AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನಿಂದ ತಪ್ಪಾಗಿದೆ: ತ್ರಿಷಾ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್

ಟಿವಿಕೆ ಪಕ್ಷದ ದಳಪತಿ ವಿಜಯ್ ಅವರನ್ನು ಟೀಕಿಸುವ ಭರದಲ್ಲಿ ನೈನಾರ್ ನಾಗೇಂದ್ರನ್ ನಾಲಿಗೆ ಹರಿಬಿಟ್ಟಿದ್ದರು. ‘ನಟಿ ತ್ರಿಷಾ ಮನೆಯಿಂದ ವಿಜಯ್ ಮೊದಲು ಹೊರಬರಲಿ’ ಎಂದು ನೈನಾರ್ ನಾಗೇಂದ್ರನ್ ಹೇಳಿದ್ದರು. ಎಲ್ಲ ಕಡೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ.

ನನ್ನಿಂದ ತಪ್ಪಾಗಿದೆ: ತ್ರಿಷಾ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್
Thalapathy Vijay, Trisha Krishnan, Nainar Nagendran
ಮದನ್​ ಕುಮಾರ್​
|

Updated on: Feb 16, 2026 | 6:21 PM

Share

ಖ್ಯಾತ ನಟಿ ತ್ರಿಷಾ (Trisha Krishnan) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಈಗ ಕ್ಷಮೆ ಕೇಳಿದ್ದಾರೆ. ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ (Thalapathy Vijay) ಬಗ್ಗೆ ಟೀಕೆ ಮಾಡುವಾಗ ನಾಗೇಂದ್ರನ್ ಅವರು ನಾಲಿಗೆ ಹರಿಬಿಟ್ಟಿದ್ದರು. ‘ವಿಜಯ್ ಅವರಿಗೆ ರಾಜಕೀಯದ ಅನುಭವ ಕಡಿಮೆ. ರಾಜಕೀಯದ ಅನುಭವ ಆಗಬೇಕಾದ್ರೆ ತ್ರಿಷಾ ಮನೆಯಿಂದ ವಿಜಯ್ ಹೊರಬರಲಿ’ ಎಂದು ನೈನಾರ್ ನಾಗೇಂದ್ರನ್ (Nainar Nagendran) ಹೇಳಿದ್ದರು. ಅವರ ಆ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಒಂದು ದಿನದ ಬಳಿಕ ಅವರು ಕ್ಷಮೆ ಕೇಳಿದ್ದಾರೆ.

ನೈನಾರ್ ನಾಗೇಂದ್ರನ್ ಅವರ ಹೇಳಿಕೆಗೆ ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಾಗೇಂದ್ರನ್ ಹೇಳಿಕೆಯನ್ನು ನಟಿ ತ್ರಿಷಾ ಕೃಷ್ಣನ್ ಅವರು ಕಟು ಶಬ್ದಗಳಲ್ಲಿ ಖಂಡಿಸಿದ್ದರು. ‘ಉನ್ನತ ಸ್ಥಾನದಲ್ಲಿರುವವರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ’ ಎಂದು ತ್ರಿಷಾ ಕೃಷ್ಣನ್ ಹೇಳಿದ್ದರು. ನೈನಾರ್ ನಾಗೇಂದ್ರನ್ ವಿರುದ್ಧ ಡಿಎಂಕೆ, ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿತ್ತು.

ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂದು ಡಿಎಂಕೆ ನಾಯಕರು ಟೀಕಿಸಿದ್ದರು. ರಾಜಕೀಯ ಸಂಘರ್ಷದ ನಡುವೆ ತ್ರಿಷಾ ಹೆಸರು ಎಳೆದುತಂದಿದ್ದಕ್ಕೆ ಖಂಡನೆ ವ್ಯಕ್ತವಾಗಿತ್ತು. ಬಳಿಕ ಕೆ. ಅಣ್ಣಾಮಲೈ, ವಾನತಿ ಶ್ರೀನಿವಾಸನ್ ಅವರ ಸೂಚನೆ ಮೇರೆಗೆ ನೈನಾರ್ ನಾಗೇಂದ್ರನ್ ಕ್ಷಮೆ ಕೇಳಿದ್ದಾರೆ. ‘ನನ್ನ ಹೇಳಿಕೆ ತಪ್ಪು ಅರ್ಥದಿಂದ ಕೂಡಿದೆ’ ಎಂದು ನೈನಾರ್ ನಾಗೇಂದ್ರನ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

‘ತಪ್ಪಾಗಿ ನಾನು ಹೇಳಿಕೆ ನೀಡಿದ್ದೆ. ಕೆ. ಅಣ್ಣಾಮಲೈ ಮತ್ತು ವಾನತಿ ಶ್ರೀನಿವಾಸನ್ ಅವರು ಈ ವಿಷಯದ ಬಗ್ಗೆ ನನ್ನ ಬಳಿ ಮಾತನಾಡಿದರು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ’ ಎಂದು ನೈನಾರ್ ನಾಗೇಂದ್ರನ್ ಅವರು ಕ್ಷಮೆ ಯಾಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