Adipurush: ‘ಆದಿಪುರುಷ್​’ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರದಲ್ಲಿ ಹನುಮನಿಗೆ ಒಂದು ಸೀಟು ಮೀಸಲು; ಏನಿದು ನಂಬಿಕೆ?

|

Updated on: Jun 06, 2023 | 1:00 PM

Devdatta Nage: ‘ಆದಿಪುರುಷ್​’ ಸಿನಿಮಾದಲ್ಲೂ ಶ್ರೀರಾಮನ ಗುಣಗಾನ ಮಾಡಲಾಗುತ್ತದೆ. ರಾಮನ ಕುರಿತಾದ ಹಾಡುಗಳು ಇದರಲ್ಲಿ ಇವೆ. ದೇವದತ್ತ ನಾಗೆ ಅವರು ಆಂಜನೇಯನ ಪಾತ್ರ ಮಾಡಿದ್ದಾರೆ.

Adipurush: ‘ಆದಿಪುರುಷ್​’ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರದಲ್ಲಿ ಹನುಮನಿಗೆ ಒಂದು ಸೀಟು ಮೀಸಲು; ಏನಿದು ನಂಬಿಕೆ?
ದೇವದತ್ತ ನಾಗೆ
Follow us on

ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ (Adipurush) ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಪ್ರಭಾಸ್​ (Prabhas) ಅವರು ರಾಮನಾಗಿ ನಟಿಸಿದ್ದಾರೆ. ಜೂನ್​ 16ರಂದು ಅದ್ದೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಅಚ್ಚರಿ ಏನೆಂದರೆ, ಈ ಸಿನಿಮಾ ಪ್ರದರ್ಶನ ಕಾಣುವ ಎಲ್ಲ ಚಿತ್ರಮಂದಿರಗಳಲ್ಲೂ ಆಂಜನೇಯನಿಗಾಗಿ ಒಂದು ಸೀಟ್​ ಮೀಸಲಿಡಲು ತೀರ್ಮಾನಿಸಲಾಗಿದೆ. ಚಿತ್ರತಂಡದವರು ಈ ರೀತಿ ಮಾಡಲು ಒಂದು ಸ್ಪೆಷಲ್​ ಕಾರಣ ಇದೆ. ಇದು ಅಪ್ಪಟ ನಂಬಿಕೆಗೆ ಸಂಬಂಧಿಸಿದ ವಿಚಾರ. ರಾಮನ ಪರಮ ಭಕ್ತ ಆಂಜನೇಯನಿಗೆ (Lord Hanuman) ಗೌರವ ಸಲ್ಲಿಸುವ ಸಲುವಾಗಿ ಪ್ರತಿ ಚಿತ್ರಮಂದಿರದಲ್ಲಿ ಒಂದು ಸೀಟನ್ನು ಖಾಲಿ ಬಿಡಲಾಗುವುದು ಎಂದು ಸ್ವತಃ ‘ಆದಿಪುರುಷ್​​’ ಚಿತ್ರತಂದವರು ತಿಳಿಸಿದ್ದಾರೆ.

