AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

28 ವರ್ಷಗಳ ಬಳಿಕ ಒಂದಾದ ನಾಗಾರ್ಜುನ-ಟಬು ಜೋಡಿ: ಈ ಬಾರಿ ರೋಮ್ಯಾನ್ಸ್ ಅಲ್ಲ, ವಿಲನ್

ಭಾರತೀಯ ಚಿತ್ರರಂಗದ ಜನಪ್ರಿಯ ಜೋಡಿ ನಾಗಾರ್ಜುನ ಮತ್ತು ಟಬು 28 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ನಾಗಾರ್ಜುನ ಅವರ 100ನೇ ಚಿತ್ರ 'ಕಿಂಗ್ 100'ರಲ್ಲಿ ಟಬು ಇದೇ ಮೊದಲ ಬಾರಿಗೆ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಹಳೆಯ ರೋಮ್ಯಾಂಟಿಕ್ ಕೆಮಿಸ್ಟ್ರಿಗೆ ಭಿನ್ನವಾಗಿ, ಈ ಆಕ್ಷನ್ ಎಂಟರ್ಟೈನರ್ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ.

28 ವರ್ಷಗಳ ಬಳಿಕ ಒಂದಾದ ನಾಗಾರ್ಜುನ-ಟಬು ಜೋಡಿ: ಈ ಬಾರಿ ರೋಮ್ಯಾನ್ಸ್ ಅಲ್ಲ, ವಿಲನ್
ನಾಗಾರ್ಜುನ-ಟಬು
ರಾಜೇಶ್ ದುಗ್ಗುಮನೆ
|

Updated on: Jul 07, 2026 | 2:11 PM

Share

ಮುಖ್ಯಾಂಶಗಳು

  • ಬರೋಬ್ಬರಿ 28 ವರ್ಷಗಳ ಬಳಿಕ ಒಂದಾದ ನಾಗಾರ್ಜುನ-ಟಬು ಜೋಡಿ
  • 'ಕಿಂಗ್ 100' ಚಿತ್ರದಲ್ಲಿ ನಾಯಕನಿಗೆ ಟಬು ಎದುರಾಳಿ
  • ರೋಮ್ಯಾಂಟಿಕ್ ಕೆಮಿಸ್ಟ್ರಿಗೆ ಬ್ರೇಕ್

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಇಷ್ಟಪಟ್ಟ ಜೋಡಿಗಳಲ್ಲಿ ನಾಗಾರ್ಜುನ ಮತ್ತು ಟಬು ಜೋಡಿ ಕೂಡ ಒಂದು. ಕಳೆದ 28 ವರ್ಷಗಳಿಂದ ಈ ಜೋಡಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ ನಾಗಾರ್ಜುನ ಅವರ ಮೈಲಿಗಲ್ಲಿನ 100ನೇ ಚಿತ್ರಕ್ಕಾಗಿ ಇವರಿಬ್ಬರು ಮತ್ತೆ ಒಂದಾಗುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ ‘ಕಿಂಗ್ 100’ ಎಂದು ಹೆಸರಿಡಲಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಈ ಬಾರಿ ವಿಲನ್ ಪಾತ್ರದಲ್ಲಿ ಟಬು

ಹಳೆಯ ಸಿನಿಮಾಗಳಲ್ಲಿ ಇವರಿಬ್ಬರ ರೋಮ್ಯಾಂಟಿಕ್ ಕೆಮಿಸ್ಟ್ರಿ ಹಿಟ್ ಆಗಿತ್ತು. ಆದರೆ ಈ ಬಾರಿ ರಾ. ಕಾರ್ತಿಕ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾದಲ್ಲಿ ಟಬು ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಾಗಾರ್ಜುನ ಎದುರಾಳಿಯಾಗಿ ಟಬು ಅಬ್ಬರಿಸಲಿದ್ದಾರೆ. ಈ ಮೊದಲು ಕೂಡ ಟಬು ಅವರು ನೆಗೆಟಿವ್ ರೋಲ್​​ಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹೀಗಾಗಿ, ಅವರಿಗೆ ಇದು ಚಾಲೆಂಜಿಂಗ್ ಎನಿಸಲಿಕ್ಕಿಲ್ಲ ಎಂಬುದು ಅನೇಕರ ಊಹೆ.

1995ರಲ್ಲಿ ರಿಲೀಸ್ ಆದ ‘ಸಿಸಿಂದ್ರಿ ’ ಚಿತ್ರದಲ್ಲಿ ನಾಗಾರ್ಜುನ ಅವರ ಮಗ ಅಖಿಲ್ ಅಕ್ಕಿನೇನಿ ಬಾಲನಟನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಟಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಗಾರ್ಜುನ ಹಾಗೂ ಟಬು ಒಟ್ಟಿಗೆ ಕಾಣಿಸಿಕೊಂಡ ಮೊದಲ ಸಿನಿಮಾ ಇದಾಗಿದೆ.

ಇದನ್ನೂ ಓದಿ: ವಿಜಯ್ ಸೇತುಪತಿ ಎದುರು ವಿಲನ್ ಆದ ಟಬು, ಸಿನಿಮಾ ಯಾವುದು?

ಕೃಷ್ಣ ವಂಶಿ ನಿರ್ದೇಶನದ 1996ರ ‘ನಿನ್ನೆ ಪೆಳ್ಳಾಡತಾ’ ಸಿನಿಮಾ ತೆಲುಗು ಚಿತ್ರರಂಗದ ಐಕಾನಿಕ್ ಲವ್ ಸ್ಟೋರಿಗಳಲ್ಲಿ ಒಂದಾಗಿದೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ನಾಗಾರ್ಜುನ-ಟಬು ಕೆಮಿಸ್ಟ್ರಿ ಸೂಪರ್ ಹಿಟ್ ಆಗಿತ್ತು. 1998ರಲ್ಲಿ ರಿಲೀಸ್ ಆದ ‘ಆವಿಡಾ ಮಾ ಆವಿಡೇ’ ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಈ ಜೋಡಿ ನಟಿಸಿದ ಕೊನೆಯ ಸಿನಿಮಾ ಇದು. ಕಾಮಿಡಿ ಡ್ರಾಮಾ ಶೈಲಿಯ ಈ ಚಿತ್ರದ ಬಳಿಕ ಇಬ್ಬರೂ ಒಟ್ಟಿಗೆ ನಟಿಸಿರಲಿಲ್ಲ. ಈಗ 28 ವರ್ಷಗಳ ಬಳಿಕ ನಾಗಾರ್ಜುನ ಜೊತೆ ನಟಿಸಲು ಟಬು ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us