ನಟಿ ನಯನತಾರಾ ಈಗ ನಿರ್ದೇಶಕಿ? ಅಭಿನಯಕ್ಕೆ ವಿದಾಯ ಹೇಳುವ ಸೂಚನೆ ಕೊಟ್ರಾ ಲೇಡಿ ಸೂಪರ್ ಸ್ಟಾರ್?
ಈ ಫೋಟೋ ನೋಡಿದ ನೆಟ್ಟಿಗರಿಗೆ ಅನುಮಾನ ಮೂಡಿದೆ. ಮಕ್ಕಳು ಮತ್ತು ಸಂಸಾರದ ಕಡೆಗೆ ಗಮನ ಹರಿಸುತ್ತಿರುವ ನಯನತಾರಾ ಅವರು ಇನ್ಮುಂದೆ ನಟನೆಗೆ ಹೆಚ್ಚು ಸಮಯ ನೀಡುವುದಿಲ್ಲ. ಅದರ ಬದಲು ನಿರ್ದೇಶನ ಮಾಡುತ್ತಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಈ ಬಗ್ಗೆ ನಯನತಾರಾ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಹಲವು ವರ್ಷಗಳಿಂದ ನಟಿ ನಯನತಾರಾ (Nayanthara) ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ವಿವಿಧ ಪಾತ್ರಗಳಲ್ಲಿ ನೋಡುವ ಮೂಲಕ ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ. ಈ ವರ್ಷ ‘ಜವಾನ್’ (Jawan) ಸಿನಿಮಾದ ಮೂಲಕ ನಯನತಾರಾ ಅವರು ಬಾಲಿವುಡ್ಗೆ ಕಾಲಿಟ್ಟರು. ಅಲ್ಲಿಯೂ ಅವರಿಗೆ ಬ್ಲಾಕ್ ಬಸ್ಟರ್ ಹಿಟ್ ಸಿಕ್ಕಿತು. ನಟಿಯಾಗಿ ಇಷ್ಟೆಲ್ಲ ಸಕ್ಸಸ್ ಕಂಡಿರುವ ನಯನತಾರಾ ಅವರಿಗೆ ನಟನೆ ಬಗ್ಗೆ ಬೇಸರ ಮೂಡಿದೆಯಾ? ಅಭಿನಯಕ್ಕೆ ವಿದಾಯ ಹೇಳಿ ಅವರು ನಿರ್ದೇಶನ (Direction) ಮಾಡುವ ತಯಾರಿಯಲ್ಲಿದ್ದಾರಾ? ಈ ಎಲ್ಲ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಒಂದು ಹೊಸ ಫೋಟೋ!
ಸೋಶಿಯಲ್ ಮೀಡಿಯಾದಲ್ಲಿ ನಯನತಾರಾ ಅವರು ಅಷ್ಟೇನೂ ಆ್ಯಕ್ಟೀವ್ ಆಗಿಲ್ಲ. ಕೆಲವೇ ತಿಂಗಳ ಹಿಂದೆ ಅವರು ಇನ್ಸ್ಟಾಗ್ರಾಮ್ನಲ್ಲಿ ಖಾತೆ ತೆರೆದರು. ಅವರು ಈಗ ಒಂದು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕ್ಯಾಮೆರಾ ಹಿಂದೆ ನಿಂತು ನಿರ್ದೇಶನ ಮಾಡುತ್ತಿರುವ ದೃಶ್ಯ ಇದೆ. ಈ ಫೋಟೋದ ಜೊತೆ ಅವರು ಹಂಚಿಕೊಂಡಿರುವ ಕ್ಯಾಪ್ಷನ್ ಕೂಡ ಗಮನ ಸೆಳೆಯುತ್ತಿದೆ. ‘ಹೊಸ ಆರಂಭದ ಮ್ಯಾಜಿಕ್ ಬಗ್ಗೆ ನಂಬಿಕೆ ಇರಲಿ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.
View this post on Instagram
ಈ ಫೋಟೋ ನೋಡಿದ ನೆಟ್ಟಿಗರಿಗೆ ಅನುಮಾನ ಮೂಡಿದೆ. ಮಕ್ಕಳು ಮತ್ತು ಸಂಸಾರದ ಕಡೆಗೆ ಗಮನ ಹರಿಸುತ್ತಿರುವ ನಯನತಾರಾ ಅವರು ಇನ್ಮುಂದೆ ನಟನೆಗೆ ಹೆಚ್ಚು ಸಮಯ ನೀಡುವುದಿಲ್ಲ. ಅದರ ಬದಲಿ ನಿರ್ದೇಶನ ಮಾಡುತ್ತಾರೆ. ಆ ಕಾರಣದಿಂದಲೇ ಅವರು ಈ ರೀತಿ ಕ್ಯಾಪ್ಷನ್ ನೀಡಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಈ ಬಗ್ಗೆ ನಯನತಾರಾ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ. ಈ ಫೋಟೋಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ: Nayanthara: ‘ಅನ್ನಪೂರ್ಣಿ’ ಟೀಸರ್ ಬಿಡುಗಡೆ; ಇದು ನಯನತಾರಾ ನಟನೆಯ 75ನೇ ಸಿನಿಮಾ
ನಟಿಯಾಗಿ ನಯನತಾರಾ ಅವರಿಗೆ ಸಖತ್ ಬೇಡಿಕೆ ಇದೆ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಲೇಡಿ ಸೂಪರ್ ಸ್ಟಾರ್’ ಎಂದು ಕರೆಯುತ್ತಾರೆ. ಅನೇಕ ಸ್ಟಾರ್ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಇಷ್ಟ ವರ್ಷಗಳ ಕಾಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಅವರು ಈಗ ಬಾಲಿವುಡ್ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ನಟಿಯಾಗಿ ಇಷ್ಟೆಲ್ಲ ಡಿಮ್ಯಾಂಡ್ ಇರುವಾಗ ಅವರು ಅಭಿನಯಕ್ಕೆ ಗುಡ್ಬೈ ಹೇಳಲು ಸಾಧ್ಯವೇ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




