Allu Arjun: ‘ಪುಷ್ಪ 2’ ಚಿತ್ರಕ್ಕೆ ಈವರೆಗೆ ಆಗಿರೋದು 5 ದಿನದ ಶೂಟಿಂಗ್​ ಮಾತ್ರ; ಅಭಿಮಾನಿಗಳಿಗೆ ನಿರಾಸೆ

| Updated By: ಮದನ್​ ಕುಮಾರ್​

Updated on: Dec 20, 2022 | 7:06 PM

Pushpa 2 | Sukumar: ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ ಸಿನಿಮಾಗೆ ಕೇವಲ 5 ದಿನಗಳ ಚಿತ್ರೀಕರಣ ಮಾತ್ರ ಮಾಡಲಾಗಿದೆ ಎಂದು ಸುಕುಮಾರ್​ ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳಿಗೆ ನಿರಾಸೆ ಆಗಿದೆ.

Allu Arjun: ‘ಪುಷ್ಪ 2’ ಚಿತ್ರಕ್ಕೆ ಈವರೆಗೆ ಆಗಿರೋದು 5 ದಿನದ ಶೂಟಿಂಗ್​ ಮಾತ್ರ; ಅಭಿಮಾನಿಗಳಿಗೆ ನಿರಾಸೆ
ಅಲ್ಲು ಅರ್ಜುನ್
Follow us on

ನಟ ಅಲ್ಲು ಅರ್ಜುನ್​ (Allu Arjun) ಅವರಿಗೆ ‘ಪುಷ್ಪ’ ಸಿನಿಮಾದಿಂದ ಸಿಕ್ಕ ಗೆಲುವು ಬಹುದೊಡ್ಡದು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುವಂತಾಗಿದ್ದು ಈ ಚಿತ್ರದಿಂದ. ‘ಪುಷ್ಪ’ ಸಿನಿಮಾದ ಹಿಂದಿ ವರ್ಷನ್​ ನೋಡಿ ಉತ್ತರ ಭಾರತದ ಪ್ರೇಕ್ಷಕರು ಫಿದಾ ಆಗಿದ್ದರು. 2021ರ ಡಿಸೆಂಬರ್​ನಲ್ಲಿ ಈ ಸಿನಿಮಾ ತೆರೆಕಂಡು ಧೂಳೆಬ್ಬಿಸಿತ್ತು. ಅದಾಗಿ ಒಂದು ವರ್ಷ ಕಳೆದಿದ್ದರೂ ಕೂಡ ಅದರ ಸೀಕ್ವೆಲ್​ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ‘ಪುಷ್ಪ 2’ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳಿಗೆ ನಿರ್ದೇಶಕ ಸುಕುಮಾರ್​ (Sukumar) ಅವರು ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಒಂದಿಲ್ಲೊಂದು ಕಾರಣಕ್ಕೆ ಈ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿವೆ. ಅಚ್ಚರಿ ಎಂದರೆ, ‘ಪುಷ್ಪ 2’ (Pushpa 2) ಚಿತ್ರಕ್ಕೆ ಈವರೆಗೂ ಆಗಿರೋದು 5 ದಿನದ ಶೂಟಿಂಗ್​ ಮಾತ್ರ!

ಸುಕುಮಾರ್​ ಅವರು ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ‘ಗೀತಾ ಆರ್ಟ್ಸ್​’ ಬ್ಯಾನರ್​ ಜೊತೆ ಅವರು ನಿರ್ಮಿಸಿರುವ ‘18 ಪೇಜಸ್​’ ಸಿನಿಮಾ ಈ ವಾರ (ಡಿ.23) ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಸುಕುಮಾರ್​ ಮತ್ತು ಅಲ್ಲು ಅರ್ಜುನ್​ ಹಾಜರಿ ಹಾಕಿದ್ದರು. ಈ ವೇಳೆ ಅವರು ‘ಪುಷ್ಪ 2’ ಬಗ್ಗೆ ಅಪ್​ಡೇಟ್​ ನೀಡಿದ್ದಾರೆ.

ಇದನ್ನೂ ಓದಿ: Mythri Movie Makers: ‘ಪುಷ್ಪ 2’ ನಿರ್ಮಾಪಕರ ಮೇಲೆ ಐಟಿ ದಾಳಿ; ಸಂಕಷ್ಟದಲ್ಲಿ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ

ಇದನ್ನೂ ಓದಿ
‘ಪುಷ್ಪ 2’ ಚಿತ್ರದಲ್ಲಿ ಅಸಲಿ ವಿಲನ್ ಯಾರು? ಅಲ್ಲು ಅರ್ಜುನ್ ಚಿತ್ರದಲ್ಲಿದೆ ದೊಡ್ಡ ಟ್ವಿಸ್ಟ್
‘ಪುಷ್ಪ 2’ ಚಿತ್ರದ ಮುಹೂರ್ತಕ್ಕೆ ಗೈರಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ; ಕಾರಣ ಏನು?
Allu Arjun: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಲುಕ್​ ಹೀಗಿರುತ್ತಾ? ವೈರಲ್​ ಆಗಿದೆ ಹೊಸ ಫೋಟೋ
Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ

ಈವರೆಗೂ ‘ಪುಷ್ಪ 2’ ಸಿನಿಮಾಗೆ ಕೇವಲ 5 ದಿನಗಳ ಚಿತ್ರೀಕರಣ ಮಾಡಲಾಗಿದೆ ಅಷ್ಟೇ ಎಂದು ಸುಕುಮಾರ್​ ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಆದಷ್ಟು ಬೇಗ ಈ ಚಿತ್ರದ ಶೂಟಿಂಗ್​ ಮುಗಿಯಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಸುಕುಮಾರ್​ ಅವರು ತುಂಬ ಕಾಳಜಿ ವಹಿಸಿ ಈ ಚಿತ್ರವನ್ನು ಕಟ್ಟಿಕೊಡುತ್ತಿರುವುದರಿಂದ ಸಹಜವಾಗಿಯೇ ಶೂಟಿಂಗ್​ ವಿಳಂಬ ಆಗುತ್ತಿದೆ.

ಇದನ್ನೂ ಓದಿ: Pushpa 2: ‘ಪುಷ್ಪ 2’ ಚಿತ್ರಕ್ಕೆ ಭಯಾನಕ ವಿಲನ್​ ಎಂಟ್ರಿ? ವಿದೇಶಿ ನಟನಿಗೆ ಮಣೆ ಹಾಕಿದ ನಿರ್ದೇಶಕ ಸುಕುಮಾರ್​

‘ಪುಷ್ಪ 2’ ಚಿತ್ರದ ಕೆಲಸಗಳು ತಡವಾಗುತ್ತಿರುವ ಬಗ್ಗೆ ಅಲ್ಲು ಅರ್ಜುನ್​ ಬೇಸರ ಮಾಡಿಕೊಂಡಿಲ್ಲ. ಸುಕುಮಾರ್​ ಅವರ ಕಾರ್ಯವೈಖರಿ ಬಗ್ಗೆ ಅಲ್ಲು ಅರ್ಜುನ್​ ಅವರಿಗೆ ಸಂಪೂರ್ಣ ಭರವಸೆ ಇದೆ. ಹಾಗಾಗಿ ಅವರ ಪ್ಲ್ಯಾನ್​ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದ ಖ್ಯಾತ ಕಲಾವಿದರು ನಟಿಸುತ್ತಿದ್ದಾರೆ.

ಮೊದಲ ಪಾರ್ಟ್​ಗಿಂತಲೂ ‘ಪುಷ್ಟ 2’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುವ ಸವಾಲು ಚಿತ್ರತಂಡದ ಮುಂದಿದೆ. ಅದಕ್ಕಾಗಿ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬ ಆಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:06 pm, Tue, 20 December 22