ಬೆಂಗಳೂರಲ್ಲಿ ಮಾತನಾಡಲು ಬಿಡದ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಜೂ.ಎನ್​ಟಿಆರ್

ಜೂನಿಯರ್ ಎನ್​ಟಿಆರ್ ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಹೊಸ ಘಟಕ ಉದ್ಘಾಟನೆಗೆ ಆಗಮಿಸಿದ್ದರು. ವೇದಿಕೆ ಮೇಲೆ ಭಾಷಣ ಮಾಡುವಾಗ ಅಭಿಮಾನಿಗಳು ಜೋರಾಗಿ ಕೂಗಿದ್ದಕ್ಕೆ, ಮೌನ ವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದರು. ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಗೌರವ ನೀಡುವ ಬಗ್ಗೆ ಮಾತನಾಡಿದ ಜೂ. ಎನ್​ಟಿಆರ್, ಕಿಮ್ಸ್ ಜೊತೆ ತನಗಿರುವ ವೈಯಕ್ತಿಕ ನಂಟನ್ನೂ ಸ್ಮರಿಸಿದರು.

ಬೆಂಗಳೂರಲ್ಲಿ ಮಾತನಾಡಲು ಬಿಡದ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಜೂ.ಎನ್​ಟಿಆರ್
ಜೂನಿಯರ್ ಎನ್​​ಟಿಆರ್

Updated on: Mar 09, 2026 | 7:47 AM

ಟಾಲಿವುಡ್ ನಟ ಜೂನಿಯರ್ ಎನ್​​ಟಿಆರ್ (JR NTR) ಅವರು ಭಾನುವಾರ (ಮಾರ್ಚ್ 8) ಬೆಂಗಳೂರಿಗೆ ಆಗಮಿಸಿದ್ದರು. ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಅವರು ಇಲ್ಲಿಗೆ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಅಭಿಮಾನಿಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಒಂದೇ ಸಮನೆ ಕೂಗುತ್ತಿದ್ದರು. ಆಗ ಜೂನಿಯರ್ ಎನ್​​ಟಿಆರ್ ಅವರು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಜೂನಿಯರ್​ ಎನ್​​ಟಿಆರ್ ಕಿಮ್ಸ್ ಘಟಕ ಉದ್ಘಾಟನೆಗೆ ಬರಲು ಒಂದು ಕಾರಣವೂ ಇತ್ತು. 1983ರಲ್ಲಿ ಜೂ ಎನ್​​​ಟಿಆರ್ ಅವರ ತಾತ ಎನ್​​ಟಿಆರ್ ಅವರೇ ಕಿಮ್ಸ್​​ಗೆ ಅಡಿಗಲ್ಲು ಹಾಕಿದ್ದರು. 2009ರಲ್ಲಿ ಜೂ ಎನ್​​ಟಿಆರ್ ಭಾರಿ ರಸ್ತೆ ಅಪಘಾತಕ್ಕೆ ಒಳಾಗಾದಾಗ ಅವರು ಕಿಮ್ಸ್​​ನಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಇಂದು ಕಿಮ್ಸ್​​ನ ಹೊಸ ಘಟಕದ ಉದ್ಘಾಟನೆಗೆ ಅವರು ಆಗಮಿಸಿದ್ದರು. ಅವರನ್ನು ಅಭಿಮಾನಿಗಳು ಖುಷಿಯಿಂದ ಸ್ವಾಗತಿಸಿದರು. ಅವರನ್ನು ನೋಡಲು ಜನ ಸಾಗರವೇ ನೆರೆದಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೂ ಎನ್​​ಟಿಆರ್: ಬಂದಿದ್ದೇಕೆ? ಆಡಿದ ಮಾತುಗಳೇನು?

ಮಾರ್ಚ್ 8 ಮಹಿಳಾ ದಿನಾಚರಣೆ ಆಗಿತ್ತು. ಹೀಗಾಗಿ ಆ ಬಗ್ಗೆ ಅವರು ಮಾತನಾಡಿದರು. ‘ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಪದೇ ಪದೇ ಹೇಳುವುದು ತನಗೆ ಇಷ್ಟವಿಲ್ಲ. ಪ್ರತಿಯೊಬ್ಬ ಪುರುಷನೂ ಆ ಸಂಸ್ಕೃತಿಯೊಂದಿಗೆ ಹುಟ್ಟಬೇಕು’ ಎಂದರು. ಅಲ್ಲದೆ, ತಮ್ಮ ಮಕ್ಕಳಿಗೂ ಮಹಿಳೆಯರನ್ನು ಗೌರವಿಸುವುದನ್ನು ಹೇಳಿಕೊಡೋದಾಗಿ ಹೇಳಿದರು. ಸಿನಿಮಾ ಮಾತ್ರವಲ್ಲದೆ ಹೊರಗೆಯೂ ತುಂಬಾ ಸಾಧಾರಣವಾಗಿ ವರ್ತಿಸುವ ಎನ್​​​​ಟಿಆರ್, ಮಹಿಳೆಯರ ಸುರಕ್ಷತೆ ಮತ್ತು ಗೌರವದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳ ಬಗ್ಗೆಯೂ ಮಾತನಾಡಿದರು ಮತ್ತು ಮನೆಗೆ ಎಚ್ಚರಿಕೆಯಿಂದ ಹೋಗುವಂತೆ ಸಲಹೆ ನೀಡಿದರು.

ಜೂನಿಯರ್ ಎನ್​​ಟಿಆರ್ ಅವರು ಮಾತು ಆರಂಭಿಸುವಾಗ ಫ್ಯಾನ್ಸ್ ಅವರ ಹೆಸರನ್ನು ಕೂಗಿದರು.. ಆಗ ಫ್ಯಾನ್ಸ್ ಜೂನಿಯರ್ ಎನ್​​ಟಿಆರ್ ಅವರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಸುಮ್ಮನಿರಿ, ಸುಮ್ಮನಿರಿ ಎಂದು ಖಡಕ್ ಎಚ್ಚರಿಕೆ ನೀಡಿದ ಬಳಿಕ ಫ್ಯಾನ್ಸ್ ಸುಮ್ಮನಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us