ರೆಸ್ಟೊರೆಂಟ್‌ನಲ್ಲಿ ರೊಚ್ಚಿಗೆದ್ದ ಬಿಗ್ ಬಾಸ್ ವಿನ್ನರ್; ನಡೆದೋಯ್ತು ರಾದ್ಧಾಂತ
ಎಲ್ವಿಶ್ ಪ್ರಸಿದ್ಧ ಯೂಟ್ಯೂಬರ್. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಿಂದ ಅವರ ಮೇಲೆ ಜನರಿಗೆ ಇದ್ದ ಗೌರವ ಕಡಿಮೆ ಆಗಿದೆ. ರಾಜಸ್ಥಾನದ ಜೈಪುರದ ರೆಸ್ಟೊರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
‘ಬಿಗ್ ಬಾಸ್ ಹಿಂದಿ ಒಟಿಟಿ ಸೀಸನ್ 2′ (Bigg Boss OTT) ಗೆದ್ದ ಯುಟ್ಯೂಬರ್ ಎಲ್ವಿಶ್ ಯಾದವ್ ಬಹಳ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿ ಬಳಗವಿದೆ. ಸಲ್ಮಾನ್ ಖಾನ್ ಅವರ ಈ ಕಾರ್ಯಕ್ರಮಕ್ಕೆ ಎಂಟ್ರಿಯಾಗುವ ಮೊದಲೇ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಿತ್ತು. ಕಾರ್ಯಕ್ರಮದ ವಿಜೇತರಾದ ನಂತರ ಅದು ಇನ್ನಷ್ಟು ಬೆಳೆಯಿತು. ಬಿಗ್ ಬಾಸ್‌ನಲ್ಲಿ ಅವರ ಆಕ್ರಮಣಕಾರಿ ಆಟವು ಸಾಕಷ್ಟು ಚರ್ಚೆಯಾಗಿತ್ತು. ಬಿಗ್ ಬಾಸ್ನ ಹೊರಗೂ ಅವರು ಆಕ್ರಮಣಕಾರಿಯಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
‘ಬಿಗ್ ಬಾಸ್’ನಿಂದ ಬಂದ ಬಳಿಕ ಒಂದಲ್ಲ ಒಂದು ವಿವಾದಗಳಿಂದ ಎಲ್ವಿಶ್ ಸುದ್ದಿ ಆಗುತ್ತಿದ್ದಾರೆ. ಈ ಹಿಂದೆ ವಿಷಕಾರಿ ಹಾವುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಈಗ ಎಲ್ವಿಶ್ ಅವರ ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಅವರು ರೆಸ್ಟೋರೆಂಟ್ ಒಂದರಲ್ಲಿ ವ್ಯಕ್ತಿಯೊಬ್ಬರಿಗೆ ಹೊಡೆಯುತ್ತಿರುವುದು ಕಂಡು ಬಂದಿದೆ.
ಎಲ್ವಿಶ್ ಪ್ರಸಿದ್ಧ ಯೂಟ್ಯೂಬರ್. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಿಂದ ಅವರ ಮೇಲೆ ಜನರಿಗೆ ಇದ್ದ ಗೌರವ ಕಡಿಮೆ ಆಗಿದೆ. ರಾಜಸ್ಥಾನದ ಜೈಪುರದ ರೆಸ್ಟೊರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ವೈರಲ್ ಆದ ವಿಡಿಯೋ
#ElvishYadav slapping someone at a resturant pic.twitter.com/I720rqPYlY
— The Khabri (@TheKhabriTweets) February 11, 2024
ಎಲ್ವಿಶ್ ರೆಸ್ಟೋರೆಂಟ್‌ಗೆ ಹೋಗುತ್ತಾರೆ. ಅವರು ನಡೆದು ಹೋಗುವಾಗ ಇದ್ದಕ್ಕಿದ್ದಂತೆ ಹಿಂದೆ ತಿರುಗುತ್ತಾರೆ ಮತ್ತು ಬದಿಯಲ್ಲಿ ಕುಳಿತಿದ್ದ ವ್ಯಕ್ತಿಯ ಕೆನ್ನೆಗೆ ಬಲವಾಗಿ ಹೊಡೆಯುತ್ತಾರೆ. ನಂತರ ಮುಂದೆ ಹೋಗುವ ಅವರು ಮತ್ತೆ ಬಂದು ಹೊಡೆಯಲು ಮುಂದಾಗುತ್ತಾರೆ. ಅವರ ಸುತ್ತಲಿನ ಜನರು ಅವರನ್ನು ತಡೆಯುತ್ತಾರೆ. ಸುತ್ತಲಿನ ಜನರು ಎಲ್ವಿಶ್ ಕೋಪವನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಪೊಲೀಸ್ ಕೂಡ ಬಂದು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಸಿದ್ದಾರೆ.
ಇದನ್ನೂ ಓದಿ: ನೋಯ್ಡಾದಲ್ಲಿ ರೇವ್ ಪಾರ್ಟಿಗಳಿಗಾಗಿ ಹಾವಿನ ವಿಷ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಕೇಸ್
ಎಲ್ವಿಶ್ ಅವರು ಈ ರೀತಿ ಹೊಡೆದಿದ್ದು ಏಕೆ? ಆ ವ್ಯಕ್ತಿಯಿಂದ ಬಂದ ಕಮೆಂಟ್ ಏನು ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ ಎನ್ನಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಟ್ರೆಂಡ್ ಆಗುತ್ತಿದೆ. ಅನೇಕರು ಎಲ್ವಿಶ್ ಅವರನ್ನು ಟೀಕಿಸುತ್ತಿದ್ದಾರೆ.
ಹಾವಿನ ಕೇಸ್..
ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಮಾಡುತ್ತಿದ್ದರು ಎನ್ನುವ ಪ್ರಕರಣದಲ್ಲಿ ಎಲ್ವಿಶ್ ಯಾದವ್ ಅರೆಸ್ಟ್ ಆಗಿದ್ದರು. ಅವರು ಹಾಗೂ ಐದು ಸಹಚರರ ವಿರುದ್ಧ ಕೇಸ್ ದಾಖಲಾಗಿತ್ತು. ಎಲ್ವಿಶ್ ಯಾದವ್ ಬಳಿ 20 ಎಂಎಲ್ ಹಾವಿನ ವಿಷದ ಜೊತೆಗೆ 9 ಹಾವುಗಳನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಬಳಿ ಐದು ನಾಗರಹಾವು, ತಲಾ ಒಂದು ಹೆಬ್ಬಾವು, ಎರಡು ತಲೆಯ ಹಾವು ಹಾಗೂ ಕೇರೆ ಹಾವು ಇತ್ತು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