ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಗಾಯಕಿಯರಲ್ಲಿ ನೇಹಾ ಕಕ್ಕರ್ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತದೆ. ಬಾಲಿವುಡ್ನ ಅನೇಕ ಹಿಟ್ ಗೀತೆಗಳಿಗೆ ಅವರು ಧ್ವನಿ ಆಗಿದ್ದಾರೆ. ಸಿಂಗಿಂಗ್ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಧೂಳೆಬ್ಬಿಸುತ್ತಿರುವ ಹಿಂದಿಯ ಅನೇಕ ರಿಮಿಕ್ಸ್ ಹಾಡುಗಳು ಮೂಡಿಬಂದಿರುವುದು ಇದೇ ನೇಹಾ ಕಂಠದಲ್ಲಿ. ಯಶ್ ನಟನೆಯ ಕೆಜಿಎಫ್: ಚಾಪ್ಟರ್ 1 ಚಿತ್ರದ ಹಿಂದಿ ಅವತರಣಿಕೆಯ ‘ಗಲಿ ಗಲಿ ಮೆ..’ ಹಾಡಿಗೆ ನೇಹಾ ಧ್ವನಿ ನೀಡಿದ್ದರು. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನೇಹಾ ಈಗ ಗಂಡನ ಜೊತೆಗಿನ ಫೈಟ್ ಕಾರಣಕ್ಕೆ ಸುದ್ದಿ ಆಗಿದ್ದಾರೆ.
ಕಳೆದ ವರ್ಷ ಲಾಕ್ಡೌನ್ ಸಡಿಲಿಕೆ ಆದ ಬಳಿಕ, ಅಂದರೆ ಅಕ್ಟೋಬರ್ 24ರಂದು ಪಂಜಾಬಿ ಗಾಯಕ ರೋಹನ್ಪ್ರೀತ್ ಸಿಂಗ್ ಜೊತೆ ನೇಹಾ ಬಾಳಬಂಧನಕ್ಕೆ ಒಳಗಾದರು. ಮದುವೆ ಆಗಿ ಇನ್ನೂ 7 ತಿಂಗಳು ಕೂಡ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಗಂಡನ ಜೊತೆ ಅವರು ಬಡಿದಾಡಿಕೊಂಡಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತಿದೆ. ಹಾಗಂತ ನೇಹಾ ನಿಜವಾಗಿಯೂ ಪತಿ ರೋಹನ್ಪ್ರೀತ್ ಸಿಂಗ್ ಜೊತೆ ಮಾರಾಮಾರಿ ಮಾಡಿಕೊಂಡಿದ್ದಾರಾ? ಇಲ್ಲಿದೆ ಟ್ವಿಸ್ಟ್.
ಈ ವಿಡಿಯೋವನ್ನು ಸ್ವತಃ ನೇಹಾ ಕಕ್ಕರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಕೈ ಕೈ ಮಿಲಾಯಿಸುತ್ತಿರುವ ದೃಶ್ಯ ಅದರಲ್ಲಿ ಇದೆ. ಒಂದು ಕ್ಷಣ ನೋಡಿದರೆ ಇಬ್ಬರ ಸಂಸಾರದಲ್ಲಿ ಏನೋ ಕಿರಿಕ್ ಆಗಿದೆ ಎಂಬಂತಿರುವ ಈ ವಿಡಿಯೋದ ಅಸಲಿಯತ್ತು ಬೇರೆಯೇ ಇದೆ. ಇಬ್ಬರೂ ಜೊತೆಯಾಗಿ ಒಂದು ಹೊಸ ಮ್ಯೂಸಿಕ್ ವಿಡಿಯೋ ಮಾಡಿದ್ದಾರೆ. ಶೀಘ್ರದಲ್ಲೇ ಅದು ಬಿಡುಗಡೆ ಆಗಲಿದೆ. ಅದರ ಪ್ರಕಾರಕ್ಕಾಗಿ ಅವರು ಈ ರೀತಿ ಗಿಮಿಕ್ ಮಾಡಿದ್ದಾರೆ.
ನೇಹಾ ಮತ್ತು ರೋಹನ್ಪ್ರೀತ್ ಸಿಂಗ್ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಕೂಡ ಇಂಥ ಗಿಮಿಕ್ ಮಾಡಿದ್ದರು. ಮದುವೆ ಆಗಿ ಎರಡು ತಿಂಗಳು ಕಳೆಯುವುದರೊಳಗೆ ತಾವು ಪ್ರೆಗ್ನೆಂಟ್ ಎಂದು ಬಿಂಬಿಸುವ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದರು ನೇಹಾ. ನಂತರ ಅದು ಕೂಡ ಅವರ ಹೊಸ ಹಾಡಿನ ಪ್ರಮೋಷನ್ ಗಿಮಿಕ್ ಎಂಬುದು ಗೊತ್ತಾಗಿತ್ತು.
ಇದನ್ನೂ ಓದಿ:
ಮದುವೆಯಾದ ಎರಡೇ ತಿಂಗಳಿಗೆ ನೇಹಾ ಕಕ್ಕರ್ನಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ..
ಗಾಯಕಿ ನೇಹಾ ಕಕ್ಕರ್ ಗರ್ಭಿಣಿ ಅಲ್ಲ, ಹೊಸ ಮ್ಯೂಸಿಕ್ ವಿಡಿಯೊದ ಪ್ರಚಾರ ತಂತ್ರ ಇದು!
Published On - 4:05 pm, Tue, 11 May 21