20 ಕೋಟಿ ಬಂಗಲೆ, 5 ಕೋಟಿ ರೂ. ರಿಂಗ್​; ವಿಘ್ನೇಶ್​-ನಯನತಾರಾಗೆ ಬಂತು ದುಬಾರಿ ಉಡುಗೊರೆ​

ನಿರ್ಮಾಪಕ ಬೋನಿ ಕಪೂರ್, ಬಾಲಿವುಡ್ ನಟ ಶಾರುಖ್​ ಖಾನ್, ಕಾರ್ತಿ, ನಿರ್ದೇಶಕ ಅಟ್ಲೀ ಮೊದಲಾದವರು ಈ ಮದುವೆಗೆ ಹಾಜರಿ ಹಾಕಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇವರ ಮದುವೆಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

20 ಕೋಟಿ ಬಂಗಲೆ, 5 ಕೋಟಿ ರೂ. ರಿಂಗ್​; ವಿಘ್ನೇಶ್​-ನಯನತಾರಾಗೆ ಬಂತು ದುಬಾರಿ ಉಡುಗೊರೆ​
ನಯತಾರಾ-ವಿಘ್ನೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 10, 2022 | 6:29 PM

ನಯನತಾರಾ (Nayanthara) ಹಾಗೂ ವಿಘ್ನೇಶ್ ಶಿವನ್ ಜೂನ್ 9ರಂದು ಮದುವೆ ಆಗಿ ಹೊಸ ಬಾಳು ಆರಂಭಿಸಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಜೋಡಿ ವಿವಾಹವಾಗಿದೆ. ಈ ಮೂಲಕ ಹಲವು ವರ್ಷಗಳ ಪ್ರೀತಿಗೆ ಇವರು ಹೊಸ ಅರ್ಥ ನೀಡಿದ್ದಾರೆ. ಸ್ಟಾರ್ ನಟರ ಮದುವೆ ಎಂದರೆ ಇಂಡಸ್ಟ್ರಿ ಗೆಳೆಯರು ಹಾಗೂ ಕುಟುಂಬದವರಿಂದ ದುಬಾರಿ ಬೆಲೆಯ ಗಿಫ್ಟ್ ಸಿಗೋದು ಸಾಮಾನ್ಯ. ಈಗ ನಯತಾರಾ-ವಿಘ್ನೇಶ್ ಮದುವೆಯಲ್ಲಿ (Nayanthara-Vignesh Shivan Wedding) ) ದುಬಾರಿ ಗಿಫ್ಟ್​ಗಳು ಸಿಕ್ಕಿವೆ. ಅಚ್ಚರಿ ಎಂದರೆ, ಮದುವೆ ಆದ ಖುಷಿಯಲ್ಲಿ ಸ್ವತಃ ನಯನತಾರಾ ಅವರು ಪತಿ ವಿಘ್ನೇಶ್​ಗೆ 20 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ವರದಿ ಆಗಿದೆ.

ನಯನತಾರಾ ಅವರು ಸ್ಟಾರ್ ನಟಿ. ಅವರಿಗೆ ಸ್ಟಾರ್ ಕಲಾವಿದರು ಹಾಗೂ ನಿರ್ಮಾಪಕರ ಜತೆ ಗೆಳೆತನವಿದೆ. ವಿಘ್ನೇಶ್ ಕೂಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕೆ ನಿರ್ಮಾಪಕ ಬೋನಿ ಕಪೂರ್, ಬಾಲಿವುಡ್ ನಟ ಶಾರುಖ್​ ಖಾನ್, ಕಾರ್ತಿ, ನಿರ್ದೇಶಕ ಅಟ್ಲೀ ಮೊದಲಾದವರು ಈ ಮದುವೆಗೆ ಹಾಜರಿ ಹಾಕಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇವರ ಮದುವೆಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಹಲವು ಉಡುಗೊರೆಗಳು ಕೂಡ ಸಿಕ್ಕಿವೆ.

