ಸತತ ಫ್ಲಾಪ್​ ಸಿನಿಮಾ ನೀಡಿದ ಅನಿಲ್​ ಕಪೂರ್​ ಮಗ; ಪುತ್ರನಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಸ್ಟಾರ್​ ನಟ?

|

Updated on: Feb 22, 2022 | 6:00 AM

80ರ ದಶಕದಿಂದಲೇ ಚಿತ್ರರಂಗದಲ್ಲಿ ಅನಿಲ್​ ಕಪೂರ್ ಆ್ಯಕ್ಟೀವ್​ ಆಗಿದ್ದಾರೆ. ಕನ್ನಡದಲ್ಲಿ ನಟಿಸಿದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾ ಮೂಲಕ ಹೀರೋ ಆಗಿ ಬಡ್ತಿ ಪಡೆದ ಅವರಿಗೆ ನಂತರ ಹಲವು ಆಫರ್​ಗಳು ಬಂದವು. ಬಾಲಿವುಡ್​ನಲ್ಲಿಯೇ ಅವರು ಸೆಟಲ್​ ಆದರು.

ಸತತ ಫ್ಲಾಪ್​ ಸಿನಿಮಾ ನೀಡಿದ ಅನಿಲ್​ ಕಪೂರ್​ ಮಗ; ಪುತ್ರನಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಸ್ಟಾರ್​ ನಟ?
ಅನಿಲ್​ ಕಪೂರ್​-ಹರ್ಷ ವರ್ಧನ್
Follow us on

ಸ್ಟಾರ್ ನಟನ ಮಕ್ಕಳಾದ ಮಾತ್ರಕ್ಕೆ ಅಭಿಮಾನಿಗಳು ಅವರನ್ನು ಒಪ್ಪಿಕೊಳ್ಳಲೇಬೇಕು ಎಂಬ ನಿಯಮ ಇಲ್ಲ. ಇದು ಅನೇಕ ಬಾರಿ ಸಾಬೀತಾಗಿದೆ. ತಂದೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ, ಅವರ ಮಕ್ಕಳು ಸಿನಿಮಾ ಲೋಕದಲ್ಲಿ ನೆಲೆ ಕಂಡುಕೊಳ್ಳೋಕೆ ಕಷ್ಟಪಡುತ್ತಿರುವ ಸಾಕಷ್ಟು ಜೀವಂತ ಉದಾಹರಣೆಗಳು ನಮ್ಮ ಮುಂದೆ ಇವೆ. ಇದಕ್ಕೆ ಅನಿಲ್​ ಕಪೂರ್​ (Anil Kapoor) ಮಗ ಹರ್ಷವರ್ಧನ್​ ಕಪೂರ್ (Harshvardhan Kapoor) ಕೂಡ ತಾಜಾ ಉದಾಹರಣೆ. ಅವರಿಗೆ ಚಿತ್ರರಂಗದಲ್ಲಿ ಯಶಸ್ಸು ಸಿಗುತ್ತಿಲ್ಲ. ಅವರ ನಟನೆಯ ಎಲ್ಲಾ ಚಿತ್ರಗಳು ಸತತವಾಗಿ ಫ್ಲಾಪ್​ ಆಗುತ್ತಿದೆ. ಈಗ ಮಗನಿಗೆ ಒಂದು ಯಶಸ್ಸು ಕೊಡೋಕೆ ಸ್ವತಃ ಅನಿಲ್​ ಕಪೂರ್​ ಅವರೇ ಮುಂದಾದಂತಿದೆ.

