ಹೊಸ ಆಯ್ಕೆ ಪರಿಚಯಿಸಿದ ಅಮೇಜಾನ್ ಪ್ರೈಮ್ ವಿಡಿಯೋ; ಇದರಿಂದ ವೀಕ್ಷಕರಿಗೆ ಇದೆ ದೊಡ್ಡ ಲಾಭ

|

Updated on: Apr 20, 2023 | 7:42 AM

Amazon Prime Video: ಅಮೇಜಾನ್ ಪ್ರೈಮ್ ವಿಡಿಯೋ ಹೊಸ ಆಯ್ಕೆ ತಂದಿದೆ. ಇದು ಯಾವ ರೀತಿಯಲ್ಲಿ ಸಹಕಾರಿ ಆಗಲಿದೆ ಎಂಬುದರ ವಿವರ ಈ ಸ್ಟೋರಿಯಲ್ಲಿದೆ.

ಹೊಸ ಆಯ್ಕೆ ಪರಿಚಯಿಸಿದ ಅಮೇಜಾನ್ ಪ್ರೈಮ್ ವಿಡಿಯೋ; ಇದರಿಂದ ವೀಕ್ಷಕರಿಗೆ ಇದೆ ದೊಡ್ಡ ಲಾಭ
ಪ್ರೈಮ್ ವಿಡಿಯೋ
Follow us on

ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಎಲ್ಲರೂ ಮನೆಯಲ್ಲೇ ಇರುವಂತಾಯಿತು. ಹಾಯಾಗಿ ಓಡಾಡಿಕೊಂಡಿದ್ದವರು ಗೃಹಬಂಧನಕ್ಕೆ ಒಳಗಾದರು. ಎಲ್ಲರ ಆಯ್ಕೆಗಳು ಬದಲಾದವು. ಈ ವೇಳೆ ಮನರಂಜನೆಗೆ ಎಲ್ಲರೂ ಮೊರೆ ಹೋಗಿದ್ದು ಒಟಿಟಿಯತ್ತ. ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಒಟಿಟಿ ವ್ಯಾಪ್ತಿ ಹೆಚ್ಚಿತು. ಅನೇಕರು ಚಿತ್ರಮಂದಿರದ ಬದಲು ಒಟಿಟಿಯಲ್ಲಿ ಸಿನಿಮಾ ನೋಡಲು ಹೆಚ್ಚು ಆಸಕ್ತಿ ತೋರಿಸಿದರು. ಈ ಕಾರಣಕ್ಕೆ ಒಟಿಟಿ ಪ್ಲಾಟ್​ಫಾರ್ಮ್​ಗಳ (OTT Plarform) ಮಧ್ಯೆ ದೊಡ್ಡ ಸ್ಪರ್ಧೆ ಏರ್ಪಟ್ಟಿದೆ. ಈ ಸ್ಪರ್ಧೆಯಲ್ಲಿ ಗೆಲ್ಲಲು ಎಲ್ಲಾ ಒಟಿಟಿ ಪ್ಲಾಟ್​ಫಾರ್ಮ್​ಗಳು ನಾನಾ ಕಸರತ್ತು ನಡೆಸುತ್ತಿವೆ. ಈಗ ಅಮೇಜಾನ್ ಪ್ರೈಮ್ ವಿಡಿಯೋ (Amazon Prime Video) ಹೊಸ ಆಯ್ಕೆಯೊಂದನ್ನು ಪರಿಚಯಿಸಿದೆ. ಇದು ವೀಕ್ಷಕರಿಗೆ ಸಹಕಾರಿ ಆಗಲಿದೆ.

