‘ಮಹಿಳೆಯರ ಪ್ರಯತ್ನಕ್ಕೆ ಪುರುಷರ ಬೆಂಬಲ ಖಂಡಿತಾ ಇದೆ’; ನಿರ್ದೇಶಕಿ ಅಪೂರ್ವಾ ಅನುಭವದ ಮಾತು

International Women's Day 2022: ಹೀರೋಯಿನ್ ಆಗಿ ಮಿಂಚಿದ ಅಪೂರ್ವಾ ಅವರು ಈಗ ನಿರ್ದೇಶಕಿ ಆಗಿಯೂ ಗಮನ ಸೆಳೆಯುತ್ತಿದ್ದಾರೆ. ‘ಮಹಿಳಾ ದಿನಾಚರಣೆ’ ಪ್ರಯುಕ್ತ ಅವರ ಕುರಿತ ವಿಶೇಷ ಲೇಖನ ಇಲ್ಲಿದೆ..

‘ಮಹಿಳೆಯರ ಪ್ರಯತ್ನಕ್ಕೆ ಪುರುಷರ ಬೆಂಬಲ ಖಂಡಿತಾ ಇದೆ’; ನಿರ್ದೇಶಕಿ ಅಪೂರ್ವಾ ಅನುಭವದ ಮಾತು
ಅಪೂರ್ವಾ
Follow us
ಮದನ್​ ಕುಮಾರ್​
| Updated By: shivaprasad.hs

Updated on:Mar 08, 2022 | 9:15 AM

ಚಿತ್ರರಂಗದಲ್ಲಿ (Cinema Industry) ಮಹಿಳೆಯರು ತೆರೆ ಹಿಂದೆ ಕೆಲಸ ಮಾಡುವುದು ಕಡಿಮೆ ಎಂದೇ ಹೇಳಬಹುದು. ನಟಿ ಆಗಬೇಕು ಎಂದು ಉತ್ಸಾಹ ತೋರಿಸುವವರ ಸಂಖ್ಯೆಯೇ ಜಾಸ್ತಿ. ಈ ನಡುವೆ ಅಲ್ಲೊಬ್ಬರು ಇಲ್ಲೊಬ್ಬರು ನಿರ್ದೇಶಕಿಯರು ಸಿಗುತ್ತಾರೆ. ಅದರಲ್ಲೂ ಮೊದಲು ನಟಿಯಾಗಿ ಫೇಮಸ್ ಆಗಿ ನಂತರ ನಿರ್ದೇಶಕಿ ಆದವರ ಸಂಖ್ಯೆ ತೀರಾ ವಿರಳ. ಅಂಥವರ ಸಾಲಿನಲ್ಲಿ ಅಪರೂಪದ ಪ್ರತಿಭೆಯಾಗಿ ಗುರುತಿಸಿಕೊಂಡವರು ಅಪೂರ್ವಾ (Apoorva). ಈ ಹಿಂದೆ ರವಿಚಂದ್ರನ್ (Ravichandran) ನಟನೆ-ನಿರ್ದೇಶನದ ‘ಅಪೂರ್ವ’ ಸಿನಿಮಾ ಮೂಲಕ ಹೀರೋಯಿನ್ ಆಗಿ ಲಾಂಚ್ ಆಗಿದ್ದ ಅಪೂರ್ವಾ ಅವರು ಈಗ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಆ್ಯಕ್ಷನ್-ಕಟ್ ಹೇಳಿದ ‘ಓ ನನ್ನ ಚೇತನ’ ಸಿನಿಮಾ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಆ ಮೂಲಕ ಮೊದಲ ಪ್ರಯತ್ನದಲ್ಲಿ ಅಪೂರ್ವಾ ಅವರು ಗಮನ ಸೆಳೆಯುವ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಮರ್ಷಿಯಲ್ ಸಿನಿಮಾಗಳಿಗೆ ನಾಯಕಿ ಆಗಬಲ್ಲಂತಹ ಸೌಂದರ್ಯ ಹೊಂದಿರುವ ಅವರು ಕ್ಯಾಮೆರಾ ಹಿಂದೆ ನಿಂತು ನಿರ್ದೇಶನದಲ್ಲಿ ಆಸಕ್ತಿ ಬೆಳೆಸಿಕೊಂಡಿರುವು ವಿಶೇಷ. ತಮ್ಮ ಈ ಸಿನಿಮಾ ಜರ್ನಿ ಬಗ್ಗೆ ಅಪೂರ್ವಾ ಅವರು ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಮಹಿಳಾ ದಿನಾಚರಣೆ’ ಪ್ರಯುಕ್ತ ಅವರ ಕುರಿತ ವಿಶೇಷ ಲೇಖನ ಇಲ್ಲಿದೆ.

