AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ಒಟಿಟಿ 2’ ಫಿನಾಲೆ; ಫೈನಲಿಸ್ಟ್​ಗಳು ಯಾರು? ಟ್ರೋಫಿ ಗೆದ್ದವರಿಗೆ ಸಿಗುವ ಹಣ ಎಷ್ಟು?

‘ಬಿಗ್ ಬಾಸ್ ಹಿಂದಿ ಒಟಿಟಿ’ 2ನೇ ಸೀಸನ್ ಫೈನಲ್ ಹಂತ ತಲುಪಿದೆ. ಇಂದು (ಆಗಸ್ಟ್ 14) ಇದರ ಫಿನಾಲೆ ನಡೆಯಲಿದೆ. ಕೇವಲ ಒಟಿಟಿಯಲ್ಲಿ ಮಾತ್ರ ಪ್ರಸಾರ ಕಂಡ ಈ ಶೋ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈಗ ಈ ರಿಯಾಲಿಟಿ ಶೋ ಫಿನಾಲೆ ಹಂತಕ್ಕೆ ಬಂದಿದೆ.

‘ಬಿಗ್ ಬಾಸ್ ಒಟಿಟಿ 2’ ಫಿನಾಲೆ; ಫೈನಲಿಸ್ಟ್​ಗಳು ಯಾರು? ಟ್ರೋಫಿ ಗೆದ್ದವರಿಗೆ ಸಿಗುವ ಹಣ ಎಷ್ಟು?
ಸಲ್ಮಾನ್​ ಖಾನ್​
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​|

Updated on: Aug 14, 2023 | 6:39 PM

Share

‘ಬಿಗ್ ಬಾಸ್ ಹಿಂದಿ ಒಟಿಟಿ’ ಎರಡನೇ ಸೀಸನ್ (Bigg Boss OTT Season 2) ಫೈನಲ್ ಹಂತ ತಲುಪಿದೆ. ಇಂದು (ಆಗಸ್ಟ್ 14) ಇದರ ಫಿನಾಲೆ (Bigg Boss OTT Season 2 Finale) ನಡೆಯಲಿದೆ. ಕೇವಲ ಒಟಿಟಿಯಲ್ಲಿ ಮಾತ್ರ ಪ್ರಸಾರ ಕಂಡ ಈ ಶೋ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಸ್ಪರ್ಧಿಗಳ ಮಧ್ಯೆ ನಡೆದ ರೊಮ್ಯಾನ್ಸ್, ಮನೆ ಒಳಗೆ ತೆರಳಿದ್ದ ಮಹೇಶ್ ಭಟ್ ನಡೆದುಕೊಂಡ ರೀತಿ ಎಲ್ಲವೂ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ರಿಯಾಲಿಟಿ ಶೋ ಫಿನಾಲೆ ಹಂತಕ್ಕೆ ಬಂದಿದೆ. ಸಲ್ಮಾನ್ ಖಾನ್ (Salman Khan) ಅವರು ಫಿನಾಲೆಯನ್ನು ನಡೆಸಿಕೊಡಲಿದ್ದಾರೆ. ಕಳೆದ ಒಟಿಟಿ ಸೀಸನ್​ನ ಕರಣ್ ಜೋಹರ್ ಅವರು ನಡೆಸಿಕೊಟ್ಟಿದ್ದರು. ಈ ಬಾರಿ ಸಲ್ಮಾನ್ ಖಾನ್ ಅವರೇ ಇದರ ನಿರೂಪಣೆ ಮಾಡಿದ್ದಾರೆ.

ಇಂದು (ಆಗಸ್ಟ್​ 14) ಫಿನಾಲೆ:

ಸಲ್ಮಾನ್ ಖಾನ್ ಇದ್ದಲ್ಲಿ ಖಡಕ್​ನೆಸ್ ಇರುತ್ತದೆ. ಕಳೆದ ಬಾರಿ ಕರಣ್ ಜೋಹರ್ ನಡೆಸಿಕೊಟ್ಟಿದ್ದಕ್ಕೆ ವೀಕ್ಷಕರ ಸಂಖ್ಯೆ ಕಡಿಮೆ ಆಯಿತು ಎನ್ನಲಾಗಿದೆ. ಹೀಗಾಗಿ, ಸಲ್ಮಾನ್ ಖಾನ್ ಅವರನ್ನು ಕರೆತರಲಾಗಿದೆ. ವಿವಿಧ ಕ್ಷೇತ್ರದ ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿದ್ದರು. ಎಂಟು ವಾರಗಳ ಕಾಲ ಬಿಗ್ ಬಾಸ್ ಒಟಿಟಿ ನಡೆದಿದೆ. ಪೂಜಾ ಭಟ್ ಸೇರಿ ಅನೇಕರನ್ನು ಸ್ಪರ್ಧಿಗಳಾಗಿ ಕರೆತರಲಾಗಿದೆ. ಎಲ್ಲಾ ಸೀಸನ್​ಗಳಂತೆ ಇಲ್ಲಿಯೂ ವಿವಾದ ಇತ್ತು. ಫಿನಾಲೆ ಗೆಲ್ಲೋದು ಯಾರು ಅನ್ನೋ ಪ್ರಶ್ನೆ ವೀಕ್ಷಕರ ಮನದಲ್ಲಿ ಮೂಡಿದೆ.

