ಜೀ5ನಲ್ಲಿ ಬರ್ತಿದೆ ಕನ್ನಡ ಮಿನಿ ಸೀಸನ್; ‘ಅಯ್ಯನ ಮನೆ’ ಹೆಸರಿನ ಹೊಸ ಪ್ರಯತ್ನ
ಜೀ5 ಒಟಿಟಿಯಲ್ಲಿ ‘ಅಯ್ಯನ ಮನೆ’ ಎಂಬ ಹೊಸ ಕನ್ನಡ ಮಿನಿ-ವೆಬ್ ಸರಣಿ ಬಿಡುಗಡೆಯಾಗುತ್ತಿದೆ. ರಮೇಶ್ ಇಂದಿರಾ ನಿರ್ದೇಶನದ ಈ ಸರಣಿಯಲ್ಲಿ ಖುಷಿ ರವಿ, ಅಕ್ಷಯ್ ನಾಯಕ್ ಮತ್ತು ಮಾನಸಿ ಸುಧೀರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಏಳು ಎಪಿಸೋಡ್‌ಗಳ ಸರಣಿಯು ಏಪ್ರಿಲ್ 25 ರಿಂದ ವೀಕ್ಷಣೆಗೆ ಲಭ್ಯವಾಗಲಿದೆ.

ಸದ್ಯ ಹಲವು ಒಟಿಟಿಗಳಲ್ಲಿ ವೆಬ್ ಸೀರಿಸ್ ಪ್ರಸಾರ ಮಾಡುವ ಟ್ರೆಂಡ್ ಜೋರಾಗಿದೆ. ಇದಕ್ಕೆ ದೊಡ್ಡ ವೀಕ್ಷಕ ವರ್ಗ ಕೂಡ ಇದೆ. ಈಗ ಜೀ5 (Zee 5) ಕಡೆಯಿಂದ ಒಂದು ಹೊಸ ಪ್ರಯೋಗ ನಡೆದಿದೆ. ಕನ್ನಡ ಸಿನಿಮಾ ಪ್ರೇಮಿಗಳಿಗಾಗಿ ಈ ಒಟಿಟಿ ಮಿನಿ ವೆಬ್ ಸೀರೀಸ್ ಪರಿಚಯಿಸಿದೆ. ಜೀ5 ಕಡೆಯಿಂದ ಬರುತ್ತಿರುವ ಮೊದಲ ಕನ್ನಡ ಮಿನಿ ಸೀರಿಸ್ ಅನ್ನೋದು ವಿಶೇಷ. ಇದನ್ನು ಖ್ಯಾತ ನಟ ರಮೇಶ್ ಇಂದಿರಾ ಅವರು ನಿರ್ದೇಶನ ಮಾಡಿದ್ದಾರೆ. ಈ ಸರಣಿಗೆ ‘ಅಯ್ಯನ ಮನೆ’ ಎನ್ನುವ ಟೈಟಲ್ ಇಡಲಾಗಿದೆ.
‘ಅಯ್ಯನ ಮನೆ’ ಸರಣಿಯನ್ನು ಶೃತಿ ನಾಯ್ಡು ಅವರು ಬಂಡವಾಳ ಹೂಡಿದ್ದಾರೆ. ಕೇವಲ ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್ ವೀಕೆಂಡ್ ವೀಕ್ಷಣೆಗೆ ಒಳ್ಳೆಯ ಆಯ್ಕೆ ಆಗಬಹುದು. ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಈ ಸರಣಿಯಲ್ಲಿ ನಟಿಸಿದ್ದಾರೆ. ಭಯ, ನಂಬಿಕೆ ಮತ್ತು ವಿಧಿ ನಡುವಿನ ಘರ್ಷಣೆಯ ಕಥೆ ಹೇಳಲಿದೆ. ಈ ಸರಣಿ ಏಪ್ರಿಲ್ 25ರಿಂದ ಜೀ5ನಲ್ಲಿ ಸ್ಟ್ರೀಮ್ ಆಗಲಿದೆ.
ಚಿಕ್ಕಮಗಳೂರಿನ ‘ಅಯ್ಯನ ಮನೆ’ ಕುಟುಂಬದಲ್ಲಿ ನಡೆಯುವ ಕಾಲ್ಪನಿಕ ಕಥೆ. ಇದು ಮಿಸ್ಟ್ರರಿ ವಿಚಾರಗಳನ್ನು ಒಳಗೊಂಡಿದೆ. ಈಗಾಗಲೇ ಹಲವು ಹಿಟ್ ಚಿತ್ರ ಕೊಟ್ಟುರುವ ರಮೇಶ್ ಇಂದಿರಾ ಹೊಸ ಬಗೆಯ ಕಥೆಯ ಮೂಲಕ ಒಟಿಟಿ ಪ್ರೇಕ್ಷಕರನ್ನು ತಲುಪಲಿದ್ದಾರೆ.
ಈ ವೆಬ್ ಸರಣಿ ಬಗ್ಗೆ ಮಾತನಾಡಿರೋ ರಮೇಶ್ ಇಂದಿರಾ, ‘ಅಯ್ಯನ ಮನೆ ರೋಚಕತೆ ಜೊತೆಗೆ ಭಯ, ನಂಬಿಕೆ ಮತ್ತು ಕೌಂಟುಂಬಿಕ ಕಥೆಯೊನ್ನು ಒಳಗೊಂಡಿದೆ. ಈ ವೆಬ್ ಸರಣಿ ಕರ್ನಾಟಕ ಸಂಸ್ಕೃತಿ, ಸಂಪ್ರದಾಯದವನ್ನು ಅನಾವರಣ ಮಾಡುತ್ತದೆ. ಅಯ್ಯನ ಮನೆ ವೆಬ್ ಸರಣಿ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ’ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ‘ಕರಾವಳಿ’ಯಲ್ಲಿ ದೊಡ್ಡವರಾದ ರಮೇಶ್ ಇಂದಿರಾ
ಜಾಜಿ ಪಾತ್ರದಲ್ಲಿ ಖುಷಿ ರವಿ ಕಾಣಿಸಿಕೊಂಡಿದ್ದಾರೆ. ಮುಗ್ಧ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ಇವರು, ಗಂಡನ ಪ್ರೀತಿಯ ಹೆಂಡತಿ. ಸಂಪ್ರದಾಯ ಪಾಲಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಭಾವನಾತ್ಮಕ ಪ್ರಯಾಣ ಆಗಿತ್ತಂತೆ. ಅವರು ಕೂಡ ಈ ವೆಬ್ ಸರಣಿ ನೋಡಲು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.