ಹೀರೋಯಿನ್ ಆಗಿ ಮಿಂಚುತ್ತಿರುವಾಗಲೇ ಅಪೂರ್ವಾ ಅವರಿಗೆ ನಿರ್ದೇಶನದ ಬಗ್ಗೆ ಆಸಕ್ತಿ ಚಿಗುರಿತ್ತು. ಅದು ಹೇಗೆ ಎಂಬುದನ್ನು ಅವರೇ ವಿವರಿಸಿದ್ದಾರೆ. ‘ಕ್ಯಾಮೆರಾ ಮುಂದೆ ನಿಂತು ನಟಿಸುವುದೇ ಕಷ್ಟ ಅಂತ ನಾವು ಅಂದುಕೊಳ್ಳುತ್ತೇವೆ. ಆದರೆ ತೆರೆಹಿಂದೆ ಕೆಲಸ ಮಾಡುವ ನಿರ್ದೇಶಕರು, ತಂತ್ರಜ್ಞರು ಎಷ್ಟು ಕಷ್ಟಪಡುತ್ತಾರೆ ಎಂಬುದು ಗೊತ್ತಾಯಿತು. ಹಾಗಾಗಿ ಆ ಕೆಲಸಗಳನ್ನು ಕಲಿಯಬೇಕು, ನಿರ್ದೇಶನದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಮೂಡಿತು’ ಎಂದಿದ್ದಾರೆ ಅಪೂರ್ವಾ. ತಮ್ಮಲ್ಲಿ ಮೂಡಿದ ಆಸಕ್ತಿಯ ಬಗ್ಗೆ ನಿರ್ದೇಶಕ ಹರಿ ಸಂತೋಷ್ ಬಳಿಕ ಅಪೂರ್ವಾ ಹೇಳಿಕೊಂಡರು. ಅವರಿಂದ ಸಲಹೆ ಮತ್ತು ಸಹಕಾರ ಸಿಕ್ಕಿದ್ದರಿಂದ ಅಪೂರ್ವಾ ಅವರು ‘ಓ ನನ್ನ ಚೇತನಾ’ ಸಿನಿಮಾ ನಿರ್ದೇಶನ ಮಾಡಿದರು.

ಪುರುಷರು ಖಂಡಿತಾ ಪ್ರೋತ್ಸಾಹ ನೀಡುತ್ತಾರೆ:

ಚಿತ್ರರಂಗದಲ್ಲಿ ಪುರುಷರ ಪ್ರಾಬಲ್ಯ ಇದೆ ಎಂಬುದು ನಿಜ. ಆದರೆ ಮಹಿಳೆಯರು ನಿರ್ದೇಶನ ಮಾಡಬೇಕು ಎಂದು ಮುಂದೆ ಬಂದರೆ ಪುರುಷರು ಖಂಡಿತಾ ಬೆಂಬಲ ನೀಡುತ್ತಾರೆ ಎಂಬುದು ಅಪೂರ್ವಾ ಅವರು ಅನುಭವದ ಮಾತು. ‘ಮಹಿಳೆಯವರಿಗೆ ಹಲವು ಕ್ಷೇತ್ರದಲ್ಲಿ ಸ್ವತಂತ್ರ ಇರುವುದಿಲ್ಲ. ಮನೆಯಲ್ಲೂ ಕೂಡ ಹಾಗೆಯೇ ಆಗುತ್ತದೆ. ಆದರೆ ಹೆಣ್ಣುಮಕ್ಕಳು ಮನಸ್ಸು ಮಾಡಿ ಏನಾದರೂ ಸಾಧಿಸಲು ಮುಂದೆ ಬಂದರೆ ಪುರುಷರು ಖಂಡಿತಾ ಪ್ರೋತ್ಸಾಹ ನೀಡುತ್ತಾರೆ. ನನ್ನ ವಿಚಾರದಲ್ಲಿ ಅದು ಸಾಧ್ಯವಾಗಿದೆ’ ಎಂದು ಅಪೂರ್ವಾ ಹೇಳಿದ್ದಾರೆ.

