ಆ ಬಗ್ಗೆ ನಾಗಾರ್ಜುನ ಅವರು ಈಗ ಮಾತನಾಡಿದ್ದಾರೆ. ಸಮಂತಾ ಬಿಟ್ಟು ಹೋದಾಗ ನಾಗ ಚೈತನ್ಯ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಾಗಾರ್ಜುನ ವಿವರಿಸಿದ್ದಾರೆ. ಆಗಸ್ಟ್​ 8ರಂದು ನಟಿ ಶೋಭಿತಾ ಜೊತೆ ನಾಗ ಚೈತನ್ಯ ಎಂಗೇಜ್​ ಆಗಿದ್ದಾರೆ.

‘ಸಮಂತಾ ಬಿಟ್ಟು ಹೋದಾಗ ಡಿಪ್ರೆಸ್​ ಆಗಿದ್ದ ಮಗ ಈಗ ಖುಷಿ ಆಗಿದ್ದಾನೆ’: ನಾಗಾರ್ಜುನ
ಶೋಭಿತಾ, ನಾಗಾರ್ಜುನ, ನಾಗ ಚೈತನ್ಯ, ಸಮಂತಾ
Follow us
|

Updated on: Aug 10, 2024 | 6:55 PM

ಟಾಲಿವುಡ್​ ನಟ ಅಕ್ಕಿನೇನಿ ನಾಗ ಚೈತನ್ಯ ಅವರ ವೈಯಕ್ತಿಕ ಜೀವನದಲ್ಲಿ ಅನೇಕ ಏಳು-ಬೀಳುಗಳು ಉಂಟಾಗಿವೆ. ಹಲವು ವರ್ಷ ಪ್ರೀತಿಸಿ ಮದುವೆ ಆಗಿದ್ದ ಸಮಂತಾ ರುತ್​ ಪ್ರಭು ಜೊತೆ ಅವರು ವಿಚ್ಛೇದನ ಪಡೆಯುವಂತಾಯಿತು. ಆದರೆ ಈಗ ಮತ್ತೆ ನಾಗ ಚೈತನ್ಯ ಅವರ ಜೀವನದಲ್ಲಿ ಹೊಸ ಚಾಪ್ಟರ್​ ಶುರುವಾಗಿದೆ. ನಟಿ ಶೋಭಿತಾ ಜೊತೆ ಅವರು ಎಂಗೇಜ್​​ಮೆಂಟ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ. ಈ ಬಗ್ಗೆ ಅವರ ತಂದೆ ಅಕ್ಕಿನೇನಿ ನಾಗಾರ್ಜುನ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

2017ರಲ್ಲಿ ಸಮಂತಾ ರುತ್​ ಪ್ರಭು ಮತ್ತು ನಾಗ ಚೈತನ್ಯ ಅವರು ಮದುವೆ ಆಗಿದ್ದರು. ಆದರೆ 2021ರಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡರು. ‘ಡಿವೋರ್ಸ್​ ಆದಾಗ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದ. ಅದು ಅವನಿಗೆ ಮತ್ತು ಕುಟುಂಬಕ್ಕೆ ಕಷ್ಟದ ಸಮಯ ಆಗಿತ್ತು. ನನ್ನ ಮಗ ಯಾರ ಎದುರಲ್ಲೂ ಫೀಲಿಂಗ್ಸ್​ ತೋರಿಸಿಕೊಳ್ಳುವುದಿಲ್ಲ. ಆದರೆ ನನಗೆ ಗೊತ್ತು, ಆತ ದುಃಖದಲ್ಲಿದ್ದ. ಈಗ ಅವನು ಖುಷಿಯಾಗಿರುವುದು ಕಾಣುತ್ತಿದ್ದೇನೆ. ಶೋಭಿತಾ ಮತ್ತು ನಾಗ ಚೈತನ್ಯ ಒಳ್ಳೆಯ ಜೋಡಿ. ಇಬ್ಬರೂ ಪರಸ್ಪರ ತುಂಬ ಪ್ರೀತಿಸುತ್ತಾರೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗಾರ್ಜುನ ಹೇಳಿದ್ದಾರೆ.

