Kantara OTT: ಒಟಿಟಿಗೆ ಬಂತು ‘ಕಾಂತಾರ’ ಸಿನಿಮಾ; ನ.24ರಿಂದ ‘ಅಮೇಜಾನ್​ ಪ್ರೈಮ್​ ವಿಡಿಯೋ’ದಲ್ಲಿ ಪ್ರಸಾರ

| Updated By: ಮದನ್​ ಕುಮಾರ್​

Updated on: Nov 23, 2022 | 4:59 PM

Kantara OTT Release | Amazon Prime Video: ರಿಷಬ್​ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾ ಭಾರಿ ಯಶಸ್ಸು ತಂದುಕೊಟ್ಟಿದೆ. ಈಗ ಈ ಚಿತ್ರ ‘ಅಮೇಜಾನ್​ ಪ್ರೈಮ್​ ವಿಡಿಯೋ’ ಮೂಲಕ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ.

Kantara OTT: ಒಟಿಟಿಗೆ ಬಂತು ‘ಕಾಂತಾರ’ ಸಿನಿಮಾ; ನ.24ರಿಂದ ‘ಅಮೇಜಾನ್​ ಪ್ರೈಮ್​ ವಿಡಿಯೋ’ದಲ್ಲಿ ಪ್ರಸಾರ
ರಿಷಬ್ ಶೆಟ್ಟಿ
Follow us on

ಸೂಪರ್​ ಹಿಟ್​ ‘ಕಾಂತಾರ’ ಸಿನಿಮಾ (Kantara Movie) ಯಾವಾಗ ಒಟಿಟಿಗೆ ಬರಲಿದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆ ಕಾಯುವಿಕೆಗೆ ಈಗ ಅಂತ್ಯ ಹಾಡುವ ಸಮಯ ಬಂದಿದೆ. ನ.24ರಂದು ಈ ಚಿತ್ರ ಒಟಿಟಿ ಅಂಗಳದಲ್ಲಿ ಪ್ರಸಾರ ಆಗಲಿದೆ. ಈ ಬಗ್ಗೆ ‘ಅಮೇಜಾನ್​ ಪ್ರೈಂ ವಿಡಿಯೋ’ (Amazon Prime Video) ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ‘ಕಾಂತಾರ’ ಸಿನಿಮಾದ ಒಟಿಟಿ ಪ್ರಸಾರ ದಿನಾಂಕವನ್ನು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಲಾಗಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಸಿನಿಮಾವನ್ನು ಪ್ರೇಕ್ಷಕರು ಮನೆಯಲ್ಲಿ ಕುಳಿತು ಎಂಜಾಯ್​ ಮಾಡಬಹುದು. ಈ ಚಿತ್ರದಲ್ಲಿ ರಿಷಬ್​ ಶೆಟ್ಟಿ (Rishab Shetty) ಅವರ ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

‘ಕಾಂತರ’ ಸಿನಿಮಾದ ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಒಟಿಟಿ ಪ್ರಸಾರ ಹಕ್ಕುಗಳನ್ನು ‘ಅಮೇಜಾನ್​ ಪ್ರೈಂ ವಿಡಿಯೋ’ ಪಡೆದುಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ಒಟಿಟಿಗೆಯಲ್ಲಿ ಪ್ರಸಾರ ಆಗಬೇಕಿತ್ತು. ಆದರೆ ಅನೇಕ ಚಿತ್ರಮಂದಿರದಲ್ಲಿ ಉತ್ತಮವಾಗಿ ಪ್ರದರ್ಶನ ಆಗುತ್ತಿದ್ದ ಕಾರಣ ಒಟಿಟಿಯಲ್ಲಿ ಪ್ರಸಾರ ಆಗುವುದು ಕೊಂಚ ವಿಳಂಬ ಆಯಿತು. ಈಗ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಈ ಸಿನಿಮಾ ಇನ್ನೂ ಹೆಚ್ಚಿನ ಜನರನ್ನು ತಲುಪಲಿದೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ನಿರ್ಮಾಪಕ ವಿಜಯ್ ಕಿರಗಂದೂರು ಅವರು ಒಟಿಟಿ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್ ಮುಖಾಂತರ ನಾವು ಯಾವಾಗಲೂ ಆಕರ್ಷಕವಾದ ಕಥೆಗಳನ್ನು ಅಸಾಮಾನ್ಯ ರೀತಿಯಲ್ಲಿ ಪ್ರಸ್ತುತ ಪಡಿಸುವುದಕ್ಕೆ ಇಷ್ಟಪಡುತ್ತೇವೆ. ಕಾಂತಾರ ಸಿನಿಮಾ ನಮ್ಮ ಅಂಥ ಪ್ರಯತ್ನಗಳಲ್ಲೊಂದು. ಈ ಚಿತ್ರವನ್ನು ಪ್ರೈಂ ವಿಡಿಯೊ ಮುಖಾಂತರ ಜಗತ್ತಿನಾದ್ಯಂತ ಇರುವ ಪ್ರೇಕ್ಷಕರಿಗೆ ತಲುಪಿಸಲು ಉತ್ಸುಕರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

ನಟನಾಗಿ ಮತ್ತು ನಿರ್ದೇಶಕನಾಗಿ ರಿಷಬ್​ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಿಂದ ಭರ್ಜರಿ ಯಶಸ್ಸು ಸಿಕ್ಕಿದೆ. ಈ ಚಿತ್ರಕ್ಕೆ ಹಣ ಹೂಡಿದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಸಖತ್​ ಲಾಭ ಮಾಡಿಕೊಂಡಿದೆ. ನಾಯಕಿ ಸಪ್ತಮಿ ಗೌಡ ಅವರ ಜನಪ್ರಿಯತೆ ಹೆಚ್ಚಿದೆ. ಅಚ್ಯುತ್​ ಕುಮಾರ್​, ಕಿಶೋರ್​, ಪ್ರಮೋದ್​ ಶೆಟ್ಟಿ, ಮಾನಸಿ ಸುಧೀರ್​ ಮುಂತಾದ ಕಲಾವಿದರು ಕೂಡ ಈ ಚಿತ್ರದಲ್ಲಿ ಸಖತ್​ ಶೈನ್​ ಆಗಿದ್ದಾರೆ.

ರಿಷಬ್​ ಶೆಟ್ಟಿಗೆ ಖುಷಿ:

‘ದೇಶದ ಮೂಲೆ-ಮೂಲೆಗಳಲ್ಲಿನ ಸಿನಿಮಾ ಪ್ರಿಯರು ನಮ್ಮ ಚಿತ್ರಕ್ಕೆ ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ನನಗೆ ತುಂಬಾ ಖುಷಿ ಇದೆ. ಈಗ ಅಮೇಜಾನ್​ ಪ್ರೈಂ ವೀಡಿಯೊ ಮೂಲಕ ಜಾಗತಿಕವಾಗಿ ಬಿತ್ತರ ಆಗುತ್ತಿದೆ. ಚಿತ್ರವು ವಿಶ್ವಮಟ್ಟದಲ್ಲಿ ಇನ್ನಷ್ಟು ಜನರನ್ನು ತಲುಪುವುದಕ್ಕೆ ವೇದಿಕೆ ಸಿಕ್ಕಿರುವುದು ಸಂತೋಷ ತಂದಿದೆ’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.