AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ವಾಹನದಲ್ಲಿ ನಿಧಿ ಅಗರ್ವಾಲ್, ಸ್ಪಷ್ಟನೆ ಕೊಟ್ಟ ನಟಿ

Nidhi Agarwal: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ನಟಿಸಿದ್ದ ನಟಿ ನಿಧಿ ಅಗರ್ವಾಲ್ ವಿವಾದಕ್ಕೆ ಈಡಾಗಿದ್ದಾರೆ. ಇತ್ತೀಚೆಗೆ ಖಾಸಗಿ ಮಳಿಗೆ ಉದ್ಘಾಟನೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಿಧಿ ಅಗರ್ವಾಲ್ ಆಗಮಿಸಿದ್ದರು. ಅಂದಿನ ಕಾರ್ಯಕ್ರಮಕ್ಕೆ ಅವರು ಸರ್ಕಾರಿ ವಾಹನದಲ್ಲಿ ಬಂದಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ವಾಹನದಲ್ಲಿ ನಿಧಿ ಅಗರ್ವಾಲ್, ಸ್ಪಷ್ಟನೆ ಕೊಟ್ಟ ನಟಿ
Nidhi Agarwal
ಮಂಜುನಾಥ ಸಿ.
|

Updated on: Aug 12, 2025 | 3:10 PM

Share

ಸಿನಿಮಾ (Cinema) ಹಾಗೂ ರಾಜಕೀಯ ರಂಗ ಎರಡೂ ಭಿನ್ನ ರಂಗಗಳಾದರೂ ಈ ಎರಡು ರಂಗಗಳಲ್ಲಿ ಸಕ್ರಿಯರಾಗಿರುವವರು ಪರಸ್ಪರ ಬಲು ಆತ್ಮೀಯ. ಒಬ್ಬರನ್ನೊಬ್ಬರು ಅವಲಂಬಿಸುತ್ತಲೇ ಇರುತ್ತಾರೆ. ಆದರೆ ಕೆಲವೊಮ್ಮೆ ಇದೇ ವಿವಾದಕ್ಕೆ ಕಾರಣವಾಗಿದ್ದೂ ಸಹ ಇದೆ. ಇತ್ತೀಚೆಗಷ್ಟೆ ನಟಿ ನಿಧಿ ಅಗರ್ವಾಲ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು. ನಟಿ ನಿಧಿ ಅವರು ಆ ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ವಾಹನದಲ್ಲಿ ಬಂದಿದ್ದರು. ನಿಧಿ ಅವರು ಸರ್ಕಾರಿ ವಾಹನದಿಂದ ಕೆಳಗೆ ಇಳಿಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಟಿಯೊಬ್ಬರು ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ವಾಹನವನ್ನು ಬಳಸಿದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ನಟಿ ನಿಧಿ ಅಗರ್ವಾಲ್ ಇತ್ತೀಚೆಗೆ ಆಂಧ್ರ ಪ್ರದೇಶದ ಭೀಮವರಂ ನಗರದಲ್ಲಿ ಅಂಗಡಿಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಿಧಿ ಅವರು ಈ ಕಾರ್ಯಕ್ರಮಕ್ಕೆ ಇನ್ನೋವಾ ಕಾರಿನಲ್ಲಿ ಆಗಮಿಸಿದ್ದರು. ಆದರೆ ಆ ಕಾರಿನ ಮೇಲೆ ಆಂಧ್ರ ಪ್ರದೇಶ ಸರ್ಕಾರದ ಬೋರ್ಡ್ ಇತ್ತು. ಸರ್ಕಾರಕ್ಕೆ ಸೇರಿದ ವಾಹನದಲ್ಲಿ ನಿಧಿ ಅಗರ್ವಾಲ್, ಮಳಿಗೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಿಧಿ ಅವರು ಸರ್ಕಾರಿ ವಾಹನದಿಂದ ಕಾರ್ಯಕ್ರಮಕ್ಕೆ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು.

ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದರು. ಇದೇ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳು ತುಸು ಉದಾರಿಯಾಗಿ ನಟಿಗೆ ಸರ್ಕಾರಿ ವಾಹನವನ್ನೇ ಕೊಟ್ಟುಬಿಟ್ಟಿದ್ದಾರೆ ಎಂಬ ಚರ್ಚೆಗಳು ಆರಂಭವಾದವು. ಕೆಲವು ವಿಪಕ್ಷದ ಸದಸ್ಯರು ಇದನ್ನು ಪ್ರಶ್ನೆ ಸಹ ಮಾಡಿದರು. ತೆಲುಗು ಮಾಧ್ಯಮಗಳು ಸಹ ಈ ಬಗ್ಗೆ ವರದಿ ಮಾಡಿ ಪ್ರಶ್ನೆ ಮಾಡಿದ್ದವು.

ಇದನ್ನೂ ಓದಿ:ನಿಧಿ ಅಗರ್ವಾಲ್​ ಅದೃಷ್ಟ ತಂದುಕೊಡುತ್ತಾ ‘ಹರಿ ಹರ ವೀರ ಮಲ್ಲು’

ಇದೀಗ ಸ್ವತಃ ನಟಿ ನಿಧಿ ಅಗರ್ವಾಲ್ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಆ ಕಾರ್ಯಕ್ರಮದ ಸ್ಥಳೀಯ ಆಯೋಜಕರು ನನಗೆ ವಾಹನವನ್ನು ಕಳಿಸಿದ್ದರು. ನಾನು ಇಂಥಹುದೇ ವಾಹನ ನನಗೆ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ. ಆಯೋಜಕರು ಕಳಿಸಿದ ವಾಹನದಲ್ಲಿ ನಾನು ಬಂದೆ. ಸರ್ಕಾರಿ ಅಧಿಕಾರಿಗಳೇ ಆ ವಾಹನವನ್ನು ನನಗೆ ಕಳಿಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಅದೂ ಸಹ ಸುಳ್ಳಾಗಿದ್ದು, ಆ ವಾಹನವನ್ನು ನನಗೆ ಯಾವುದೇ ಸರ್ಕಾರಿ ಅಧಿಕಾರಿಗಳು ಕಳಿಸಿಲ್ಲ. ನನಗೆ ಯಾವುದೇ ಅಧಿಕಾರಿಗಳೊಟ್ಟಿಗೆ ಸಂಪರ್ಕ ಸಹ ಇಲ್ಲ’ ಎಂದಿದ್ದಾರೆ.

‘ನಾನು ನನ್ನ ಅಭಿಮಾನಿಗಳಿಗೆ ಬಹಳ ಗೌರವ ನೀಡುತ್ತೇನೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಸುಳ್ಳು ಹೇಳಿಕೆಗಳು ಹರಿದಾಡುತ್ತಿರುವ ಹೊತ್ತಿನಲ್ಲಿ ನನ್ನ ಅಭಿಮಾನಿಗಳ ಗೊಂದಲ ನಿವಾರಣೆಗೆಂದು ನಾನು ಈ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದಿದ್ದಾರೆ ನಟಿ. ಅಸಲಿಗೆ ನಿಧಿ ಅಗರ್ವಾಲ್ ಭೀಮವರಂ ಕಾರ್ಯಕ್ರಮಕ್ಕೆ ಆಗಮಿಸಿದ ಕಾರು ಹೋಟೆಲ್ ಒಂದಕ್ಕೆ ಸೇರಿದ್ದಾಗಿತ್ತಂತೆ. ಆದರೆ ಹೋಟೆಲ್​ನ ಕಾರಿನ ಮೇಲೆ ಸರ್ಕಾರದ ಬೋರ್ಡನ್ನು ಲಗ್ಗತ್ತಿಸಲಾಗಿತ್ತು. ಇದೀಗ ಘಟನೆ ಬಗ್ಗೆ ದೂರು ದಾಖಲಿಸಿದ್ದು ತನಿಖೆ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