ನಟಿ ನಯನತಾರಾ ಮಾಡಿಕೊಂಡ ವಿವಾದಗಳು ಒಂದೆರಡಲ್ಲ; ಇಲ್ಲಿದೆ ಮಾಹಿತಿ
ನಯನತಾರಾ ತಮ್ಮ ವೃತ್ತಿಜೀವನದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಆ ವಿವಾದಗಳ ಬಗ್ಗೆ ಈ ಸ್ಟೋರಿಯಲ್ಲಿದೆ ಮಾಹಿತಿ.
ನಟಿ ನಯನತಾರಾ (Nayanthara) ಅವರಿಗೆ ಇಂದು (ನವೆಂಬರ್ 18) ಜನ್ಮದಿನದ ಸಂಭ್ರಮ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರಿಗೆ ಈ ವರ್ಷದ ಜನ್ಮದಿನ ಸಖತ್ ವಿಶೇಷ. ಬಾಲಿವುಡ್ನಲ್ಲಿ ಅವರು ನಟಿಸಿದ ಮೊದಲ ಸಿನಿಮಾ ‘ಜವಾನ್’ ಸೂಪರ್ ಹಿಟ್ ಆಗಿದೆ. ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹೀಗಾಗಿ ಬರ್ತ್ಡೇ ಭರ್ಜರಿ ಸ್ಪೆಷಲ್ ಆಗಿದೆ. ನಯನತಾರಾ ಅವರಿಗೆ ಅವಳಿ ಮಕ್ಕಳು ಜನಿಸಿವೆ. ಅವರ ಜೊತೆ ನಯನತಾರಾ ಬರ್ತ್ಡೇ ಆಚರಿಸಿಕೊಂಡಿದ್ದಾರೆ.
ನಯನತಾರಾ ಅವರು ಈ ಬಾರಿ ಇನ್ಸ್ಟಾಗ್ರಾಮ್ಗೆ ಕಾಲಿಟ್ಟಿದ್ದಾರೆ. ಅವರಿಗೆ 70 ಲಕ್ಷ ಜನ ಹಿಂಬಾಲಕರಿದ್ದಾರೆ. ಈ ವರ್ಷ ರಿಲೀಸ್ ಆದ ‘ಜವಾನ್’ ಚಿತ್ರಕ್ಕಾಗಿ ಅವರು 11 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ನಯನತಾರಾ ತಮ್ಮ ವೃತ್ತಿಜೀವನದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಆ ವಿವಾದಗಳ ಬಗ್ಗೆ ಈ ಸ್ಟೋರಿಯಲ್ಲಿದೆ ಮಾಹಿತಿ.
ಪ್ರಭುದೇವ ಜೊತೆ ರಿಲೇಶನ್ಶಿಪ್
2011ರಲ್ಲಿ ನಯನತಾರಾ ಅವರು ಪ್ರೀತಿ ವಿಚಾರಕ್ಕೆ ಸುದ್ದಿ ಆಗಿದ್ದರು. ಅವರು ನಟ, ನಿರ್ದೇಶಕ, ಕೊರಿಯೋಗ್ರಾಫರ್ ಪ್ರಭುದೇವ ಜೊತೆ ರಿಲೇಶನ್ಶಿಪ್ನಲ್ಲಿದ್ದರು. ನಯನತಾರಾ ಜೊತೆ ರಿಲೇಶನ್ಶಿಪ್ನಲ್ಲಿ ಮುಂದುವರಿಯಬೇಕು ಎನ್ನುವ ಕಾರಣಕ್ಕೆ ತಮ್ಮ 16 ವರ್ಷದ ಸಂಬಂಧವನ್ನು ಪ್ರಭುದೇವ ಕೊನೆಗೊಳಿಸಿಕೊಂಡರು. ಪತ್ನಿ ರಾಮಲತಾ ಜೊತೆ ಅವರು ವಿಚ್ಛೇದನ ಪಡೆದರು. ನಯನತಾರಾ ಅವರು ಸಿನಿಮಾಗೆ ಗುಡ್ಬೈ ಹೇಳಲು ನಿರ್ಧರಿಸಿದ್ದರು. ಆದರೆ, ರಾಮಲತಾ ಅವರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಮೂಲಗಳ ಪ್ರಕಾರ ರಾಮಲತಾ ಹಾಗೂ ನಯನತಾರಾ ಮಧ್ಯೆ ಸಾಕಷ್ಟು ಕಿತ್ತಾಟ ನಡೆದಿದೆ ಎನ್ನಲಾಗಿದೆ. ಈ ಘಟನೆ ನಯನತಾರಾ ಅವರಿಗೆ ಸಾಕಷ್ಟು ದುಃಖ ತಂದಿತ್ತು.
