Alia Bhatt: ಕೂದಲು ಯಾವುದು? ಕೋಟ್ ಯಾವುದು? ಆಲಿಯಾ ಭಟ್ ಹೊಸ ಅವತಾರ ನೋಡಿ ಅಭಿಮಾನಿಗಳಿಗೆ ಅಚ್ಚರಿ
ಹಾಲಿವುಡ್ನ ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾದಲ್ಲಿ ಆಲಿಯಾ ಭಟ್ ಅವರು ಕಿಯಾ ಧವನ್ ಎಂಬ ಪಾತ್ರ ಮಾಡಿದ್ದಾರೆ. ಈ ಚಿತ್ರದಿಂದ ಅವರ ಖ್ಯಾತಿ ಜಾಗತಿಕ ಮಟ್ಟದಲ್ಲಿ ಹಬ್ಬಲಿದೆ.
ನಟಿ ಆಲಿಯಾ ಭಟ್ (Alia Bhatt) ಅವರು ಈಗ ಕೇವಲ ಬಾಲಿವುಡ್ಗೆ ಸೀಮಿತವಾಗಿಲ್ಲ. ಹಾಲಿವುಡ್ನಲ್ಲಿ ಮಿಂಚಲು ಅವರು ಸಿದ್ಧರಾಗಿದ್ದಾರೆ. ಅವರು ನಟಿಸಿರುವ ‘ಹಾರ್ಟ್ ಆಫ್ ಸ್ಟೋನ್’ (Heart of Stone) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 11ರಂದು ಈ ಚಿತ್ರ ನೇರವಾಗಿ ನೆಟ್ಫ್ಲಿಕ್ಸ್ (Netflix) ಒಟಿಟಿ ಮೂಲಕ ಪ್ರಸಾರ ಆರಂಭಿಸಲಿದೆ. ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ಡಬಲ್ ಮಾಡುವ ರೀತಿಯಲ್ಲಿ ಈಗ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಆಲಿಯಾ ಭಟ್ ಅವರ ಗೆಟಪ್ ಗಮನ ಸೆಳೆಯುತ್ತಿದೆ. ತಲೆ ಕೂದಲು ಯಾವುದು? ಧರಿಸಿದ ಕೋಟ್ ಯಾವುದು ಎಂಬ ವ್ಯತ್ಯಾಸವೇ ತಿಳಿಯದ ರೀತಿಯಲ್ಲಿ ಅವರ ಗೆಟಪ್ ಇದೆ.
‘ಹಾರ್ಟ್ ಆಫ್ ಸ್ಟೋನ್’ ಸಿನಿಮಾದಲ್ಲಿ ಆಲಿಯಾ ಭಟ್ ಅವರು ಕಿಯಾ ಧವನ್ ಎಂಬ ಪಾತ್ರ ಮಾಡಿದ್ದಾರೆ. ಈ ಸಿನಿಮಾದಿಂದ ಅವರ ಖ್ಯಾತಿ ಜಾಗತಿಕ ಮಟ್ಟದಲ್ಲಿ ಹಬ್ಬಲಿದೆ. ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದ ಭಾರತೀಯ ಕಲಾವಿದರ ಸಂಖ್ಯೆ ಬಹಳ ಕಡಿಮೆ. ಇರ್ಫಾನ್ ಖಾನ್, ಡಿಂಪಲ್ ಕಪಾಡಿಯಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಅಂಥ ಚಾನ್ಸ್ ಪಡೆದುಕೊಂಡಿದ್ದರು. ಈಗ ಆಲಿಯಾ ಭಟ್ ಕೂಡ ಹಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಲು ತಯಾರಾಗಿದ್ದಾರೆ.
View this post on Instagram
ಆಲಿಯಾ ಭಟ್ ಅವರ ಅಭಿಮಾನಿಗಳಿಗೆ ಈಗ ಬ್ಯಾಕ್ ಟು ಬ್ಯಾಕ್ ಮನರಂಜನೆ ಸಿಗಲಿದೆ. ಜುಲೈ 28ರಂದು ಹಿಂದಿಯಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ರಣವೀರ್ ಸಿಂಗ್ ನಟಿಸಿದ್ದಾರೆ. ಬಹು ವರ್ಷಗಳ ಬಳಿಕ ಕರಣ್ ಜೋಹರ್ ಅವರು ನಿರ್ದೇಶನ ಮಾಡಿರುವುದರಿಂದ ಬಹಳ ನಿರೀಕ್ಷೆ ಮೂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: Alia Bhatt: ‘ಪ್ರಚಾರಕ್ಕಾಗಿ ಏನೆಲ್ಲ ಮಾಡ್ತಾರಪ್ಪ’: ಕಂಡವರ ಚಪ್ಪಲಿ ಎತ್ತಿಕೊಟ್ಟ ಆಲಿಯಾ ಭಟ್ ಬಗ್ಗೆ ನೆಟ್ಟಿಗರ ಟೀಕೆ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಿದ್ದ ಆಲಿಯಾ ಭಟ್ ಪತಿ ರಣಬೀರ್ ಕಪೂರ್ ನಟಿಸಿರುವ ‘ಅನಿಮಲ್’ ಸಿನಿಮಾ ಆಗಸ್ಟ್ 11ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದರ ರಿಲೀಸ್ ದಿನಾಂಕ ಮುಂದಕ್ಕೆ ಹೋಯಿತು. ಇಲ್ಲದಿದ್ದರೆ ಒಂದೇ ದಿನ ಆಲಿಯಾ ಭಟ್ ನಟನೆಯ ‘ಹಾರ್ಟ್ ಆಫ್ ಸ್ಟೋನ್’ ಮತ್ತು ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಬಿಡುಗಡೆ ಆಗುತ್ತಿದ್ದವು. ಈಗ ‘ಅನಿಮಲ್’ ರಿಲೀಸ್ ದಿನಾಂಕ ಡಿಸೆಂಬರ್ 1ಕ್ಕೆ ಮುಂದೂಡಲ್ಪಟ್ಟಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.