ಇದನ್ನೂ ಓದಿ: Photo Gallery: ನಾಗ ಚೈತನ್ಯ ಜತೆ ನಿಶ್ಚಿತಾರ್ಥ ಆಗಿದ್ದಕ್ಕೆ ನಟಿ ಶೋಭಿತಾಗೆ ಖುಷಿಯೋ ಖುಷಿ

ನಾಗ ಚೈತನ್ಯ ಮತ್ತು ಶೋಭಿತಾ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಏಕಾಏಕಿ ಅವರು ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಎಲ್ಲವೂ ಗಡಿಬಿಡಿಯಲ್ಲಿ ನಡೆದು ಹೋಗಿದೆ. ನಿಶ್ಚಿತಾರ್ಥದ ಫೋಟೋಗಳನ್ನು ಕುಟುಂಬದವರು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ತುಂಬಾ ಅವಸರದಲ್ಲಿ ಎಂಗೇಜ್​ಮೆಂಟ್​ ಮಾಡಿದ್ದು ಯಾಕೆ ಎಂಬುದನ್ನು ಕೂಡ ನಾಗಾರ್ಜುನ ವಿವರಿಸಿದ್ದಾರೆ.

ಆಗಸ್ಟ್​ 8ರಂದು ಶೋಭಿತಾ ಮತ್ತು ನಾಗ ಚೈತನ್ಯ ರಿಂಗ್​ ಬದಲಾಯಿಸಿಕೊಂಡರು. ‘ನಾವು ಈ ದಿನವನ್ನು ಸೆಲೆಕ್ಟ್​ ಮಾಡಿದ್ದು ಯಾಕೆಂದರೆ ಇದು ಒಳ್ಳೆಯ ದಿನವಾಗಿತ್ತು. ಎರಡೂ ಕುಟುಂಬದವರು ಜಾತಕ ನೋಡಿದಾಗ ಆಗಸ್ಟ್​ 8 ಒಳ್ಳೆಯ ದಿನ ಅಂತ ಹೇಳಿದರು. ಹಾಗಾಗಿ ನಾವು ಮುಂದುವರಿದೆವು. ಆದರೆ ಮದುವೆ ತಕ್ಷಣಕ್ಕೆ ಆಗುವುದಿಲ್ಲ’ ಎಂದು ನಾಗಾರ್ಜುನ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದಲಿತರು ಉದ್ಧಾರವಾಗುವುದು ಸಚಿವ ಸಂತೋಷ್​ ಲಾಡ್​ಗೆ ಬೇಕಿಲ್ಲ: ಗೋವಿಂದ ಕಾರಜೋಳ
ದಲಿತರು ಉದ್ಧಾರವಾಗುವುದು ಸಚಿವ ಸಂತೋಷ್​ ಲಾಡ್​ಗೆ ಬೇಕಿಲ್ಲ: ಗೋವಿಂದ ಕಾರಜೋಳ
ನಮಗೆ ರಾಜಕೀಯ ಸಂಸ್ಕಾರವಿದೆ, ಸಂಡೂರಲ್ಲಿ ಪತ್ನಿ ಗೆಲ್ಲೋದು ಶತಸಿದ್ಧ: ಸಂಸದ
ನಮಗೆ ರಾಜಕೀಯ ಸಂಸ್ಕಾರವಿದೆ, ಸಂಡೂರಲ್ಲಿ ಪತ್ನಿ ಗೆಲ್ಲೋದು ಶತಸಿದ್ಧ: ಸಂಸದ
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಜನರ ಸಮಸ್ಯೆ ನೋಡಿ ನೋವಿನಿಂದ ಹಲವಾರು ಬಾರಿ ಅತ್ತಿದ್ದೇನೆ: ಕುಮಾರಸ್ವಾಮಿ
ಜನರ ಸಮಸ್ಯೆ ನೋಡಿ ನೋವಿನಿಂದ ಹಲವಾರು ಬಾರಿ ಅತ್ತಿದ್ದೇನೆ: ಕುಮಾರಸ್ವಾಮಿ