ಜಿಯೋ ಸಿನಿಮಾದಲ್ಲಿ ‘ಅಸುರ್ 2’ ಪ್ರಸಾರ ಆರಂಭ; ಆದರೆ, ಪೂರ್ತಿ ಸೀರಿಸ್ ನೋಡೋಕೆ ಆಗಲ್ಲ
‘ಅಸುರ್ 2’ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಈ ಬಗ್ಗೆ ವಿಮರ್ಶೆ ತಿಳಿಸಿದ್ದಾರೆ. ಮೊದಲ ದಿನ ಅಷ್ಟೂ ಎಪಿಸೋಡ್ಗಳನ್ನು ನೋಡುವ ಅವಕಾಶವನ್ನು ಜೀಯೋ ಸಿನಿಮಾದವರು ನೀಡಿಲ್ಲ.
2020ರಲ್ಲಿ ಪ್ರಸಾರ ಕಂಡಿದ್ದ ‘ಅಸುರ್’ (Asur) ವೆಬ್ ಸೀರಿಸ್ಗೆ ಸೀಕ್ವೆಲ್ ಸಿದ್ಧಗೊಂಡಿದ್ದು, ಇಂದಿನಿಂದ (ಜೂನ್ 1) ಪ್ರಸಾರ ಆರಂಭಿಸಿದೆ. ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದ ಮೊದಲ ಸರಣಿ ವೀಕ್ಷಕರಿಗೆ ಇಷ್ಟವಾಗಿತ್ತು. ಎರಡನೇ ಸೀರಿಸ್ನ ಟ್ರೇಲರ್ ಜನರಿಗೆ ಇಷ್ಟವಾಗಿತ್ತು. ಅದೇ ರೀತಿಯಲ್ಲಿ ಸೀರಿಸ್ ಮೂಡಿ ಬಂದಿದೆ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ಆದರೆ, ಮೊದಲ ದಿನ ಅಷ್ಟೂ ಎಪಿಸೋಡ್ಗಳನ್ನು ನೋಡುವ ಅವಕಾಶವನ್ನು ಜೀಯೋ ಸಿನಿಮಾದವರು (Jio Cinema) ನೀಡಿಲ್ಲ.
ಇತ್ತೀಚೆಗೆ ವಾರಕ್ಕೆ ಒಂದು, ದಿನಕ್ಕೆ ಒಂದು ಎಪಿಸೋಡ್ ಪ್ರಸಾರ ಮಾಡುವ ಟ್ರೆಂಡ್ ಜೋರಾಗಿದೆ. ‘ಅಸುರ್ 2’ ವಿಚಾರದಲ್ಲಿ ಇದೇ ತಂತ್ರ ಬಳಕೆ ಆಗಿದೆ. ಮೊದಲ ದಿನ ಎರಡು ಎಪಿಸೋಡ್ ಪ್ರಸಾರ ಕಂಡಿದೆ. ಆ ಬಳಿಕ ಜೂನ್ 2ರಿಂದ ಜೂನ್ 7ರವರೆಗೆ ನಿತ್ಯ ಒಂದೊಂದು ಎಪಿಸೋಡ್ ಪ್ರಸಾರ ಕಾಣಲಿದೆ. ಈ ಮೂಲಕ ಜೂನ್ 7ರಂದು ನೀವು ಅಷ್ಟೂ ಎಪಿಸೋಡ್ ನೋಡಬಹುದಾಗಿದೆ.
‘ಅಸುರ್’ ಸೀರಿಸ್ನಲ್ಲಿ ಅರ್ಷದ್ ವರ್ಸಿ, ಬರುಣ್ ಸೋಬ್ತಿ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಸರಣಿ ಕೊಲೆಗಳು ನಡೆಯುತ್ತಿರುತ್ತವೆ. ಇದೆಲ್ಲವನ್ನೂ ಮಾಡುತ್ತಿರುವುದು ಅಸುರ ಅನ್ನೋದು ಗೊತ್ತಾಗುತ್ತದೆ. ಈ ಅಸುರ ಯಾರು ಎಂಬುದನ್ನು ಹುಡುಕಿ ಹೊರಡುತ್ತಾನೆ ನಿಖಿಲ್ ನಾಯರ್ (ಬರುಣ್ ಸೋಬ್ತಿ). ಆತ ಫಾರೆನ್ಸಿಕ್ ಎಕ್ಸ್ಪರ್ಟ್. ನಿಖಿಲ್ಗೆ ಧನಂಜಯ್ ರಜಪೂತ್ (ಅರ್ಷದ್) ಸಹಕಾರವೂ ಸಿಗುತ್ತದೆ. ಆದರೆ, ಅಸುರ ಸಿಗುವುದಿಲ್ಲ. ಎರಡನೇ ಪಾರ್ಟ್ನಲ್ಲೂ ಅಸುರನ ಹುಡುಕಾಟ ಮುಂದುವರಿದಿದೆ.
An absolutely brilliant start to #Asur2 : The 2 episodes make you revisit the case of an antagonist driven to create anarchy!
The characters are burdened by guilt & grief but want the madness to end: The layered writing stays consistent: Pumped to see more ? pic.twitter.com/xGIzMl00us
— ANMOL JAMWAL (@jammypants4) June 1, 2023
ಇದನ್ನೂ ಓದಿ: Asur 2: ಸೀಕ್ವೆಲ್ನಲ್ಲೂ ಮುಂದುವರಿದ ‘ಅಸುರ’ನ ಹುಡುಕಾಟ; ಇದು ಡಿಜಿಟಲ್ ವಾರ್
‘ಅಸುರ್ 2’ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಈ ಬಗ್ಗೆ ವಿಮರ್ಶೆ ತಿಳಿಸಿದ್ದಾರೆ. ಕಳೆದ ಬಾರಿ ‘ಅಸುರ್’ ವೂಟ್ನಲ್ಲಿ ಲಭ್ಯವಿತ್ತು. ಈ ಬಾರಿ ‘ಜಿಯೋ ಸಿನಿಮಾಸ್’ ಮೂಲಕ ಪ್ರಸಾರ ಕಂಡಿದೆ. ಇಷ್ಟು ದಿನ ಜನರು ಐಪಿಎಲ್ನಲ್ಲಿ ಬ್ಯುಸಿ ಇದ್ದರು. ಈ ಕಾರಣಕ್ಕೆ ಐಪಿಎಲ್ ಮುಗಿದ ಬಳಿಕ ‘ಅಸುರ್ 2’ ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