ನಯನತಾರಾ ಬರ್ತ್​ಡೇಗೆ ಉಡುಗೊರೆಯಾಗಿ ಸಿಕ್ತು 3 ಕೋಟಿ ರೂಪಾಯಿ ಕಾರು; ಕೊಟ್ಟಿದ್ದು ಯಾರು?

‘ಜವಾನ್’ ಸಿನಿಮಾ ಗೆಲುವಿನ ಖುಷಿಯಲ್ಲಿ ನಟಿ ನಯನತಾರಾ ಇದ್ದಾರೆ. ಅವರಿಗೆ ಈಗ 3 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಕಾರು ಉಡುಗೊರೆಯಾಗಿ ಸಿಕ್ಕಿದೆ. ಇದನ್ನು ಅವರು ಸಂಭ್ರಮಿಸಿದ್ದಾರೆ.

ನಯನತಾರಾ ಬರ್ತ್​ಡೇಗೆ ಉಡುಗೊರೆಯಾಗಿ ಸಿಕ್ತು 3 ಕೋಟಿ ರೂಪಾಯಿ ಕಾರು; ಕೊಟ್ಟಿದ್ದು ಯಾರು?
Updated By: ರಾಜೇಶ್ ದುಗ್ಗುಮನೆ

Updated on: Nov 30, 2023 | 12:40 PM

ನಟಿ ನಯನತಾರಾ (Nayanthara) ಅವರು ನವೆಂಬರ್ 18ರಂದು ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬಂತು. ಅವರ ಜನ್ಮದಿನಕ್ಕೆ ವಿಶೇಷ ಗಿಫ್ಟ್ ಸಿಕ್ಕಿದೆ. ಈ ವಿಚಾರವನ್ನು ಅವರು ಎರಡು ವಾರ ತಡವಾಗಿ ರಿವೀಲ್ ಮಾಡಿದ್ದಾರೆ. ನಯನತಾರಾ ಬರ್ತ್​ಡೇಗೆ ಸಿಕ್ಕಿದ್ದು ಅಂತಿಂಥ ಗಿಫ್ಟ್ ಅಲ್ಲ. ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆಯ ಕಾರು. ಹಾಗಂತ ಇದನ್ನು ‘ಜವಾನ್’ ತಂಡದವರು ನೀಡಿದ್ದಲ್ಲ. ಅವರ ಪತಿ ವಿಘ್ನೇಶ್ ಶಿವನ್ ಅವರು ಈ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ವಿಘ್ನೇಶ್ ಶಿವನ್ ಅವರು ಮರ್ಸೀಡಿಸ್ ಮೇಬ್ಯಾಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ 3 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ಇತ್ತೀಚೆಗೆ ನಯನತಾರಾ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಕಾರಿನ ಲೋಗೋದ ಫೋಟೋಗಳನ್ನು ಹಂಚಿಕೊಂಡಿರುವ ಅವರು, ‘ಮನೆಗೆ ಸ್ವಾಗತ ಬ್ಯೂಟಿ. ಸ್ವೀಟೆಸ್ಟ್ ಗಿಫ್ಟ್ ನೀಡಿದ ಪತಿಗೆ ಧನ್ಯವಾದ. ಲವ್​ ಯೂ’ ಎಂದು ಬರೆದುಕೊಂಡಿದ್ದಾರೆ.

ಮರ್ಸೀಡಿಸ್ ಮೇಬ್ಯಾಕ್ ಕಾರಿನ ಆರಂಭಿಕ ಬೆಲೆ​ 2.69 ಕೋಟಿ ರೂಪಾಯಿ ಇದೆ. ಈ ಕಾರಿನ ಬೆಲೆ 3.40 ಕೋಟಿ ರೂಪಾಯಿವರೆಗೂ ಇದೆ. ಸಾಕಷ್ಟು ಐಷಾರಾಮಿ ಫೀಚರ್​ಗಳನ್ನು ಈ ಕಾರು ಹೊಂದಿದೆ. ನಯನತಾರಾ ಅಭಿಮಾನಿಗಳು ನಟಿಗೆ ವಿಶ್ ಮಾಡುತ್ತಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ಜೂನ್ 2022ರಂದು ಸಿಂಪಲ್ ಆಗಿ ಇವರು ಮದುವೆ ಆದರು. ಬಾಡಿಗೆ ತಾಯ್ತನದ ಮೂಲಕ ಅಕ್ಟೋಬರ್ ತಿಂಗಳಲ್ಲಿ ಇವರು ಅವಳಿ ಮಕ್ಕಳು ಪಡೆದರು. ಇವರ ಮಕ್ಕಳಿಗೆ ಉಯಿರ್ ಹಾಗೂ ಉಳಗ್ ಎಂದು ನಾಮಕರಣ ಮಾಡಲಾಗಿದೆ.


ಇದನ್ನೂ ಓದಿ: ನಟಿ ನಯನತಾರಾ ಮಾಡಿಕೊಂಡ ವಿವಾದಗಳು ಒಂದೆರಡಲ್ಲ; ಇಲ್ಲಿದೆ ಮಾಹಿತಿ

ನಯನತಾರಾ ಅವರಿಗೆ ಈ ವರ್ಷದ ಬರ್ತ್​​ಡೇ ಸಖತ್ ವಿಶೇಷ ಎನಿಸಿಕೊಂಡಿತ್ತು. ಶಾರುಖ್ ಖಾನ್ ಹಾಗೂ ನಯನತಾರಾ ನಟನೆಯ ‘ಜವಾನ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಗಳಿಕೆ ಮಾಡಿದೆ.  ಹೀಗಾಗಿ, ಬಾಲಿವುಡ್​ನಲ್ಲಿ ಅವರಿಗೆ ಹಲವು ಆಫರ್​ಗಳು ಬರುತ್ತಿವೆ. ರಾಕೇಶ್ ಓಂಪ್ರಕಾಶ್​ ಮೆಹ್ರಾ ಅವರ ‘ಕರ್ಣ’ ಸಿನಿಮಾಗೆ ನಯನತಾರಾ ಆಯ್ಕೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ‘ಅನ್ನಪೂರ್ಣೀ’ ಸೇರಿ ಅನೇಕ ಸಿನಿಮಾಗಳಲ್ಲಿ ನಯನತಾರಾ ಅವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