ಅಮೆಜಾನ್​ನಿಂದ ಉಚಿತ ಮೊಬೈಲ್ ಡಾಟಾ: ಭಾರತಕ್ಕೆ ಯಾವಾಗ?

Amazon Prime: ಅಮೆಜಾನ್ ತನ್ನ ಗ್ರಾಹಕರಿಗೆ ಉಚಿತ ಅಥವಾ ಅತ್ಯಂತ ಕಡಿಮೆ ಬೆಲೆಯ ಮೊಬೈಲ್ ಸೇವೆಗಳನ್ನು ನೀಡಲು ಮುಂದಾಗಿದೆ. ಈ ಯೋಜನೆ ಭಾರತಕ್ಕೆ ಯಾವಾಗ ಬರಲಿದೆ?

ಅಮೆಜಾನ್​ನಿಂದ ಉಚಿತ ಮೊಬೈಲ್ ಡಾಟಾ: ಭಾರತಕ್ಕೆ ಯಾವಾಗ?
ಅಮೆಜಾನ್ ಪ್ರೈಂ
Follow us
ಮಂಜುನಾಥ ಸಿ.
|

Updated on: Jun 04, 2023 | 6:10 PM

ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆಗಳಲ್ಲಿ ಒಂದು ಅಮೆಜಾನ್ (Amazon). ಪುಸ್ತಕ ಮಳಿಗೆಯಾಗಿ ಪ್ರಾರಂಭವಾದ ಅಮೆಜಾನ್ ಇಂದು ವಿಶ್ವದ ನಂಬರ್ 1 ಆನ್​ಲೈನ್ ಮಳಿಗೆ. ಜೊತೆಗೆ ಇನ್ನೂ ಹಲವು ಉದ್ದಿಮೆಗಳಲ್ಲಿ ಅಮೆಜಾನ್ ತನ್ನನ್ನು ತೊಡಗಿಸಿಕೊಂಡಿದೆ. ಅದರಲ್ಲಿ ಪ್ರಮುಖವಾದುದು ಅಮೆಜಾನ್​ನ ವಿಡಿಯೋ ಸ್ಟ್ರೀಮಿಂಗ್ ವೇದಿಕೆ. ಅಮೆಜಾನ್ ಪ್ರೈಮ್ ವಿಡಿಯೋ ಸಹ ಅಮೆಜಾನ್ ಶಾಪಿಂಗ್ ಸೈಟ್​ನಂತೆಯೇ ವಿಶ್ವದ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಹುತೇಕ ಇಂಟರ್ನೆಂಟ್ ಆಧರಿತ ಬ್ಯುಸಿನೆಸ್ ಅನ್ನೇ ಹೊಂದಿರುವ ಅಮೆಜಾನ್ ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ ಇಂಟರ್ನೆಂಟ್ ಸೌಲಭ್ಯ (Internet) ಒದಗಿಸಲು ಮುಂದಾಗಿದೆ.

ಅಮೆರಿಕದಲ್ಲಿ ಮೊದಲಿಗೆ ಈ ಉಚಿತ ಅಥವಾ ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ ಅನ್ನು ಒದಗಿಸಲು ಅಮೆಜಾನ್ ಮುಂದಾಗಿದೆ. ಅಮೆರಿಕದ ಜನಪ್ರಿಯ ಮೊಬೈಲ್ ನೆಟ್​ವರ್ಕ್ ಸೇವಾ ಸಂಸ್ಥೆಯಾಗಿರುವ ವೆರಿಜಾನ್ ಕಮ್ಯೂನಿಕೇಶನ್​ ಜೊತೆಗೆ ಈ ಬಗ್ಗೆ ಅಮೆಜಾನ್ ಮಾತುಕತೆ ನಡೆಸುತ್ತಿದೆ. ದೇಶದಲ್ಲಿರುವ ಎಲ್ಲ ಮೊಬೈಲ್ ಬಳಕೆದಾರರಿಗೂ ಅತ್ಯಂತ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಇಂಟರ್ನೆಟ್ ಒದಗಿಸುವ ಬಗ್ಗೆ ಈ ಚರ್ಚೆ ನಡೆಯುತ್ತಿದೆ.

