‘ಕೂಲಿ’ ಹೆಸರಲ್ಲಿ ವಸೂಲಿ; ಚೆನ್ನೈನಲ್ಲಿ ಟಿಕೆಟ್ ಬೆಲೆ 183 ರೂ, ಬೆಂಗಳೂರಲ್ಲಿ ಕನಿಷ್ಠ ಬೆಲೆ 400 ರೂ.

ರಜನಿಕಾಂತ್ ನಟನೆಯ "ಕೂಲಿ" ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂಗಡ ಬುಕಿಂಗ್‌ನಿಂದ 75 ಕೋಟಿ ರೂಪಾಯಿ ಗಳಿಕೆ ಆಗಿದೆ. ಟಿಕೆಟ್ ದರ ಅತಿ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿರುವುದು ಜನಸಾಮಾನ್ಯರಿಗೆ ತೊಂದರೆಯಾಗಿದೆ. ಬೆಂಗಳೂರಿನಲ್ಲಿ ಟಿಕೆಟ್ ದರಗಳು 400-600 ರೂಪಾಯಿಗಳವರೆಗೆ ತಲುಪಿವೆ. ಇದರಿಂದಾಗಿ ಚಿತ್ರಮಂದಿರಕ್ಕೆ ಹೋಗುವುದು ದುಬಾರಿಯಾಗಿದೆ.

‘ಕೂಲಿ’ ಹೆಸರಲ್ಲಿ ವಸೂಲಿ; ಚೆನ್ನೈನಲ್ಲಿ ಟಿಕೆಟ್ ಬೆಲೆ 183 ರೂ, ಬೆಂಗಳೂರಲ್ಲಿ ಕನಿಷ್ಠ ಬೆಲೆ 400 ರೂ.
ಕೂಲಿ ಸಿನಿಮಾ

Updated on: Aug 13, 2025 | 7:39 AM

ರಜನಿಕಾಂತ್ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಅದೆಷ್ಟೋ ದಾಖಲೆಗಳನ್ನು ಬರೆದಾಗಿದೆ. ಈಗ ಅವರ ನಟನೆಯ ‘ಕೂಲಿ’ ಸಿನಿಮಾ (Coolie Movie) ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲ ಮೂಡಿದೆ. ಅದಕ್ಕೂ ಮೊದಲೇ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಲು ರೆಡಿ ಆಗಿದೆ. ಅಡ್ವಾನ್ಸ್ ಬುಕಿಂಗ್​​ನಿಂದಲೇ ಚಿತ್ರಕ್ಕೆ 75 ಕೋಟಿ ರೂಪಾಯಿ ಹರಿದು ಬಂದಿದೆ. ಇಷ್ಟೊಂದು ಗಳಿಕೆಗೆ ಕಾರಣ ಆಗ್ತಿರೋದು ಸಿನಿಮಾದ ಟಿಕೆಟ್ ದರ.

ಸನ್ ಪಿಕ್ಚರ್ಸ್ ‘ಕೂಲಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಕಲಾನಿಧಿ ಮಾರನ್ ಅವರು ದೊಡ್ಡ ಬಜೆಟ್​ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು ಭಾಷೆಗಳಿಂದ ಪ್ಯಾನ್ ಇಂಡಿಯಾ ಸಿನಿಮಾಗಳು ಬರುತ್ತಿವೆ. ಆದರೆ, ತಮಿಳಿನಲ್ಲಿ ಮಾತ್ರ ಪ್ಯಾನ್ ಇಂಡಿಯಾ ಸಿನಿಮಾಗಳು ಸಿದ್ಧವಾಗುತ್ತಿಲ್ಲ ಎನ್ನುವ ಬೇಸರ ಅವರಿಗೆ ಇದೆ. ಈ ಕಾರಣದಿಂದಲೇ ‘ಕೂಲಿ’ಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಅವರು ರೆಡಿ ಆಗಿದ್ದಾರೆ. ಸಿನಿಮಾ ಹೈಪ್ ಹೆಚ್ಚಿದಂತೆ ಟಿಕೆಟ್ ಬೆಲೆ ಕೂಡ ಹೆಚ್ಚಿದೆ.

‘ಕೂಲಿ’ ಸಿನಿಮಾ ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ಚೆನ್ನೈನ ಬಹುತೇಕ ಮಲ್ಟಿಪ್ಲೆಕ್ಸ್​ನಲ್ಲಿ 183 ರೂಪಾಯಿಗೆ ವೀಕ್ಷಣೆಗೆ ಸಿಗುತ್ತಿದೆ. ಕೆಲವು ಕಡೆಗಳಲ್ಲಿ 190 ರೂಪಾಯಿ ಇದೆ. ಆದರೆ, ಎಲ್ಲಿಯೂ 200ರ ಗಡಿ ದಾಟಿಲ್ಲ. ಆದರೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್​ನಲ್ಲಿ ಈ ದರ ಗಗನಕ್ಕೇರಿದೆ. ಸಿಂಗಲ್​ ಸ್ಕ್ರೀನ್ ಥಿಯೇಟರ್​​ಗಳು ಟಿಕೆಟ್​ ಬೆಲೆಯೆನ್ನು 250-300 ರೂಪಾಯಿಗೆ ಏರಿಸಿಕೊಂಡು ಕುಳಿತಿವೆ. ಇನ್ನು, ಮಲ್ಟಿಪ್ಲೆಕ್ಸ್​ಗಳಲ್ಲಿ 400 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭ! ಕೆಲವು ಕಡೆಗಳಲ್ಲಿ 500, 600 ಸಾವಿರ ಹೀಗೆ ದುಬಾರಿ ಆಗಿಯೇ ಇದೆ. ಜನ ಸಾಮಾನ್ಯರಿಗೆ ಈ ದರ ಎಟುಕುವ ರೀತಿಯಲ್ಲಿ ಇಲ್ಲ.

ಇದನ್ನೂ ಓದಿ
‘ಸು ಫ್ರಮ್ ಸೋ’ ಕಲೆಕ್ಷನ್​ನಲ್ಲಿ ವಿದೇಶಿಗರ ಪಾಲೆಷ್ಟು? ಪರಭಾಷೆಯವರದ್ದೆಷ್ಟು
21ನೇ ವಯಸ್ಸಿಗೆ ಮದುವೆ ಆದ ಸ್ಟಾರ್ ನಟಿ; ಆ ಹೀರೋಯಿನ್ ಬಗ್ಗೆ ಇಲ್ಲಿದೆ ವಿವರ
ಗೇಲ್ ಜೊತೆ ಚಂದನ್ ಶೆಟ್ಟಿ ವಿಡಿಯೋ ಸಾಂಗ್; ಕನ್ನಡ ಹಾಡಿಗೆ ಎಗ್ಸೈಟ್ ಆದ್ರು
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ

ಇದನ್ನೂ ಓದಿ: 4500 ರೂಪಾಯಿಗೆ ಮಾರಾಟ ಆಯ್ತು ‘ಕೂಲಿ’ ಸಿನಿಮಾ ಬ್ಲಾಕ್ ಟಿಕೆಟ್

ಮನೆಯಲ್ಲಿ ಮೂವರು ಸಿನಿಮಾ ನೋಡೋಕೆ ಹೋದರೆ ನಿಮ್ಮ ಜೇಬಿಗೆ ಒಂದೂವರೆ ಸಾವಿರ ರೂಪಾಯಿ ಕತ್ತರಿ ಬೀಳೋದು ಗ್ಯಾರಂಟಿ. ಈ ಹಣದಲ್ಲಿ ಒಂದು ವಾರದ ರೇಷನ್ ಬರುತ್ತೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.