ಎಲ್ಲಿ ಲೈವ್ ವೀಕ್ಷಿಸಬಹುದು?

ಆಗಸ್ಟ್14ರ ರಾತ್ರಿ 9ರಿಂದ ಬಿಗ್ ಬಾಸ್ ಸ್ಟ್ರೀಮಿಂಗ್ ಆರಂಭ ಆಗಲಿದೆ. ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಸಂಪೂರ್ಣ ಸಂಚಿಕೆಯನ್ನು ವೀಕ್ಷಿಸಬಹುದು. ಜಿಯೋ ಸಿನಿಮಾದಲ್ಲಿ ಉಚಿತ ವೀಕ್ಷಣೆಗೆ ಅವಕಾಶ ಇದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಕನ್ನಡ ಬಿಗ್​ ಬಾಸ್​​ ಬೆಡಗಿ

ಟಾಪ್ 5 ಫೈನಲಿಸ್ಟ್‌ಗಳು ಯಾರು?

ಪೂಜಾ ಭಟ್, ಎಲ್ವಿಶ್ ಯಾದವ್, ಮನಿಶಾ ರಾಣಿ, ಅಭಿಷೇಕ್ ಮಲ್ಹಾನ್, ಬಾಬಿಕಾ ಧುರ್ವೆ ‘ಬಿಗ್ ಬಾಸ್ ಹಿಂದಿ ಒಟಿಟಿ’ ಎರಡನೇ ಸೀಸನ್​ನ ಫೈನಲ್ ಪ್ರವೇಶಿಸಿದ್ದಾರೆ. ಈ ಐವರಲ್ಲಿ ಒಬ್ಬರು ಟ್ರೋಫಿ ಗೆಲ್ಲುತ್ತಾರೆ. ಎಲ್ವಿಶ್ ಯಾದವ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದರು. ಅವರು ಐದನೇ ಸ್ಥಾನದಲ್ಲಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿರುವ ಅವರು ಶೋ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ.

ಜಿಯೋ ಸಿನಿಮಾ ಟ್ವೀಟ್​:

‘ಬಿಗ್ ಬಾಸ್ ಒಟಿಟಿ ಸೀಸನ್ 2’ರ ವಿಜೇತರಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಇದರ ಜೊತೆಗೆ ಬಿಗ್ ಬಾಸ್ ಒಟಿಟಿಯ ಟ್ರೋಫಿಯೂ ಸಿಗಲಿದೆ.

ಅತಿಥಿ ಯಾರು?

ಮಾಧ್ಯಮ ವರದಿಗಳ ಪ್ರಕಾರ, ‘ಜವಾನ್’ ಚಿತ್ರದ ಪ್ರಚಾರಕ್ಕಾಗಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಬಿಗ್ ಬಾಸ್ ಫಿನಾಲೆಗೆ ಆಗಮಿಸುತ್ತಾರೆ ಎನ್ನಲಾಗಿದೆ. ಈ ಸುದ್ದಿ ನಿಜವಾಗಿದ್ದರೆ ಸಲ್ಮಾನ್ ಮತ್ತು ಶಾರುಖ್ ಒಟ್ಟಿಗೆ ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ. ಸೆಪ್ಟೆಂಬರ್ 7ರಂದು ‘ಜವಾನ್’ ಸಿನಿಮಾ ಬಿಡುಗಡೆಯಾಗಲಿದೆ. ಆಯುಷ್ಮಾನ್ ಖುರಾನಾ ಮತ್ತು ಅನನ್ಯಾ ಪಾಂಡೆ ಕೂಡ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಡ್ರೀಮ್ ಗರ್ಲ್ 2’ ಚಿತ್ರದ ಪ್ರಚಾರಕ್ಕೆ ಇವರು ಬರಲಿದ್ದಾರೆ.

ಇದನ್ನೂ ಓದಿ: ಅತಿಯಾದ ಕೋಪದ ಕಾರಣಕ್ಕೆ ಬಿಗ್​ ಬಾಸ್​ ನಿರೂಪಣೆಯಿಂದ ಹೊರನಡೆದ್ರಾ ಸಲ್ಮಾನ್​ ಖಾನ್​?

ಯಾರಿಗೆ ಗೆಲ್ಲುವ ಅವಕಾಶವಿದೆ?

ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಗಮನಿಸಿದರೆ ಅಭಿಷೇಕ್ ಮಲ್ಹಾನ್ ಮತ್ತು ಎಲ್ವಿಶ್ ಯಾದವ್ ನಡುವೆ ಪ್ರಬಲ ಸ್ಪರ್ಧೆ ಇದೆ. ಇವರಲ್ಲಿ ಒಬ್ಬರು ಗೆಲ್ಲಬಹುದು ಎಂದು ಊಹಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್