ಹಲವು ಒಟಿಟಿ ಪ್ಲಾಟ್​ಫಾರ್ಮ್​ಗಳು ಸಿನಿಮಾ ಖರೀದಿಸಲು ನಾಮುಂದು ತಾಮುಂದು ಎಂದು ಬರುತ್ತಿವೆ. ಅದೇ ರೀತಿ ವೀಕ್ಷಕರಿಗೆ ಸಹಕಾರಿ ಆಗುವಂತಹ ಆಯ್ಕೆಗಳು ಪರಿಚಯಗೊಳ್ಳುತ್ತಿವೆ. ಅಮೇಜಾನ್ ಪ್ರೈಮ್ ವಿಡಿಯೋ ಕೂಡ ಹೊಸ ಆಯ್ಕೆ ತಂದಿದೆ. ಇದು ಯಾವ ರೀತಿಯಲ್ಲಿ ಸಹಕಾರಿ ಆಗಲಿದೆ ಎಂಬುದರ ವಿವರ ಈ ಸ್ಟೋರಿಯಲ್ಲಿದೆ.

ಡೈಲಾಗ್ ಬೂಸ್ಟ್ ಎಂಬ ಆಯ್ಕೆಯನ್ನು ಅಮೇಜಾನ್​ ಪ್ರೈಮ್ ವಿಡಿಯೋ ಪರಿಚಯಿಸಿದೆ. ಸದ್ಯ ಕೆಲವೇ ಕೆಲವು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿರುವ ಒರಿಜಿನಲ್ ಇಂಗ್ಲಿಷ್ ಕಂಟೆಟ್​​ಗಳಿಗೆ ಮಾತ್ರ ಈ ಆಯ್ಕೆ ಲಭ್ಯವಿದೆ. ಕೆಲವೊಮ್ಮೆ ಬ್ಯಾಕ್​ಗ್ರೌಂಡ್ ಮ್ಯೂಸಿಕ್ ಅಬ್ಬರ ಜೋರಾಗಿರುತ್ತದೆ. ಈ ವೇಳೆ ಡೈಲಾಗ್ ಸರಿಯಾಗಿ ಕೇಳುವುದಿಲ್ಲ. ಕೆಲವೊಮ್ಮೆ ಡೈಲಾಗ್ ಕೇಳಿಲ್ಲ ಎಂದು ರಿವೈಂಡ್ ಮಾಡಿ ಮತ್ತೊಮ್ಮೆ ನೋಡಬೇಕಾದ ಪರಿಸ್ಥಿತಿ ಬರುತ್ತದೆ. ಇದನ್ನು ಅಮೇಜಾನ್ ಪ್ರೈಮ್ ವಿಡಿಯೋ ಗಮನಿಸಿದೆ. ಹೀಗಾಗಿ, ಡೈಲಾಗ್ ಬೂಸ್ಟ್ (ಮೀಡಿಯಂ) ಹಾಗೂ ಡೈಲಾಗ್ ಬೂಸ್ಟ್ (ಹೈ) ಆಯ್ಕೆ ತಂದಿದೆ.

ಇದನ್ನೂ ಓದಿ: Amazon Echo Dot: ಅಲೆಕ್ಸಾ ಪ್ರಿಯರಿಗಾಗಿ ಬಂತು ಹೊಸ ಸ್ಮಾರ್ಟ್​ಸ್ಪೀಕರ್

ಈ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ ಬಿಜಿಎಂ ಅಬ್ಬರ ಜೋರಾದಾಗ ಡೈಲಾಗ್​ನ ವಾಲ್ಯೂಮ್ ಕೂಡ ಜೋರಾಗುತ್ತದೆ. ಆಗ ವೀಕ್ಷಕರಿಗೆ ಸರಿಯಾದ ರೀತಿಯಲ್ಲಿ ಸಂಭಾಷಣೆ ಕೇಳುತ್ತದೆ. ಈ ರೀತಿ ಆಯ್ಕೆಯನ್ನು ನಾವೇ ಮೊದಲು ಪರಿಚಯಿಸುತ್ತಿರುವುದು ಎಂದು ಅಮೇಜಾನ್ ಪ್ರೈಮ್ ವಿಡಿಯೋ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಆಯ್ಕೆಯನ್ನು ಎಲ್ಲಾ ಒಟಿಟಿ ಪ್ಲಾಟ್​ಫಾರ್ಮ್​​ಗಳು ತರಬಹುದು. ಇದರಿಂದ ವೀಕ್ಷಕರಿಗೆ ಸಹಕಾರಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Thu, 20 April 23