80ರ ದಶಕದಿಂದಲೇ ಚಿತ್ರರಂಗದಲ್ಲಿ ಅನಿಲ್​ ಕಪೂರ್ ಆ್ಯಕ್ಟೀವ್​ ಆಗಿದ್ದಾರೆ. ಕನ್ನಡದಲ್ಲಿ ನಟಿಸಿದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾ ಮೂಲಕ ಹೀರೋ ಆಗಿ ಬಡ್ತಿ ಪಡೆದ ಅವರಿಗೆ ನಂತರ ಹಲವು ಆಫರ್​ಗಳು ಬಂದವು. ಬಾಲಿವುಡ್​ನಲ್ಲಿಯೇ ಅವರು ಸೆಟಲ್​ ಆದರು. ಈಗ ಅವರಿಗೆ ಹಿಂದಿ ಚಿತ್ರರಂಗದಲ್ಲಿ ವಿಶೇಷ ಗೌರವ ಇದೆ. ಈಗ ಮಗನ ಜತೆ ನಟಿಸೋಕೆ ಅವರು ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್​ನಲ್ಲಿ ಕಪೂರ್​ ಕುಟುಂಬಕ್ಕೆ ದೊಡ್ಡ ಹೆಸರಿದೆ. ಹಾಗಂದ ಮಾತ್ರಕ್ಕೆ ಈ ಕುಟುಂಬದಿಂದ ಬಂದ ಎಲ್ಲರೂ ಹಿಟ್​ ಆಗಿಲ್ಲ. ಹರ್ಷವರ್ಧನ್​ ಅವರು 2016ರಲ್ಲಿ ತೆರೆಗೆ ಬಂದ ‘ಮಿರ್ಜ್ಯಾ​’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇಲ್ಲಿವರೆಗೆ ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2020ರಲ್ಲಿ ತೆರೆಗೆ ಬಂದ ‘ಎಕೆ ವರ್ಸಸ್​ ಎಕೆ’ ಸಿನಿಮಾದಲ್ಲಿ ತಂದೆ ಅನಿಲ್​ ಕಪೂರ್ ಜತೆ ಅವರು ನಟಿಸಿದ್ದರು. ಈಗ ಮತ್ತೊಮ್ಮೆ ಇಬ್ಬರೂ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ.

‘ಥಾರ್​’ ಹೆಸರಿನ ಸಿನಿಮಾದಲ್ಲಿ ಅನಿಲ್​ ಕಪೂರ್ ಹಾಗೂ ಹರ್ಷವರ್ಧನ್​ ಕಪೂರ್​ ಒಟ್ಟಾಗಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ. ಥ್ರಿಲ್ಲರ್​ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಫಾತಿಮಾ ಸನಾ ಶೇಖ್ ನಾಯಕಿಯಾಗಿ​ ನಟಿಸುತ್ತಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರ ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಲಿದೆ. ರಾಜ್​ ಸಿಂಗ್​ ಚೌಧರಿ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

ಅನಿಲ್​ ಕಪೂರ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಹರ್ಷವರ್ಧನ್ ಜತೆ ನಟಿಸಿದರೆ, ಮಗನ ವೃತ್ತಿಜೀವನಕ್ಕೆ ಮೈಲೇಜ್​ ಸಿಗಬಹುದು ಎನ್ನುವ ಆಲೋಚನೆ ಅನಿಲ್​ ಕಪೂರ್​ ಅವರದ್ದು. ಈ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಕುತೂಹಲ ಅಭಿಮಾನಿ ವಲಯದಲ್ಲಿದೆ.

ಇದನ್ನೂ ಓದಿ: 64ರ ಪ್ರಾಯದ ಅನಿಲ್​ ಕಪೂರ್​ ಈಗಲೂ ಬಾಡಿ ಫಿಟ್​ ಆಗಿ ಇಟ್ಟುಕೊಂಡಿರುವುದು ಹೇಗೆ? ಇಲ್ಲಿದೆ ಉತ್ತರ

ಹೀಗೂ ದುಡ್ಡು ಮಾಡಬಹುದು ಅಂತ ತೋರಿಸಿದ್ದೇ ಸಲ್ಮಾನ್​ ಖಾನ್​; ಅನಿಲ್​ ಕಪೂರ್​ ಹೇಳಿದ ಅಚ್ಚರಿ ವಿಷಯ