ಅಮೆರಿಕದ ಮೊಬೈಲ್ ಬಳಕೆದಾರರಿಗೆ ಕೇವಲ 10 ಡಾಲರ್ ಪ್ರತಿತಿಂಗಳ ಬೆಲೆಗೆ ಅಥವಾ ಸಂಪೂರ್ಣ ಉಚಿತವಾಗಿ ಮೊಬೈಲ್ ನೆಟ್​ವರ್ಕ್ ಸೇವೆಗಳನ್ನು ಒದಗಿಸುವುದು ಅಮೆಜಾನ್ ಗುರಿಯಾಗಿದೆ. ಪ್ರಸ್ತುತ ಅಮೆರಿಕದಲ್ಲಿ ಮೊಬೈಲ್ ನೆಟ್​ವರ್ಕ್ ಸೇವೆಗಳ ಶುಲ್ಕ ತಿಂಗಳಿಗೆ 50 ಡಾಲರ್​ನಿಂದ ಪ್ರಾರಂಭವಾಗುತ್ತವೆ, 100 ಡಾಲರ್ ವರೆಗೆ ಹೋಗುತ್ತವೆ. ಅಮೆಜಾನ್ ಈಗ ಮಾತುಕತೆ ನಡೆಸುತ್ತಿರುವ ವೆರಿಜಾನ್ ಕಮ್ಯೂನಿಕೇಶನ್​ ಬಳಕೆದಾರರು ತಿಂಗಳಿಗೆ 70 ಡಾಲರ್ ವ್ಯಯಿಸಿ ನೆಟ್​ವರ್ಕ್ ಸೇವೆಗಳನ್ನು ಪಡೆಯುತ್ತಿದ್ದಾರೆ.

ಅಮೆಜಾನ್​ಗೆ ಭಾರತದಲ್ಲಿಯೂ ದೊಡ್ಡ ಸಂಖ್ಯೆಯ ಗ್ರಾಹಕರಿದ್ದಾರೆ. ಒಂದೊಮ್ಮೆ ಅಮೆರಿಕದಲ್ಲಿ ಅಮೆಜಾನ್​ನ ಉಚಿತ ನೆಟ್​ವರ್ಕ್ ಸೇವೆ ಸಫಲವಾದರೆ ಭಾರತದಲ್ಲಿಯೂ ಅದನ್ನು ಪ್ರಯೋಗಿಸುವುದು ಪಕ್ಕಾ. ಒಂದೊಮ್ಮೆ ಉಚಿತವಾಗಿ ಮೊಬೈಲ್ ಸೇವೆಗಳನ್ನು ಅಮೆಜಾನ್ ನೀಡಿದ್ದೇ ಆದಲ್ಲಿ, ಅದರ ಲಾಭವೂ ಅಮೆಜಾನ್ ಶಾಪಿಂಗ್ ಕಾರ್ಟ್ ಹಾಗೂ ಅಮೆಜಾನ್ ಪ್ರೈಂ ವಿಡಿಯೋಗೆ ಆಗಲಿದೆ. ಆದರೆ ಮೊಬೈಲ್ ಡಾಟಾ ಉಚಿತವಾಗಿ ಕೊಟ್ಟು ಅಮೆಜಾನ್​ನಲ್ಲಿ ಸಿನಿಮಾ ನೋಡಲು ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುವ ಸಾಧ್ಯತೆ ಇದೆ.

ಈಗಾಗಲೇ ಅಮೆಜಾನ್​ನಲ್ಲಿ ಕೆಲವು ಸಿನಿಮಾಗಳನ್ನು ಹೆಚ್ಚುವರಿ ಹಣ ಕೊಟ್ಟು ನೋಡಬೇಕಿದೆ. ಹೆಚ್ಚುವರಿ ಹಣ ಕೊಡದೇ ಸಿನಿಮಾ ನೋಡಬೇಕೆಂದರೆ ಅದಕ್ಕೆ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಅದರ ಜೊತೆಗೆ ಅಮೆಜಾನ್​ ಪ್ರೈಂನ ವಾರ್ಷಿಕ ಚಂದಾದಾರಿಕೆ ಪಡೆಯಲು ಭಾರತದಲ್ಲಿ 1500 ರುಪಾಯಿ ಕೊಡಬೇಕಿದೆ. ಇನ್ನು ಮುಂದೆ ಈ ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್