ಎಲ್ಲಿ ರಾಮನ ಆರಾಧನೆ ಮಾಡಲಾಗುತ್ತೋ ಅಲ್ಲಿ ಆಂಜನೇಯ ಬರುತ್ತಾನೆ ಎಂಬ ನಂಬಿಕೆ ಇದೆ. ‘ಆದಿಪುರುಷ್​’ ಸಿನಿಮಾದಲ್ಲೂ ಶ್ರೀರಾಮನ ಗುಣಗಾನ ಮಾಡಲಾಗುತ್ತದೆ. ರಾಮನ ಕುರಿತಾದ ಹಾಡುಗಳು ಇದರಲ್ಲಿ ಇವೆ. ಹಾಗಾಗಿ ಈ ಸಿನಿಮಾ ಪ್ರದರ್ಶನ ಆಗುವಾಗ ಚಿತ್ರಮಂದಿರಕ್ಕೆ ಹನುಮಂತ ಬರುತ್ತಾನೆ ಎಂಬ ನಂಬಿಕೆ ಹಲವರಿಗೆ ಇದೆ. ಆ ಕಾರಣದಿಂದ ಒಂದು ಸೀಟನ್ನು ಪವನ ಪುತ್ರನಿಗಾಗಿ ಮೀಸಲಿಡಲಾಗುವುದು ಎಂಬುದು ವಿಶೇಷ. ‘ಆದಿಪುರುಷ್​’ ಸಿನಿಮಾದಲ್ಲಿ ದೇವದತ್ತ ನಾಗೆ ಅವರು ಆಂಜನೇಯನ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಓಂ ರಾವತ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Dharma Censor Board: ‘ಧಾರ್ಮಿಕ ಸೆನ್ಸಾರ್​ ಮಂಡಳಿ’; ಸಿನಿಮಾಗಳಲ್ಲಿ ಹಿಂದೂ ದೇವರ ಅಪಮಾನ ತಡೆಯಲು ಹೀಗೊಂದು ಪ್ರಯತ್ನ

ಪ್ರಭಾಸ್​ ಅಭಿಮಾನಿಗಳು ಈ ಚಿತ್ರಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾದಿದ್ದಾರೆ. ಪ್ರಭಾಸ್​ ಪಾಲಿಗೆ ಈ ಚಿತ್ರ ಬಹಳ ಮಹತ್ವದ ಪ್ರಾಜೆಕ್ಟ್​ ಆಗಿದೆ. ‘ಆದಿಪುರುಷ್​’ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಅವರಿಗೆ ಇದೆ. ಹಾಗಾದರೆ ‘ಆದಿಪುರುಷ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ಎಲ್ಲರಲ್ಲೂ ಇದೆ. ಬಾಕ್ಸ್​ ಆಫೀಸ್​ ತಜ್ಞರ ಪ್ರಕಾರ ಈ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 100 ಕೋಟಿ ರೂಪಾಯಿ ಬಾಚಿಕೊಳ್ಳುವ ಸಾಧ್ಯತೆ ಇದೆ. ಈ ಊಹೆ ನಿಜವಾಗುತ್ತಾ ಎಂಬುದನ್ನು ತಿಳಿಯಲು ಇನ್ನು ಕೆಲವೇ ದಿನಗಳು ಬಾಕಿ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಕೃತಿ ಸನೋನ್​ ನಟಿಸಿದ್ದಾರೆ.

ಇದನ್ನೂ ಓದಿ: Prabhas: ‘ಆದಿಪುರುಷ್​’ ಚಿತ್ರತಂಡ ರಿಲೀಸ್​ ಮಾಡಲಿದೆ ಇನ್ನೊಂದು ಟ್ರೇಲರ್​; ಏನಿದು ಸ್ಪೆಷಲ್​ ನ್ಯೂಸ್​?

‘ಆದಿಪುರುಷ್​’ ಚಿತ್ರಕ್ಕೆ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಎಲ್ಲ ರಾಜ್ಯಗಳಲ್ಲೂ ಉತ್ತಮ ಓಪನಿಂಗ್​ ಪಡೆದುಕೊಳ್ಳುವ ನಿರೀಕ್ಷೆ ಇದೆ. ಹಿಂದಿ ಪ್ರೇಕ್ಷಕರಲ್ಲೂ ಈ ಸಿನಿಮಾ ಬಗ್ಗೆ ಹೈಪ್​ ಕ್ರಿಯೇಟ್​ ಆಗಿದೆ. ಬಾಲಿವುಡ್​ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದೇ ಅದಕ್ಕೆ ಕಾರಣ. ಅಲ್ಲದೇ ಪ್ರಭಾಸ್​ ಅವರಿಗೆ ಉತ್ತರ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಎಲ್ಲ ಕಾರಣದಿಂದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೊದಲ ದಿನ ಉತ್ತಮ ಕಲೆಕ್ಷನ್​ ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.