ನಿರ್ದೇಶನ ದೊಡ್ಡ ಜವಾಬ್ದಾರಿ:

‘ಹೆಣ್ಣು ಅಥವಾ ಗಂಡು ಯಾರೇ ಆಗಿರಲಿ. ನಿರ್ದೇಶನ ಎಂಬುದು ಒಂದು ದೊಡ್ಡ ಜವಾಬ್ದಾರಿ. ಒಂದು ಇಡೀ ಮನೆಯನ್ನು ನಿಭಾಯಿಸುವ ಹೊಣೆಯನ್ನು ಹೊತ್ತುಕೊಳ್ಳುವ ರೀತಿಯಲ್ಲೇ ಒಂದು ಸಿನಿಮಾ ನಿರ್ದೇಶನದ ಜವಾಬ್ದಾರಿ ಇರುತ್ತದೆ. ಹಾಗಾಗಿ ಮಹಿಳೆಯರಿಗೆ ಕಷ್ಟ ಎನಿಸಬಹುದು. ಮನೆಯವರಿಂದ, ತಂಡದವರಿಂದ ಸೂಕ್ತ ಬೆಂಬಲ ಸಿಕ್ಕರೆ ನಿರ್ದೇಶನ ಮಾಡಬಹುದು’ ಎಂಬುದು ಅಪೂರ್ವಾ ಮಾತು.

ಇನ್ನಷ್ಟು ನಿರ್ದೇಶಕಿಯರು ಬರಬೇಕು:

‘ಆರಂಭದ ದಿನಗಳಲ್ಲಿ ನಟಿಯರ ಸಂಖ್ಯೆ ಕೂಡ ಕಡಿಮೆ ಇತ್ತು. ನಂತರ ಮಹಿಳೆಯರು ಹೆಚ್ಚಾಗಿ ನಟನೆಯ ಕ್ಷೇತ್ರಕ್ಕೆ ಬರಲು ಆರಂಭಿಸಿದರು. ನಿರ್ದೇಶನದಲ್ಲೂ ಅದೇ ರೀತಿ ಆಗಬೇಕು. ಈಗ ನಿರ್ದೇಶಕಿಯರ ಸಂಖ್ಯೆ ಕಡಿಮೆ ಇದೆ ಎಂಬುದು ನಿಜ. ಆದರೆ ಮುಂದಿನ ದಿನಗಳಲ್ಲಿ ಪ್ರೋತ್ಸಾಹ ಸಿಕ್ಕರೆ ಹೆಚ್ಚು ನಿರ್ದೇಶಕಿಯರು ಚಿತ್ರರಂಗಕ್ಕೆ ಬರುತ್ತಾರೆ. ಆಗ ಹೊಸ ಹೊಸ ರೀತಿಯ ಸಿನಿಮಾಗಳು ಪ್ರೇಕ್ಷಕರಿಗೆ ಸಿಗುತ್ತವೆ. ಬೇರೆ ಬೇರೆ ಆಯಾಮದ ಸಿನಿಮಾಗಳು ತಯಾರಾಗುತ್ತವೆ’ ಎನ್ನುತ್ತಾರೆ ಅಪೂರ್ವಾ.

ತಮ್ಮ ಮೊದಲ ನಿರ್ದೇಶನದ ಚಿತ್ರವೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿ ಪ್ರದರ್ಶನಗೊಳ್ಳುತ್ತದೆ ಎಂದು ಅಪೂರ್ವಾ ಊಹಿಸಿರಲಿಲ್ಲ. ಆಯ್ಕೆ ಆಗಿರುವುದು ಅವರು ಅಪಾರ ಖುಷಿ ನೀಡಿದೆ. ಇಂಥ ಇನ್ನಷ್ಟು ಪ್ರಯತ್ನಗಳನ್ನು ಮಾಡಬೇಕು ಎಂಬ ಉತ್ಸಾಹ ಅವರಲ್ಲಿ ಮೂಡಿದೆ. ಅದೇ ರೀತಿ, ಸದ್ಯ ಹೀರೋಯಿನ್ ಆಗಿಯೂ ಅಪೂರ್ವಾ ಅವರು ಬ್ಯುಸಿ ಆಗಿದ್ದಾರೆ. ನಟನೆಯ ಜೊತೆಗೆ ತಮ್ಮ ನಿರ್ದೇಶನದ ಸಿನಿಮಾಗಳ ಕೆಲಸಗಳಲ್ಲೂ ಅವರು ತೊಡಗಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಮೊದಲ ಮಂಗಳಮುಖಿ ಸುದ್ದಿ ನಿರೂಪಕಿ ತಶ್ನುವಾ; ಮಹಿಳಾ ದಿನಾಚರಣೆಯಂದೇ ಕೆಲಸ ಪ್ರಾರಂಭ

 ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಕಾರಣವೇನು? ಇಲ್ಲಿದೆ ಇತಿಹಾಸ

Published On - 7:01 am, Tue, 8 March 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