AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಂತರ ರೂಪಾಯಿ ಕಾರು ಇದ್ದರೂ ಆಟೋದಲ್ಲಿ ಪ್ರಯಾಣ ಮಾಡಿದ ಆಲಿಯಾ ಭಟ್

ಆಲಿಯಾ ಭಟ್ ಅವರ ಶ್ರೀಮಂತಿಕೆಗೆ ಏನೂ ಕೊರತೆ ಇಲ್ಲ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳು ಅವರ ಬಳಿ ಇವೆ. ಆದರೂ ಸಹ ಅವರು ಆಟೋದಲ್ಲಿ ಪ್ರಯಾಣ ಮಾಡುವ ಮೂಲಕ ಸುದ್ದಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಲಿಯಾ ಭಟ್ ಅವರ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಕೋಟ್ಯಂತರ ರೂಪಾಯಿ ಕಾರು ಇದ್ದರೂ ಆಟೋದಲ್ಲಿ ಪ್ರಯಾಣ ಮಾಡಿದ ಆಲಿಯಾ ಭಟ್
ಆಲಿಯಾ ಭಟ್
ಮದನ್​ ಕುಮಾರ್​
|

Updated on: Dec 08, 2024 | 3:24 PM

Share

ನಟಿ ಆಲಿಯಾ ಭಟ್​ ಅವರ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿ ಇದೆ. ಹತ್ತಾರು ಐಷಾರಾಮಿ ಕಾರುಗಳು ಇವೆ. ಹಾಗಿದ್ದರೂ ಕೂಡ ಅವರು ಆಟೋ ರಿಕ್ಷಾದಲ್ಲಿ ಪ್ರಯಾಣ ಮಾಡಿದ್ದಾರೆ. ಶನಿವಾರ (ಡಿಸೆಂಬರ್​ 7) ಸಂಜೆ ಆಲಿಯಾ ಭಟ್ ಅವರು ಮುಂಬೈನಲ್ಲಿ ಆಟೋ ಸವಾರಿ ಮಾಡಿದ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ನೋಡಿದ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ನಾಟಕ ಎಂದಿದ್ದಾರೆ, ಇನ್ನೂ ಕೆಲವರು ಆಲಿಯಾ ಭಟ್​ ಪರವಾಗಿ ಕಮೆಂಟ್ ಮಾಡಿದ್ದಾರೆ.

ಆಲಿಯಾ ಭಟ್​ ಅವರು ಸರಳತೆಯನ್ನು ತೋರ್ಪಡಿಸುವ ಸಲುವಾಗಿ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ ಎಂಬುದು ಕೆಲವರ ವಾದ. ಆದರೆ ಅಸಲಿ ವಿಚಾರ ಬೇರೆ ಇದೆ. ಅವರು ಹೋಗಬೇಕಿದ್ದ ದಾರಿ ತುಂಬ ಕಿರಿದಾಗಿದೆ. ಹಾಗಾಗಿ, ಅಷ್ಟು ಚಿಕ್ಕ ರಸ್ತೆಯಲ್ಲಿ ದೊಡ್ಡ ಕಾರುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆ ಕಾರಣದಿಂದಲೇ ಅವರು ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಳೇ ಬಟ್ಟೆ ಧರಿಸಿ ಪಾರ್ಟಿಗೆ ಬಂದ ಆಲಿಯಾ ಭಟ್​; ನೆಟ್ಟಿಗರಿಂದ ಮೆಚ್ಚುಗೆ

ಸೆಲೆಬ್ರಿಟಿಗಳು ಎಲ್ಲಿಯೋ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಆಲಿಯಾ ಭಟ್ ಅವರಿಗಾಗಿ ಆಟೋ ಕಾಯುತ್ತಿತ್ತು. ಅಲ್ಲಿಯ ತನಕ ಅವರು ನಡೆದು ಬಂದಿದ್ದಾರೆ. ಆಲಿಯಾ ಭಟ್ ಜೊತೆ ಅವರ ಬಾಡಿ ಗಾರ್ಡ್ಸ್​ ಕೂಡ ಇದ್ದರು. ಆಲಿಯಾ ಅವರನ್ನು ಕಂಡ ಪಾಪರಾಜಿಗಳು ಫೋಟೋ, ವಿಡಿಯೋ ಸಲುವಾಗಿ ಫಾಲೋ ಮಾಡಿದ್ದಾರೆ. ತಮಗಾಗಿ ಒಂದು ಪೋಸ್ ನೀಡುವಂತೆ ಪಾಪರಾಜಿಗಳು ಮನವಿ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಆಲಿಯಾ ಭಟ್ ಅವರು ಗುರುತಿಸಿಕೊಂಡಿದ್ದಾರೆ. ಅವರು ನಟಿಸಿದ ಅನೇಕ ಸಿನಿಮಾಗಳು ಸೂಪರ್​ ಹಿಟ್ ಆಗಿವೆ. ಸಖತ್ ಬೇಡಿಕೆ ಇರುವಾಗಲೇ ಅವರು ರಣಬೀರ್​ ಕಪೂರ್​ ಜೊತೆ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಈ ಜೋಡಿಗೆ ರಹಾ ಹೆಸರಿನ ಹೆಣ್ಣು ಮಗು ಇದೆ. ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡನ್ನೂ ಆಲಿಯಾ ಭಟ್​ ಅವರು ಸರಿ ದೂಗಿಸಿಕೊಂಡು ಸಾಗುತ್ತಿದ್ದಾರೆ. ಹಲವು ಸಿನಿಮಾಗಳ ಆಫರ್​ ಅವರ ಕೈಯಲ್ಲಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.