ನಯನತಾರಾ ಅವರು ಐಷಾರಾಮಿ ಬಂಗಲೆಯನ್ನು ವಿಘ್ನೇಶ್​ಗೆ ನೀಡಿದ್ದಾರೆ ಎನ್ನಲಾಗಿದೆ. ಇದರ ಬೆಲೆ ಸುಮಾರು 20 ಕೋಟಿ ರೂಪಾಯಿ. ನಯನತಾರಾ ಈ ಬಂಗೆಲೆಯನ್ನು ಖರೀದಿಸಿ ಗುಟ್ಟಾಗಿ ವಿಘ್ನೇಶ್ ಹೆಸರಿಗೆ ನೋಂದಣಿ ಮಾಡಿಸಿದ್ದರು. ಅವರು ಮದುವೆಯ ದಿನ ಈ ನಿವಾಸದ ದಾಖಲೆಗಳನ್ನು ವಿಘ್ನೇಶ್​ಗೆ ನೀಡಿದ್ದಾರೆ. ಇದರಿಂದ ಅವರು ಅಚ್ಚರಿಗೊಂಡಿದ್ದಾರೆ ಎಂದು ವರದಿ ಆಗಿದೆ. ಇಷ್ಟಕ್ಕೆ ನಿಂತಿಲ್ಲ. 24 ತೊಲ ಚಿನ್ನವನ್ನು ನಯನತಾರಾ ಅವರು ವಿಘ್ನೇಶ್ ಸಹೋದರಿಗೆ ನೀಡಿದ್ದಾರೆ. ಈ ಮೂಲಕ ಮದುವೆಯನ್ನು ಅವರು ವಿಶೇಷವಾಗಿಸಿದ್ದಾರೆ.

ಇದನ್ನೂ ಓದಿ
Image
ಮದುವೆಯಲ್ಲಿ ಸುಂದರಿಯಾಗಿ ಮಿಂಚಿದ ನಯನತಾರಾ; ಇಲ್ಲಿದೆ ಫೋಟೋ ಗ್ಯಾಲರಿ
Image
Nayanthara Vignesh Shivan Wedding: ನಯನತಾರಾ-ವಿಘ್ನೇಶ್​ ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​; ಇಲ್ಲಿವೆ ಫೋಟೋಗಳು
Image
Nayanthara Vignesh Wedding: ‘ಸೂಪರ್​’ ಚಿತ್ರದ ನಟಿ​ ನಯನತಾರಾಗೆ ಮದುವೆ ಸಂಭ್ರಮ; ವಿಘ್ನೇಶ್​ ಶಿವನ್​ ಕೈ ಹಿಡಿದ ಸುಂದರಿ
Image
Nayanthara Wedding: ನಯನತಾರಾ ಜತೆ ಮದುವೆ ಆಗೋಕಿಂತ ಕೆಲವೇ ಗಂಟೆ ಮುನ್ನ ಪ್ರಮುಖರಿಗೆ ಧನ್ಯವಾದ ತಿಳಿಸಿದ ವಿಘ್ನೇಶ್​ ಶಿವನ್​

ಇದನ್ನೂ ಓದಿ:  ನಯನತಾರಾ-ವಿಘ್ನೇಶ್​ ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​; ಇಲ್ಲಿವೆ ಫೋಟೋಗಳು

ವಿಘ್ನೇಶ್ ಕೂಡ ನಯನತಾರಾಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. 5 ಕೋಟಿ ರೂಪಾಯಿ ಬೆಲೆ ಬಾಳುವ ಡೈಮಂಡ್ ರಿಂಗ್ ನಯನತಾರಾಗೆ ನೀಡಿದ್ದಾರೆ. ಮದುವೆಯಲ್ಲಿ ನಯನತಾರಾ ಧರಿಸಿರುವ ಆಭರಣ ಗಮನ ಸೆಳೆದಿತ್ತು. ಇದನ್ನು ವಿಘ್ನೇಶ್ ಅವರೇ ಗಿಫ್ಟ್ ಮಾಡಿದ್ದಾರೆ. ಇದರ ಬೆಲೆ 2-3 ಕೋಟಿ ರೂಪಾಯಿ ಇದೆ ಎನ್ನುತ್ತಿವೆ ವರದಿ. ನಯನತಾರಾ ಹಾಗೂ ವಿಘ್ನೇಶ್ ಸೆಲೆಬ್ರಿಟಿಗಳಿಗೋಸ್ಕರ ವಿಶೇಷ ಪಾರ್ಟಿ ಆಯೋಜಿಸಲು ನಿರ್ಧರಿಸಿದ್ದಾರೆ. ಚೆನ್ನೈನಲ್ಲಿ ಈ ವಾರಾಂತ್ಯಕ್ಕೆ ಪಾರ್ಟಿ ಆಯೋಜನೆಗೊಳ್ಳಲಿದೆ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.