Elvish Yadav: ಬಿಗ್ ಬಾಸ್ ಟ್ರೋಫಿ ಎತ್ತಿದ ವೈಲ್ಡ್ ಕಾರ್ಡ್ ಸ್ಪರ್ಧಿ; ಸೃಷ್ಟಿ ಆಯಿತು ಹೊಸ ಇತಿಹಾಸ

ಎಲ್ವಿಷ್ ಅವರು ಈ ಬಾರಿ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದವರು ಯಾರೂ ಇಲ್ಲ. ಎಲ್ವಿಷ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಟ್ರೋಫಿ ಎತ್ತಿದ್ದಾರೆ. ಅಭಿಷೇಕ್ ಮಲ್ಹಾನ್ ಅವರು ರನ್ನರ್ ಅಪ್ ಆಗಿದ್ದಾರೆ. ಇಬ್ಬರ ಮಧ್ಯೆ ಸಖತ್ ಕಾಂಪಿಟೇಷನ್ ಇತ್ತು.

Elvish Yadav: ಬಿಗ್ ಬಾಸ್ ಟ್ರೋಫಿ ಎತ್ತಿದ ವೈಲ್ಡ್ ಕಾರ್ಡ್ ಸ್ಪರ್ಧಿ; ಸೃಷ್ಟಿ ಆಯಿತು ಹೊಸ ಇತಿಹಾಸ
ಎಲ್ವಿಷ್
Follow us
ರಾಜೇಶ್ ದುಗ್ಗುಮನೆ
|

Updated on: Aug 15, 2023 | 7:54 AM

‘ಹಿಂದಿ ಬಿಗ್ ಬಾಸ್ ಒಟಿಟಿ 2’ (Bigg Boss OTT) ಫಿನಾಲೆ ಸೋಮವಾರ (ಆಗಸ್ಟ್​ 14) ನಡೆದಿದೆ. ಮಧ್ಯರಾತ್ರಿ ವೇಳೆಗೆ ಸಲ್ಮಾನ್ ಖಾನ್ ಅವರು ವಿನ್ನರ್ ಹೆಸರನ್ನು ಘೋಷಣೆ ಮಾಡಿದ್ದಾರೆ. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ವಿಷ್ ಯಾದವ್ ಅವರು ವಿನ್ ಆಗಿದ್ದಾರೆ. ಯೂಟ್ಯೂಬರ್ ಆಗಿರುವ ಇವರು 25 ಲಕ್ಷ ಬಹುಮಾನದ ಹಣ ಹಾಗೂ ಟ್ರೋಫಿಯೊಂದಿಗೆ ಮನೆಗೆ ತೆರಳಿದ್ದಾರೆ. ಮಹೇಶ್ ಭಟ್ ಮಗಳು, ಆಲಿಯಾ ಭಟ್ (Alia Bhatt) ಸಹೋದರಿ ಪೂಜಾ ಭಟ್​ಗೆ ಮುಖಭಂಗ ಆಗಿದೆ.

ಎಲ್ವಿಷ್ ಅವರು ಈ ಬಾರಿ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದವರು ಯಾರೂ ಇಲ್ಲ. ಎಲ್ವಿಷ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಟ್ರೋಫಿ ಎತ್ತಿದ್ದಾರೆ. ಅಭಿಷೇಕ್ ಮಲ್ಹಾನ್ ಅವರು ರನ್ನರ್ ಅಪ್ ಆಗಿದ್ದಾರೆ. ಇಬ್ಬರ ಮಧ್ಯೆ ಸಖತ್ ಕಾಂಪಿಟೇಷನ್ ಇತ್ತು. ಮನಿಷಾ ರಾಣಿ, ಪೂಜಾ ಭಟ್ ಹಾಗೂ ದೇವಿಕಾ ಧುರ್ವೆ ಅವರಿಗೆ ಹಿನ್ನಡೆ ಆಗಿದೆ.

ವೈಲ್ಡ್ ಕಾರ್ಡ್ ಮೂಲಕ ಎಲ್ವಿಷ್ ಅವರು ದೊಡ್ಮನೆಗೆ ಬಂದರು. ಅವರು ಇತರ ಸ್ಪರ್ಧಿಗಳಿಗಿಂತ ಮನೆಯಲ್ಲಿ ಕಡಿಮೆ ಸಮಯ ಇದ್ದರು. ಹೀಗಾಗಿ, ಅವರನ್ನು ವಿನ್ನರ್ ಎಂದು ಘೋಷಿಸಿದ್ದು ಏಕೆ ಎಂಬ ಪ್ರಶ್ನೆಯೂ ಬಂತು. ಇದಕ್ಕೆ ಸಲ್ಮಾನ್ ಖಾನ್ ಅರು ಸಮಜಾಯಿಶಿ ಕೊಟ್ಟರು. ‘ಅವರು ಕಷ್ಟಪಟ್ಟು ಟಾಸ್ಕ್ ಮಾಡಿದ್ದಾರೆ, ಮನರಂಜನೆ ನೀಡಿದ್ದಾರೆ. ಹೀಗಾಗಿ ಅವರಿಗೆ ವಿನ್ನರ್ ಪಟ್ಟ ಸಿಕ್ಕಿದೆ ಎಂದರು. ಎಲ್ವಿಷ್​ಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಬೆಂಬಲ ನೀಡಿದ್ದರು. ಹೀಗಾಗಿ ಅವರು ವಿನ್ ಆಗಿದ್ದಾರೆ.

ಎಲ್ವಿಷ್ ಮನೆಯಲ್ಲಿ ಇದ್ದಷ್ಟೂ ದಿನ ಎಲ್ಲರಿಗೂ ಸಾಕಷ್ಟು ಮನರಂಜನೆ ನೀಡಿದ್ದರು. ಕಾಮಿಡಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಮನೆ ಮಂದಿಯಲ್ಲೂ ಕೆಲವರು ಎಲ್ವಿಷ್ ಅವರನ್ನು ಬೆಂಬಲಿಸಿದರು. ರನ್ನರ್ ಅಪ್ ಅಭಿಷೇಕ್ ಹಾಗೂ ಎಲ್ವಿಷ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ.

ಇದನ್ನೂ ಓದಿ: ‘ಬಿಗ್ ಬಾಸ್ ಒಟಿಟಿ 2’ ಫಿನಾಲೆ; ಫೈನಲಿಸ್ಟ್​ಗಳು ಯಾರು? ಟ್ರೋಫಿ ಗೆದ್ದವರಿಗೆ ಸಿಗುವ ಹಣ ಎಷ್ಟು?

ಎಲ್ವಿಷ್ ಹಾಗೂ ಮನಿಷಾ ಅವರ ಕೆಮಿಸ್ಟ್ರಿ ಕೆಲಸ ಮಾಡಿದೆ. ಈ ಜೋಡಿಗೆ ಫ್ಯಾನ್ಸ್ ‘ಎಲ್ವಿಷಾ’ ಎಂದು ನಿಕ್ ನೇಮ್ ಕೂಡ ನೀಡಿದ್ದಾರೆ. ಅನೇಕ ಬಾರಿ ಮನಿಷಾ ಅವರು ಎಲ್ವಿಷ್​ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದರು. ಆದರೆ, ಗರ್ಲ್​ಫ್ರೆಂಡ್ ಇರುವ ಕಾರಣ ನೀಡಿ ಎಲ್ವಿಷ್ ಅಂತರ ಕಾಯ್ದುಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