ಶಾರುಖ್ ಖಾನ್ ಬಳಿಕ ಮತ್ತೊಬ್ಬ ಸ್ಟಾರ್ ಜೊತೆ ನಯನತಾರಾ ನಟನೆ, 16 ವರ್ಷದ ಬಳಿಕ ಮತ್ತೆ ಒಂದು

|

Updated on: Sep 23, 2023 | 9:12 PM

Nayantara: ಶಾರುಖ್ ಖಾನ್ ಜೊತೆಗೆ 'ಜವಾನ್' ಸಿನಿಮಾದಲ್ಲಿ ನಟಿಸಿದ್ದ ನಟಿ ನಯನತಾರಾ ಇದೀಗ ಮತ್ತೊಬ್ಬ ಸ್ಟಾರ್ ನಟನೊಡನೆ ತೆರೆ ಹಂಚಿಕೊಳ್ಳಲಿದ್ದಾರೆ. ಅದೂ ಬರೋಬ್ಬರಿ 16 ವರ್ಷಗಳ ಬಳಿಕ.

ಶಾರುಖ್ ಖಾನ್ ಬಳಿಕ ಮತ್ತೊಬ್ಬ ಸ್ಟಾರ್ ಜೊತೆ ನಯನತಾರಾ ನಟನೆ, 16 ವರ್ಷದ ಬಳಿಕ ಮತ್ತೆ ಒಂದು
ನಯನತಾರಾ
Follow us on

ಕಳೆದ ಕೆಲವು ವರ್ಷಗಳಲ್ಲಿ ಹಲವಾರು ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೆಚ್ಚು ಗ್ಲಾಮರಸ್ ಆಗಿರುವ, ಹೆಚ್ಚು ತೆಳ್ಳಗೆ, ಬೆಳ್ಳಗೆ ಕಾಣುವ ಹಲವು ನಟಿಯರು ದಕ್ಷಿಣ ಭಾರತದ ಚಿತ್ರರಂಗದಲ್ಲಿದ್ದಾರೆ. ಬಾಲಿವುಡ್​ನಿಂದಲೂ ದಕ್ಷಿಣಕ್ಕೆ ಹಲವು ಇಂಥಹಾ ದಂತದ ಬೊಂಬೆಗಳು ಬಂದಿದ್ದಾರೆ. ಆದರೆ ಯಾರೇ ಬರಲಿ, ಯಾರೇ ಹೋಗಲಿ, ನಟಿ ನಯನತಾರಾ (Nayantara) ಬೇಡಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ವರ್ಷಗಳ ಕಳೆದಂತೆ ನಯನತಾರಾ ಬೇಡಿಕೆ ಏರುತ್ತಲೇ ಇದೆ. ಶಾರುಖ್ ಖಾನ್ ಸೇರಿದಂತೆ ಹಲವಾರು ಸ್ಟಾರ್ ನಟರೊಟ್ಟಿಗೆ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ನಯನತಾರಾ ನಾಯಕಿಯಾಗಿ ನಟಿಸಿರುವ ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಜವಾನ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ಕಲೆಕ್ಷನ್ ಸನಿಹಕ್ಕೆ ಹೋಗಿ ನಿಂತಿದೆ. ‘ಜವಾನ್’ ಸಿನಿಮಾದ ಗೆಲುವಿನ ಖುಷಿ ಇನ್ನೂ ಹಸಿರಾಗಿರುವಾಗೇ ನಯನತಾರಾಗೆ ಮತ್ತೊಬ್ಬ ಸ್ಟಾರ್ ನಟನೊಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಒದಗಿ ಬಂದಿದೆ.

