ಕೊರೊನಾ ಮೂರನೇ ಅಲೆ (Covid 3rd Wave) ನಿಧಾನವಾಗಿ ಕಡಿಮೆ ಆಗುತ್ತಿದೆ. ಹೀಗಾಗಿ, ಸಾಲುಸಾಲು ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ದೊಡ್ಡ ಬಜೆಟ್ನ ಚಿತ್ರಗಳು ಕಾದುಕೂತು ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿಕೊಳ್ಳುತ್ತಿವೆ. ಈ ಮಧ್ಯೆ ಕೆಲ ಚಿತ್ರಗಳು ಒಟಿಟಿ ಹಾದಿ ಹಿಡಿದಿವೆ. ದೀಪಿಕಾ ಪಡುಕೋಣೆ (Deepika Padukone) ಹಾಗೂ ಸಿದ್ಧಾಂತ್ ಚತುರ್ವೇದಿ ನಟನೆಯ ‘ಗೆಹರಾಯಿಯಾ’ ಚಿತ್ರ (Gehraiyaan Movie) ಕೂಡ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಚಿತ್ರವನ್ನು ಖರೀದಿಸಲು ಅಮೇಜಾನ್ ಪ್ರೈಮ್ ವಿಡಿಯೋ ಕೊಟ್ಟ ಮೊತ್ತ ಎಷ್ಟು ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಅಚ್ಚರಿ ಹೊರಹಾಕುತ್ತಿದ್ದಾರೆ. ಈ ಡೀಲ್ ವಿಚಾರ ಕೇಳಿ ಫ್ಯಾನ್ಸ್ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಆಧುನಿಕ ಜಗತ್ತಿನ ಸಂಬಂಧಗಳು ಹೇಗೆ ಗೊಂದಲಮಯ ಆಗುತ್ತಿದೆ ಎನ್ನುವ ವಿಚಾರವನ್ನು ‘ಗೆಹರಾಯಿಯಾ’ ಹೇಳುತ್ತಿದೆ. ಈ ಚಿತ್ರದ ಬಗ್ಗೆ ದೀಪಿಕಾ ಮೊದಲಿನಿಂದಲೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಲೇ ಬರುತ್ತಿದ್ದರು. ಈಗ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ದೀಪಿಕಾ ನಟನೆಗೆ ಎಲ್ಲ ಕಡೆಗಳಿಂದಲೂ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾವನ್ನು ಅಮೇಜಾನ್ ಪ್ರೈಮ್ ವಿಡಿಯೋ ಬರೋಬ್ಬರಿ 100 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎನ್ನುವ ಮಾಹಿತಿ ಈಗ ಹೊರಬಿದ್ದಿದೆ.
ಕೆಲ ಸಿನಿಮಾಗಳು ಚಿತ್ರಮಂದಿರದಲ್ಲಿ ರಿಲೀಸ್ ಆದ ಬಳಿಕ ಒಟಿಟಿಗೆ ಕಾಲಿಡುತ್ತವೆ. ಈ ಸಂದರ್ಭದಲ್ಲಿ ನಿರ್ಮಾಪಕರಿಗೆ ಒಟಿಟಿ ಪ್ಲಾಟ್ಫಾರ್ಮ್ಗಳು ಕಡಿಮೆ ಮೊತ್ತವನ್ನು ಆಫರ್ ಮಾಡುತ್ತಾರೆ. ಆದರೆ, ನೇರವಾಗಿ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಿದರೆ ಚಿತ್ರತಂಡಕ್ಕೆ ದೊಡ್ಡ ಮೊತ್ತ ಸಿಗಲಿದೆ. ಅದೇ ರೀತಿ, ‘ಗೆಹರಾಯಿಯಾ’ ಚಿತ್ರಕ್ಕೆ 100 ಕೋಟಿ ರೂಪಾಯಿ ನೀಡಿದೆ ಎನ್ನಲಾಗಿದೆ. ಒಟಿಟಿ ಪ್ಲಾಟ್ಫಾರ್ಮ್ ವ್ಯಾಪ್ತಿ ಹೆಚ್ಚುತ್ತಿದ್ದಂತೆ ಅವುಗಳ ಮಧ್ಯೆ ಸ್ಪರ್ಧೆ ಹೆಚ್ಚಿದೆ. ಹೀಗಾಗಿ, ಸ್ಟಾರ್ ನಟ/ನಟಿಯರ ಚಿತ್ರಗಳನ್ನು ಖರೀದಿ ಮಾಡೋಕೆ ಅನೇಕರು ಮುಂದೆ ಬರುತ್ತಿದ್ದಾರೆ.
‘ಗೆಹರಾಯಿಯಾ’ ಚಿತ್ರದಲ್ಲಿ ಕೆಲವು ಟ್ವಿಸ್ಟ್ಗಳಿವೆ. ಆ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕ್ಲೈಮ್ಯಾಕ್ಸ್ನ ದೃಶ್ಯ ಸಾಕಷ್ಟು ಜನರಿಗೆ ಖುಷಿ ನೀಡಿದೆ. ದೀಪಿಕಾ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಯೋಗ ಟೀಚರ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪ್ರತಿ ಫ್ರೇಮ್ನಲ್ಲೂ ಅದ್ಭುತವಾಗಿ ನಟಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಪ್ರಬುದ್ಧವಾಗಿ ನಟಿಸಿದ್ದಾರೆ. ಅವರ ನಟನೆ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗುತ್ತದೆ. ಸಿದ್ಧಾಂತ್ ಚತುರ್ವೇದಿ ಅವರಿಗೆ ಈ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಗೋದು ಪಕ್ಕಾ. ಅವರು ತೆರೆಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಅನನ್ಯಾ ಪಾಂಡೆ ಅವರಿಗೆ ಈ ಚಿತ್ರದಲ್ಲಿ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ. ಅವರು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಇನ್ನಷ್ಟು ಪಳಗಬೇಕಿದೆ. ಧೈರ್ಯ ಕರ್ವ ಅವರ ನಟನೆಯೂ ಮೆಚ್ಚಿಕೊಳ್ಳುವಂತಹದ್ದು. ನಾಸಿರುದ್ದೀನ್ ಶಾ ತೆರೆಮೇಲೆ ಕಾಣಿಸಿಕೊಳ್ಳೋದು ಕಡಿಮೆ ಇದ್ದರೂ ಅವರ ಪಾತ್ರಕ್ಕೆ ಇರುವ ಪ್ರಾಮುಖ್ಯತೆ ತುಂಬಾನೇ ದೊಡ್ಡದು.
ಇದನ್ನೂ ಓದಿ: ನಿಜ ಜೀವನದಲ್ಲೂ ‘ಗೆಹರಾಯಿಯಾ’ ಕಥೆ; ಸಿದ್ಧಾಂತ್ ಜತೆ ಫ್ಲರ್ಟ್ ಮಾಡಿದ್ದ ಕಸಿನ್ನ ಗರ್ಲ್ಫ್ರೆಂಡ್
Gehraiyaan Movie Review: ‘ಗೆಹರಾಯಿಯಾ’ ಇದು ಕೇವಲ ಹಸಿಬಿಸಿ ದೃಶ್ಯಗಳ ಕಥೆಯಲ್ಲ..