ಅಪ್ಪನ ಸಿನಿಮಾದ ಸೀಕ್ವೆಲ್ ಮೂಲಕ ನಟನೆಗೆ ಎಂಟ್ರಿ ಕೊಡಲಿರುವ ಮಗ
Nandamuri: ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ದಶಕಗಳಿಂದಲೂ ಪಾರುಪತ್ಯ ನಡೆಸಿಕೊಂಡು ಬಂದಿರುವ ನಂದಮೂರಿ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಬರಲು ಸಜ್ಜಾಗಿದೆ.

ತೆಲುಗು ಚಿತ್ರರಂಗ (Tollywood) ಹಾಗೂ ರಾಜಕೀಯ ರಂಗದಲ್ಲಿ ನಂದಮೂರಿ ಕುಟುಂಬದ ಪ್ರಾಬಲ್ಯ ಹಲವು ದಶಕಗಳಿಂದಲೂ ನಡೆಯುತ್ತಾ ಬಂದಿದೆ. ಈಗಲೂ ಸಹ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ನಂದಮೂರಿ ಕುಟುಂಬದ ಹಲವು ಸದಸ್ಯರು ಅತ್ಯುತ್ತಮ ಸ್ಥಾಯಿಯಲ್ಲಿದ್ದಾರೆ. ಇದೀಗ ಈ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದು ಅದೂ ಸಹ ತಂದೆಯ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಮೂಲಕವೇ ನಟನೆಗೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.
ತೆಲುಗು ಚಿತ್ರರಂಗದ ಸ್ಟಾರ್ ನಟ ಹಾಗೂ ರಾಜಕಾರಣಿಯೂ ಆಗಿರುವ ನಂದಮೂರಿ ಬಾಲಕೃಷ್ಣರ ಪುತ್ರ ಮೋಕ್ಷಜ್ಙ ಚಿತ್ರರಂಗಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಕಳೆದ ವರ್ಷವೇ ಮೋಕ್ಷಜ್ಞ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಸ್ವತಃ ಬಾಲಕೃಷ್ಣ ಅವರೆ ತಮ್ಮ ಪುತ್ರ ಸಿನಿಮಾ ರಂಗಕ್ಕೆ ಎಂಟ್ರಿ ನೀಡಲಿದ್ದಾನೆ ಎಂದಿದ್ದಾರೆ. ಆದರೆ ಅದೇಕೊ ತುಸು ತಡವಾಗುತ್ತಿದೆ. ಆದರೆ ಈಗ ಹರಿದಾಡುತ್ತಿರುವ ಕೆಲವು ಸುದ್ದಿಗಳ ಪ್ರಕಾರ, ಮೋಕ್ಷಜ್ಙ ಅವರ ಮೊದಲ ಸಿನಿಮಾಕ್ಕೆ ತೆರೆ ಮರೆಯಲ್ಲಿ ಸಿದ್ಧತೆ ನಡೆಯುತ್ತಿವೆ.
ಇದನ್ನೂ ಓದಿ:ತೆಲುಗು ಚಿತ್ರರಂಗದಿಂದ ದೂರ ಸರಿದರೇ ಪೂಜಾ ಹೆಗ್ಡೆ? ಕೈಯಲ್ಲಿರುವ ಸಿನಿಮಾಗಳೆಷ್ಟು?
ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಂದಮೂರಿ ಬಾಲಕೃಷ್ಣ, ತಮ್ಮದೇ ನಟನೆಯ ಹಳೆಯ ಸೂಪರ್ ಹಿಟ್ ಸಿನಿಮಾ ‘ಆದಿತ್ಯ 369’ ಸಿನಿಮಾದ ಸೀಕ್ವೆಲ್ ಅನ್ನು ನಿರ್ದೇಶಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮೋಕ್ಷಜ್ಙ ನಟಿಸಲಿದ್ದಾನೆ ಎಂದಿದ್ದರು. ಆದರೆ ಆ ಸಿನಿಮಾ ಈ ವರೆಗೆ ಸೆಟ್ಟೇರಿಲ್ಲ.
ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ನಂದಮೂರಿ ಬಾಲಕೃಷ್ಣ ನಟನೆಯ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಅಖಂಡ’ದ ಸೀಕ್ವೆಲ್ನಲ್ಲಿ ಮೋಕ್ಷಜ್ಙ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ಬೋಯಪಾಟಿ ಸೀನು ಅವರೇ ನಿರ್ದೇಶನ ಮಾಡಲಿದ್ದಾರಂತೆ. ಮೋಕ್ಷಜ್ಙ ಅವರ ಮೊದಲ ಸಿನಿಮಾವನ್ನು ನಿರ್ದೇಶಿಸಲು ಅನಿಲ್ ರವಿಪುಡಿ ಸಹ ಪ್ರಯತ್ನ ಮಾಡುತ್ತಿದ್ದು, ಈಗಾಗಲೇ ಕತೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿಯ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮೋಕ್ಷಜ್ಞ ಅವರ ಸಿನಿಮಾಕ್ಕೆ ಚಾಲನೆ ಸಿಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