ಲೀಕ್ ಆಯ್ತು ಸಿಂಬು ಜೊತೆಗಿನ ಫೋಟೋ
ಪ್ರಭುದೇವ ಜೊತೆಗಿನ ರಿಲೇಶನ್ಶಿಪ್ ಬಳಿಕ ನಯನತಾರಾ ಅವರು ಅಪ್ಸೆಟ್ ಆದರು. ಆ ಬಳಿಕ ಸುಧಾರಿಸಿಕೊಂಡು ಮರಳಿ ಸಿನಿಮಾಗೆ ಬಂದರು. ಅವರು ತಮಿಳು ನಟ ಸಿಂಬು ಜೊತೆ ರಿಲೇಶನ್ಶಿಪ್ನಲ್ಲಿ ಇದ್ದರು ಎನ್ನಲಾಗಿದೆ. ಇಬ್ಬರೂ ಕಿಸ್ ಮಾಡುತ್ತಿರುವ ಫೋಟೋ ಲೀಕ್ ಆಗಿತ್ತು. ಈ ಫೋಟೋ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.
ಪುಣ್ಯಸ್ಥಳದಲ್ಲಿ ಚಪ್ಪಲಿ
ನಯನತಾರಾ ಅವರು ಪುಣ್ಯಸ್ಥಳದಲ್ಲಿ ಚಪ್ಪಲಿ ಧರಿಸಿದ್ದ ವಿಚಾರ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. 2022ರಲ್ಲಿ ನಯನತಾರಾ ಅವರು ಮದುವೆ ಆದರು. ಆ ಬಳಿಕ ಅವರು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಆವರಣದಲ್ಲಿ ಓಡಾಡುವಾಗ ಅವರು ಚಪ್ಪಲಿ ಧರಿಸಿದ್ದರು. ಇದರಿಂದ ವಿವಾದ ಸೃಷ್ಟಿ ಆಗಿತ್ತು.
ಸೀತೆ ಪಾತ್ರ
ನಟಿ ನಯನತಾರಾ ಅವರು ಪ್ರಭುದೇವ ಜೊತೆ ಡೇಟಿಂಗ್ ಮಾಡುವಾಗ ಸೀತೆ ಪಾತ್ರ ಮಾಡಲು ಆಫರ್ ಬಂದಿತ್ತು ಎನ್ನಲಾಗಿದೆ. ಇದನ್ನು ಅನೇಕರು ಟೀಕೆ ಮಾಡಿದ್ದರು. ಸೀತೆ ಪಾತ್ರ ಮಾಡಲು ನಯನತಾರಾ ಸೂಕ್ತ ಅಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Nayanthara: ‘ಅನ್ನಪೂರ್ಣಿ’ ಟೀಸರ್ ಬಿಡುಗಡೆ; ಇದು ನಯನತಾರಾ ನಟನೆಯ 75ನೇ ಸಿನಿಮಾ
ಬಾಡಿಗೆ ತಾಯ್ತನ
ನಯನತಾರಾ 2022ರಲ್ಲಿ ಮದುವೆ ಆದರು. ಮದುವೆ ಆದ ಆರೇ ತಿಂಗಳಿಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು ನಯನತಾರಾ ಹಾಗೂ ವಿಘ್ನೇಶ್ ಶಿವನ್. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನಿಯಮದ ಪ್ರಕಾರ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಮದುವೆ ಆಗಿ ಕನಿಷ್ಠ ಆರು ವರ್ಷ ಕಳೆದಿರಬೇಕು. ಹೀಗಾಗಿ ಸರ್ಕಾರದ ಕಡೆಯಿಂದ ತನಿಖೆಗೆ ಆದೇಶಿಸಲಾಯಿತು. ಹಲವು ವರ್ಷಗಳ ಹಿಂದೆಯೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ನೋಂದಣಿ ಮಾಡಿಸಿಕೊಂಡಿದ್ದರು ಎನ್ನುವ ವಿಚಾರ ಗೊತ್ತಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:29 am, Sat, 18 November 23