ಹೌದು, ನಟ ಪ್ರಭಾಸ್​ ಜೊತೆಗೆ ನಯನತಾರಾ ತೆರೆ ಹಂಚಿಕೊಳ್ಳಲಿದ್ದಾರೆ. ಹಾಗೆಂದು ಪ್ರಭಾಸ್​ರ ಹೊಸ ಸಿನಿಮಾಕ್ಕೆ ನಯನತಾರಾ ನಾಯಕಿ ಎಂದೇನೂ ಅಲ್ಲ. ಬದಲಿಗೆ ಪ್ರಭಾಸ್ ಹೊಸ ಸಿನಿಮಾ ಒಂದರಲ್ಲಿ ಅತಿಥಿ ಪಾತ್ರ ನಿರ್ವಹಿಸುತ್ತಿದ್ದು, ಪ್ರಭಾಸ್ ಜೊತೆಗೆ ನಯನತಾರಾ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:‘ಜವಾನ್’ ಬಳಿಕ ಯೂಟ್ಯೂಬರ್​ಗೆ ಚಾನ್ಸ್​ ನೀಡಿದ ನಯನತಾರಾ; ಹೊಸ ಸಿನಿಮಾ ಅನೌನ್ಸ್

ಮಂಚು ವಿಷ್ಣು ನಟಿಸುತ್ತಿರುವ ‘ಕಣ್ಣಪ್ಪ’ ಹೆಸರಿನ ಪೌರಾಣಿಕ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಸಲಿಗೆ ಇದು ಪ್ರಭಾಸ್​ರ ಅತ್ಯಂತ ಮೆಚ್ಚಿನ ಪ್ರಾಜೆಕ್ಟ್ ಆಗಿತ್ತಂತೆ, ಪ್ರಭಾಸ್​ರ ದೊಡ್ಡಪ್ಪ ಕ್ರಿಶ್ಣಂ ರಾಜುಗೆ ಕಣ್ಣಪ್ಪ ಅಥವಾ ಬೇಡರ ಕಣ್ಣಪ್ಪ ಕುರಿತಾದ ಸಿನಿಮಾ ಮಾಡಬೇಕೆಂಬ ಆಸೆಯಿತ್ತಂತೆ. ಅದಕ್ಕೆ ಪ್ರಭಾಸ್ ಅನ್ನು ನಾಯಕನನ್ನಾಗಿ ಮಾಡಬೇಕು ಎಂದುಕೊಂಡಿದ್ದರಂತೆ ಆದರೆ ಅವರ ಕನಸು ನನಸಾಗುವ ಮುನ್ನ ಕೃಷ್ಣಂ ರಾಜು ನಿಧನ ಹೊಂದಿದರು. ಇದೀಗ ಪ್ರಭಾಸ್​, ಗೆಳೆಯ ಮಂಚು ವಿಷ್ಣು ‘ಕಣ್ಣಪ್ಪ’ ಸಿನಿಮಾದಲ್ಲಿ ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಭಾಸ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕಣ್ಣಪ್ಪ’ ಸಿನಿಮಾದಲ್ಲಿ ನಟ ಪ್ರಭಾಸ್, ಶಿವನ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದಲ್ಲಿ ಕೆಲವು ನಿಮಿಷಗಳ ಕಾಲ ಪ್ರಭಾಸ್ ಶಿವನ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ನಯನತಾರಾ ಪಾರ್ವತಿ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಪ್ರಭಾಸ್ ಹಾಗೂ ನಯನತಾರಾ ಈ ಹಿಂದೆ ಒಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು, ಅದುವೇ 2009ರಲ್ಲಿ ತೆರೆಗೆ ಬಂದಿದ್ದ ‘ಯೋಗಿ’. ಕನ್ನಡದ ‘ಜೋಗಿ’ ಸಿನಿಮಾದ ರೀಮೇಕ್ ಆಗಿದ್ದ ‘ಯೋಗಿ’ಯಲ್ಲಿ ನಯನತಾರಾ ನಾಯಕಿ. ಬರೋಬ್ಬರಿ 16 ವರ್ಷದ ಬಳಿಕ ಈಗ ಮತ್ತೆ ಪ್ರಭಾಸ್ ಹಾಗೂ ನಯನತಾರಾ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