ರಾಷ್ಟ್ರ ಪ್ರಶಸ್ತಿ ಪಡೆಯೋದಕ್ಕೂ ಮುನ್ನ ಜನರ ಹೃದಯ ಗೆದ್ದ ಅಲ್ಲು ಅರ್ಜುನ್; ಈ ವಿಡಿಯೋ ಸಾಕ್ಷಿ
Allu Arjun Viral Video: ನಡೆದಾಡಲು ಸಾಧ್ಯವಿಲ್ಲದ ವಿಶೇಷ ಅಭಿಮಾನಿಯು ವ್ಹೀಲ್ ಚೇರ್ ಮೇಲೆ ಕುಳಿತಿದ್ದ. ಆತನ ಹೆಸರು ಏನು ಎಂದು ಅಲ್ಲು ಅರ್ಜುನ್ ಕೇಳಿದ್ದಾರೆ. ಬಳಿಕ ಆಟೋಗ್ರಾಫ್ ನೀಡಿ, ಆ ಬಾಲಕನ ಜೊತೆ ಫೋಟೋಗೂ ಪೋಸ್ ಕೊಟ್ಟಿದ್ದಾರೆ. ಆತನ ಜೊತೆ ಒಂದೆರಡು ನಿಮಿಷಗಳ ಕಾಲ ಮಾತನಾಡಿ ಮುಂದೆ ಸಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ನಟ ಅಲ್ಲು ಅರ್ಜುನ್ (Allu Arjun) ಅವರು ‘ಪುಷ್ಪ’ ಸಿನಿಮಾದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರತಿಷ್ಠಿತ ಅವಾರ್ಡ್ ಸ್ವೀಕರಿಸುವ ಸಲುವಾಗಿ ಅವರು ದೆಹಲಿಗೆ ತೆರಳಿದರು. ದೆಹಲಿಗೆ ಹೋಗುವುದಕ್ಕೂ ಮುನ್ನ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರನ್ನು ನೋಡಲು ಫ್ಯಾನ್ಸ್ ಮುತ್ತಿಕೊಂಡಿದ್ದರು. ಆ ಪೈಕಿ ವ್ಹೀಲ್ ಚೇರ್ ಮೇಲೆ ಕುಳಿತಿದ್ದ ವಿಶೇಷ ಅಭಿಮಾನಿಗೆ ಅಲ್ಲು ಅರ್ಜುನ್ ಅವರು ಆಟೋಗ್ರಾಫ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ (Allu Arjun Viral Video) ಆಗಿದೆ. ಅಲ್ಲು ಅರ್ಜುನ್ ಅವರ ಹೃದಯವಂತಿಕೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸಲಾಗುತ್ತಿದೆ. ಅಲ್ಲು ಅರ್ಜುನ್ ಅವರು ನ್ಯಾಷನಲ್ ಅವಾರ್ಡ್ (National Film Award) ಗೆಲ್ಲುವುದಕ್ಕೂ ಮುನ್ನ ಜನರ ಹೃದಯ ಗೆದ್ದಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ನೀಡುತ್ತಿದೆ.
ಅಲ್ಲು ಅರ್ಜುನ್ ಅವರು ಸಖತ್ ಬ್ಯುಸಿ ಆಗಿದ್ದಾರೆ. ‘ಪುಷ್ಪ 2’ ಸಿನಿಮಾದ ಕೆಲಸಗಳ ಜೊತೆ ಇನ್ನೂ ಹಲವು ಕಮಿಟ್ಮೆಂಟ್ಗಳು ಅವರಿಗೆ ಇವೆ. ಅದರ ನಡುವೆ ಚಿಕ್ಕ-ಪುಟ್ಟ ವಿಚಾರಗಳ ಕಡೆಗೂ ಗಮನ ಹರಿಸುವುದು ಎಂದರೆ ಸುಲಭದ ಮಾತಲ್ಲ. ಎಲ್ಲ ಅಭಿಮಾನಿಗಳನ್ನೂ ಅಲ್ಲು ಅರ್ಜುನ್ ಅವರು ಪ್ರೀತಿಯಿಂದ ಮಾತನಾಡಿಸುತ್ತಾರೆ. ಹಾಗೆಯೇ ಹೈದರಾಬಾದ್ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಈ ಸ್ಪೆಷಲ್ ಅಭಿಮಾನಿಗೂ ಅವರು ಪ್ರೀತಿ ತೋರಿಸಿದ್ದಾರೆ. ಆ ಬಾಲಕನ ಜೊತೆ ಹ್ಯಾಂಡ್ ಶೇಕ್ ಮಾಡಿದ್ದಾರೆ.
ಅಲ್ಲು ಅರ್ಜುನ್ ವೈರಲ್ ವಿಡಿಯೋ:
View this post on Instagram
ನಡೆದಾಡಲು ಸಾಧ್ಯವಿಲ್ಲದ ಆ ವಿಶೇಷ ಅಭಿಮಾನಿಯು ವ್ಹೀಲ್ ಚೇರ್ ಮೇಲೆ ಕುಳಿತಿದ್ದ. ಆತನ ಹೆಸರು ಏನು ಎಂದು ಅಲ್ಲು ಅರ್ಜುನ್ ಕೇಳಿದ್ದಾರೆ. ಬಳಿಕ ಆಟೋಗ್ರಾಫ್ ನೀಡಿ, ಆ ಬಾಲಕನ ಜೊತೆ ಫೋಟೋಗೂ ಪೋಸ್ ಕೊಟ್ಟಿದ್ದಾರೆ. ಆತನ ಜೊತೆ ಒಂದೆರಡು ನಿಮಿಷಗಳ ಕಾಲ ಮಾತನಾಡಿ ಮುಂದೆ ಸಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲು ಅರ್ಜುನ್ ಅವರ ಈ ಗುಣ ಎಲ್ಲರಿಗೂ ಇಷ್ಟ ಆಗಿದೆ.
Allu Arjun: ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಹೆಮ್ಮೆಯ ಕ್ಷಣ; ವಿಡಿಯೋ ನೋಡಿ
‘ಪುಷ್ಪ 2’ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ. ಸುಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಸೆಟ್ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಡಾಲಿ ಧನಂಜಯ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿದಂತೆ ಅನೇಕ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ನಟನೆಗೆ ಅಲ್ಲು ಅರ್ಜುನ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿರುವುದರಿಂದ ‘ಪುಷ್ಪ 2’ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಆ ನಿರೀಕ್ಷೆಗೆ ತಕ್ಕಂತೆಯೇ ಹೆಚ್ಚು ಶ್ರಮ ಹಾಕಿ ಸಿನಿಮಾ ಮಾಡಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.