AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗ ಚೈತನ್ಯ ನಗುವಿಗೆ ಅಡ್ಡ ಆಗ್ತಿರೋದೇನು? ಅಭಿಮಾನಿಗಳಿಗೆ ಮೂಡಿದೆ ಪ್ರಶ್ನೆ

Naga Chaitanya: ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ್ ಅವರ ವಿವಾಹ ಅದ್ದೂರಿಯಾಗಿ ನೆರವೇರಿತು. ಮದುವೆಯ ನಂತರ ಅವರು ಶ್ರೀಶೈಲಕ್ಕೆ ಭೇಟಿ ನೀಡಿದರು. ಸಮಂತಾ ಜೊತೆಗಿನ ಅವರ ಹಿಂದಿನ ನಗುವಿನ ಹೋಲಿಕೆ ಮತ್ತು ಈಗಿನ ಅವರ ಮುಖಭಾವಗಳ ಬಗ್ಗೆ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ನಾಗ ಚೈತನ್ಯ ನಗುವಿಗೆ ಅಡ್ಡ ಆಗ್ತಿರೋದೇನು? ಅಭಿಮಾನಿಗಳಿಗೆ ಮೂಡಿದೆ ಪ್ರಶ್ನೆ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 08, 2024 | 4:27 PM

Share

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಅವರು ಇತ್ತೀಚೆಗೆ ವಿವಾಹ ಆದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿದೆ. ಮದುವೆ ಬಳಿಕ ಶ್ರೀಶೈಲಕ್ಕೆ ದಂಪತಿ ಭೇಟಿ ಕೊಟ್ಟಿದ್ದಾರೆ. ಮದುವೆ ಆದ ಬಳಿಕ ಇವರು ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಹಾಗೂ ನಾಗ ಚೈತನ್ಯ ಮೊದಲು ಒಟ್ಟಾಗಿ ಸಂಸಾರ ನಡೆಸಿದ್ದರು. ಆಗ ನಾಗ ಚೈತನ್ಯ ಸಾಕಷ್ಟು ನಗುತ್ತಿದ್ದರು. ಆದರೆ, ಈಗ ಅವರು ನಗು ಮಾಯ ಆಗಿದೆ ಎಂದು ಅನೇಕರು ಹೇಳಿದ್ದಾರೆ.

ನಾಗ ಚೈತನ್ಯ ಹಾಗೂ ಸಮಂತಾ ಅವರು ಹಲವು ವರ್ಷಗಳ ಕಾಲ ಪ್ರೀತಿಸಿದರು. ಆ ಬಳಿಕ ಇವರು ಬೇರೆ ಆಗುವ ನಿರ್ಧಾರ ತೆಗೆದುಕೊಂಡರು. ಇವರ ಮದುವೆ 2017ರಲ್ಲಿ ನಡೆದಿತ್ತು. ಆ ಮದುವೆಯ ಫೋಟೋಗಳನ್ನು ದಂಪತಿಗಳು ಈ ಮೊದಲು ಶೇರ್ ಮಾಡಿಕೊಂಡಿದ್ದರು. ಈವ ವೇಳೆ ಅವರು ಸಖತ್ ನಗು ಮುಖದಲ್ಲಿ ಇದ್ದರು. ಸಮಂತಾ ಜೊತೆ ನಗುತ್ತಾ ಇರುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ.

N

ಈಗ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ಮದುವೆ ಆಗಿದ್ದಾರೆ. ಮದುವೆ ಸಂದರ್ಭದಲ್ಲಿ ಅವರು ನಕ್ಕಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ‘ಅವರ ನಗುವನ್ನು ತಡೆ ಹಿಡಿಯುತ್ತಿರುವುದು ಏನು’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇಬ್ಬರೂ ಮದುವೆ ಆದರೂ ಖುಷಿಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಅನೇಕರು ಈ ವಾದವನ್ನು ಒಪ್ಪಿಲ್ಲ.

ಇದನ್ನೂ ಓದಿ:ಸಮಂತಾ ಎದುರು ಶೋಭಿತಾ ಜನಪ್ರಿಯತೆಯೇ ಹೆಚ್ಚು; ನಾಗ ಚೈತನ್ಯ ಪತ್ನಿಗೆ 5ನೇ ಸ್ಥಾನ

ಏಕೆಂದರೆ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ಪ್ರೀತಿಸಿ ಮದುವೆ ಆದವರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದ ಬಳಿಕವೇ ಮದುವೆ ಆಗುವ ನಿರ್ಧಾರ ತೆಗೆದುಕೊಂಡರು. ಹೀಗಿರುವಾಗ ಪರಸ್ಪರ ಇಷ್ಟ ಇಲ್ಲ ಎಂದು ಹೇಳುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಶೋಭಿತಾ ಹಾಗೂ ನಾಗ ಚೈತನ್ಯ ಶೀಘ್ರವೇ ವಿದೇಶಕ್ಕೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ವಿದೇಶದಲ್ಲಿ ಇವರು ಸುತ್ತಾಟ ನಡೆಸೋ ಸಾಧ್ಯತೆ ಇದೆ. ಡಿಸೆಂಬರ್ನ ಸಂಭ್ರಮದಿಂದ ಇವರು ಕಳೆಯಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More