ಆಸ್ಕರ್​​ ನಾಮಿನೇಷನ್ಸ್​​ಗೆ ವೋಟ್ ಮಾಡಿದ ಎ.ಆರ್​. ರೆಹಮಾನ್​; ನಿಜವಾಗಲಿದೆಯೇ ಅಭಿಮಾನಿಗಳ ಊಹೆ?

| Updated By: ರಾಜೇಶ್ ದುಗ್ಗುಮನೆ

Updated on: Jan 19, 2023 | 7:54 AM

ಆಸ್ಕರ್​​ಗೆ ವೋಟ್ ಮಾಡಿದ್ದಕ್ಕೆ ಅಕಾಡೆಮಿಯವರು ಕಳುಹಿಸಿದ ಪತ್ರದ   ಫೋಟೋವನ್ನು ಎ.ಆರ್​​. ರೆಹಮಾನ್ ಅವರು ಶೇರ್ ಮಾಡಿಕೊಂಡಿದ್ದಾರೆ.

ಆಸ್ಕರ್​​ ನಾಮಿನೇಷನ್ಸ್​​ಗೆ ವೋಟ್ ಮಾಡಿದ ಎ.ಆರ್​. ರೆಹಮಾನ್​; ನಿಜವಾಗಲಿದೆಯೇ ಅಭಿಮಾನಿಗಳ ಊಹೆ?
ಆಸ್ಕರ್​​ಗೆ ವೋಟ್ ಮಾಡಿದ ಎಆರ್​ ರೆಹಮಾನ್
Follow us on

ಈ ವರ್ಷದ ಆಸ್ಕರ್ ನಾಮಿನೇಷನ್ಸ್ (Oscar Nomination)​ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಭಾರತದ ‘ಆರ್​ಆರ್​ಆರ್​’, ‘ಕಾಂತಾರ’ (Kantara Movie) ಮೊದಲಾದ ಚಿತ್ರಗಳು ಆಸ್ಕರ್ ರೇಸ್​​ನ ಅರ್ಹತಾ ಸುತ್ತಿನಲ್ಲಿವೆ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಈ ಬಾರಿ ಆಸ್ಕರ್ ಅವಾರ್ಡ್​​​ ಗೆಲ್ಲಲಿದೆ ಎಂದು ಅನೇಕರು ಊಹಿಸುತ್ತಿದ್ದಾರೆ. ಈ ಮಧ್ಯೆ ಆಸ್ಕರ್  ನಾಮಿನೇಷನ್​​ಗೆ ವೋಟಿಂಗ್ ನಡೆದಿದೆ. ಎ.ಆರ್​​. ರೆಹಮಾನ್ ಅವರು ತಮ್ಮ ವೋಟ್​​ಅನ್ನು ಚಲಾಯಿಸಿದ್ದಾರೆ. ಅವರು ‘ನಾಟು ನಾಟು..’ ಹಾಡಿಗೆ ವೋಟ್ ಹಾಕಿದ್ದಾರೆ ಎಂದು ಅನೇಕರು ಊಹಿಸಿದ್ದಾರೆ.

ಆಸ್ಕರ್​​ಗೆ ವೋಟ್ ಮಾಡಿದ್ದಕ್ಕೆ ಅಕಾಡೆಮಿಯವರು ಕಳುಹಿಸಿದ ಪತ್ರದ   ಫೋಟೋವನ್ನು ಎ.ಆರ್​​. ರೆಹಮಾನ್ ಅವರು ಶೇರ್ ಮಾಡಿಕೊಂಡಿದ್ದಾರೆ. ‘ಧನ್ಯವಾದಗಳು. ನಿಮ್ಮ ವೋಟ್​ ಸಿಕ್ಕಿದೆ’ ಎಂದು ಅಕಾಡೆಮಿಯವರು ರೆಹಮಾನ್​ಗೆ ಕಳುಹಿಸಿದ್ದಾರೆ. ಇದರ ಜತೆಗೆ ಯಾರಿಗೆ ವೋಟ್ ಹಾಕಿದ್ದೇವೆ ಎನ್ನುವ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡದಂತೆ ಸೂಚಿಸಲಾಗಿದೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಈ ಪೋಸ್ಟ್​ಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆಸ್ಕರ್​​ಗೆ ‘ಆರ್​​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಶಾರ್ಟ್​​ಲಿಸ್ಟ್ ಆಗಿದೆ. ಈ ಹಾಡಿನ ಪರವಾಗಿ ರೆಹಮಾನ್ ಅವರು ವೋಟ್ ಚಲಾವಣೆ ಮಾಡಿರುತ್ತಾರೆ ಎಂದು ಅನೇಕರು ಊಹಿಸಿದ್ದಾರೆ. ಈಗಾಗಲೇ ಪ್ರತಿಷ್ಠಿತ ‘ಗೋಲ್ಡನ್​ ಗ್ಲೋಬ್ಸ್​ ಅವಾರ್ಡ್ಸ್​​’ನಲ್ಲಿ ಈ ಚಿತ್ರ ಪ್ರಶಸ್ತಿ ಗೆದ್ದಿದೆ. ‘ನಾಟು ನಾಟು..’ ಹಾಡು ಅತ್ಯುತ್ತಮ ಮೂಲ ಹಾಡು ಪ್ರಶಸ್ತಿ ಗೆದ್ದಿದೆ. ಎಂ.ಎಂ. ಕೀರವಾಣಿ ಅವರು ‘ಆರ್​ಆರ್​ಆರ್​​’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.


ಇದನ್ನೂ ಓದಿ: Rishab Shetty: ಆಸ್ಕರ್​ಗೆ ಕಾಂತಾರ​ ಪೈಪೋಟಿ, ಕಮಲ್​ ಪತ್ರ ಸೇರಿದಂತೆ ಅನೇಕ ವಿಚಾರಕ್ಕೆ ರಿಷಬ್​ ಶೆಟ್ಟಿ ಪ್ರತಿಕ್ರಿಯೆ

ಆಸ್ಕರ್ ಅವಾರ್ಡ್ ಕಾರ್ಯಕ್ರಮ ಈ ವರ್ಷ ಮಾರ್ಚ್​ 12ರಂದು ಅಮೆರಿಕದ ಲಾಸ್ ಏಂಜಲೀಸ್​​ನಲ್ಲಿ ನಡೆಯಲಿದೆ. ಎ.ಆರ್​.ರೆಹಮಾನ್ ಸೇರಿ ಭಾರತದ ಐವರು ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಆದರೆ, ಸಂಪೂರ್ಣವಾಗಿ ಭಾರತದಲ್ಲೇ ಸಿದ್ಧವಾದ ಸಿನಿಮಾಗೆ ಈ ಪ್ರಶಸ್ತಿ ಸಿಕ್ಕಿಲ್ಲ. ಈ ವರ್ಷ ಆ ರೀತಿಯ ಅಪರೂಪದ ದಾಖಲೆ ಸೃಷ್ಟಿ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