
ನಾನಿ ನಟನೆಯ ‘ಪ್ಯಾರಡೈಸ್’ ಸಿನಿಮಾ ಸೂಪರ್ ಹಿಟ್ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಸಿನಿಮಾದ ಮೇಲಿನ ಹೈಪ್ ಅಷ್ಟಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಸಿನಿಮಾ ಮೊದಲ ದಿನವೇ ಹೀನಾಯ ವಿಮರ್ಶೆ ಪಡೆದು ಸೋಲಿನ ಸುಳಿಯಲ್ಲಿ ಸಿಲುಕುವ ಭೀತಿಯಲ್ಲಿ ಇದೆ. ಈ ಚಿತ್ರದ ಮೊದಲ ದಿನದ ಗಳಿಕೆ ಏನೋ ಜೋರಾಗಿಯೇ ಆಗಿದೆ. ಆದರೆ, ಈ ಅಬ್ಬರ ಹೆಚ್ಚು ದಿನ ಇರೋದು ಅನುಮಾನ. ಈಗ ‘ಪ್ಯಾರಡೈಸ್’ ದೃಶ್ಯಗಳು ‘ಕೆಜಿಎಫ್’ ಹಾಗೂ ‘ಕೆಜಿಫ್ 2’ ಸಿನಿಮಾಗಳಿಂದ ಸ್ಫೂರ್ತಿ ಪಡೆದಿದೆ ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸುತ್ತಿದ್ದಾರೆ.
‘ಪ್ಯಾರಡೈಸ್’ ಸಿನಿಮಾ ಸೆಪ್ಟೆಂಬರ್ 24ರಂದು ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾ ನೋಡಿದವರು ನಾನಿ ಚಿತ್ರವನ್ನು ಒಪ್ಪಿಲ್ಲ. ಸಿನಿಮಾದಲ್ಲಿ ಅಗತ್ಯಕ್ಕೆ ಮೀರಿ ವೈಲೆನ್ಸ್ ಇದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಚಿತ್ರದ ಕಥೆಯ ಬಗ್ಗೆ ಹಾಗೂ ದ್ವಿತೀಯಾರ್ಧದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ದ್ವಿತೀಯಾರ್ಧದಲ್ಲಿ ಬರುವ ಅನಗತ್ಯ ವಿಷಯಗಳ ಬಗ್ಗೆ ತಕರಾರು ತೆಗೆದಿದ್ದಾರೆ.
ಇನ್ನು, ‘ಪ್ಯಾರಡೈಸ್’ ಸಿನಿಮಾದಲ್ಲಿ ಬರುವ ಅನೇಕ ದೃಶ್ಯಗಳು ಯಶ್ ಸಿನಿಮಾ ಆಧರಿಸಿವೆ ಎಂಬುದು ಕೆಲವರ ಆರೋಪ. ಇಂಟರ್ವಲ್ ಬ್ಲಾಕ್ನಲ್ಲಿ ಬರುವ ತಲೆ ಕತ್ತರಿಸೋ ದೃಶ್ಯ ಸಂಪೂರ್ಣವಾಗಿ ‘ಕೆಜಿಎಫ್’ ಕ್ಲೈಮ್ಯಾಕ್ಸ್ನಲ್ಲಿ ಗರುಡನ ತಲೆಯನ್ನು ರಾಕಿ ಕತ್ತರಿಸುವ ದೃಶ್ಯವನ್ನು ಸ್ಫೂರ್ತಿಯಾಗಿ ಪಡೆದಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಪ್ಯಾರಡೈಸ್’ ವಿಮರ್ಶೆ; ಅಸ್ಮಿತೆಯ ಹೋರಾಟದಲ್ಲಿ ನರಕದ ಅನುಭವ
ಇನ್ನು, ಪ್ಯಾರಡೈಸ್ ಸಿನಿಮಾದಲ್ಲಿ ಬರುವ ಸೆಟ್‌ಗಳು ನರಾಚಿಯಲ್ಲಿ ಬರುವ ಮನೆಗಳನ್ನು ಹೋಲುತ್ತವೆ ಎಂದು ಅನೇಕರು ಹೇಳಿದ್ದಾರೆ. ಇನ್ನು, ಸಿನಿಮಾದ ಕಲರಿಂಗ್, ಮೇಕಿಂಗ್ ಸೇರಿದಂತೆ ಅನೇಕ ವಿಷಯಗಳು ‘ಕೆಜಿಎಫ್’ಗೆ ಹೋಲಿಕೆ ಮಾಡಲಾಗುತ್ತಿದೆ.
‘ಪ್ಯಾರಡೈಸ್’ ಸಿನಿಮಾಗೆ ನಾನಿ ಹೀರೋ. ಈ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ದಸರಾ’ ಹೆಸರಿನ ಸಿನಿಮಾ ಇವರ ಕಾಂಬಿನೇಷನ್ನಲ್ಲಿಯೇ ಬಂದಿತ್ತು. ಆ ಸಿನಿಮಾ ಹಿಟ್ ಆಗಿತ್ತು. ಆದರೆ, ಮತ್ತೊಮ್ಮೆ ಬಂದ ಇವರ ಕಾಂಬಿನೇಷನ್ನ ಜನರು ಒಪ್ಪಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:57 am, Fri, 25 September 26